ಒಂದು ವಾರ ಲೋಕಾಯುಕ್ತ ಕಸ್ಟಡಿಗೆ ಕೋಟಿ ಸಂಪತ್ತಿನ ಒಡೆಯ ಅಜಿತ್ ರೈ

ಈ ಹಿಂದೆ ಕೆ.ಆರ್.ಪುರದ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್, ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ‌ ಆರೋಪದಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಕೆಲ ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ.ಆರ್.ಪುರ ತಹಶೀಲ್ದಾರ್ ಆಗಿ ಅಜಿತ್ ಬಂದಿದ್ದರು.‌‌‌.

Written by - Yashaswini V | Last Updated : Jun 30, 2023, 05:44 PM IST
  • ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 28ರಂದು ಲೋಕಾಯುಕ್ತ ನಗರ ವಿಭಾಗದ ಎಸ್ಪಿ ಅಶೋಕ್ ಕೆ‌.ವಿ ನೇತೃತ್ವದ ತಂಡ ಅಜಿತ್ ರೈಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿತ್ತು.
  • ಸಹಕಾರನಗರ, ರಾಮಮೂರ್ತಿನಗರದಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು.
  • ದಾಳಿ ವೇಳೆ ಅಜಿತ್ ರ ಮನೆಯಲ್ಲಿ‌ ಲಕ್ಷಾಂತರ ರೂಪಾಯಿ ಹಣ ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆಯಲಾಗಿತ್ತು.
ಒಂದು ವಾರ ಲೋಕಾಯುಕ್ತ ಕಸ್ಟಡಿಗೆ ಕೋಟಿ ಸಂಪತ್ತಿನ ಒಡೆಯ ಅಜಿತ್ ರೈ  title=

Illegal property gain case: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 6ರವರೆಗೂ ಅಜಿತ್ ರೈ ಲೋಕಾಯುಕ್ತ ವಶಕ್ಕೆ ನೀಡಿ ಇದೀಗ ಕೋರ್ಟ್ ಆದೇಶ‌ ನೀಡಿದೆ. ಸಾಗರದಷ್ಟು ಆಸ್ತಿ ಮಾಡಿರುವ ಈತನಿಗೆ ಇನ್ನು ಮುಂದೆ ಲೋಕಾಯುಕ್ತ ಫುಲ್ ಡ್ರಿಲ್‌ ಮಾಡೋದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದೆ.. 

ಲೋಕಾಯುಕ್ತ ಕಸ್ಟಡಿಗೆ ಕೋಟಿ ಸಂಪತ್ತಿನ ಒಡೆಯ ಅಜಿತ್ ರೈ: 
ಹೌದು, ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತದಿಂದ ಬಂಧನಕ್ಕೊಳಗಾಗಿರುವ ಕೆಆರ್ ಪುರ ತಹಶೀಲ್ದಾರ್ ಹಾಗೂ ಕೆಎಎಸ್ ಅಧಿಕಾರಿ ಅಜಿತ್ ರೈರನ್ನ 7 ದಿನಗಳ ಕಾಲ ಲೋಕಾಯುಕ್ತ ವಶಕ್ಕೆ ನೀಡಿ ನಗರದ 78ನೇ ಸಿಸಿಹೆಚ್ ನ್ಯಾಯಾಲಯ ಆದೇಶಿಸಿದೆ. 

ಇದನ್ನೂ ಓದಿ- ಕರ್ತವ್ಯಕ್ಕೆ ಹೋಗುತ್ತೇನೆಂದು ತೆರಳಿದ ಕಾನ್ಸ್‌ಟೇಬಲ್ 28 ದಿನದಿಂದ ನಾಪತ್ತೆ

ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಜೂನ್ 28ರಂದು ಅಜಿತ್  ರೈಗೆ ಸೇರಿದ ಮನೆ ಹಾಗೂ ಕಚೇರಿ ಸೇರಿದಂತೆ 10 ಕಡೆಗಳಲ್ಲಿ ದಾಳಿ ನಡೆಸಿ ರಾತ್ರಿಯವರೆಗೂ‌ ಪರಿಶೀಲನೆ ಮುಂದುವರೆಸಿದ್ದ ಲೋಕಾಯುಕ್ತ ಪೊಲೀಸರು ಗುರುವಾರ (ಜೂನ್ 29) ಬೆಳಿಗ್ಗೆ ಅವರನ್ನ ವಶಕ್ಕೆ ಪಡೆದಿದ್ದರು. ಇಂದು ಅಜಿತ್ ರೈರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದ ಲೋಕಾಯುಕ್ತ ಪೊಲೀಸರು, ತನಿಖೆಯ ಭಾಗವಾಗಿ ಅವರನ್ನ ಪುತ್ತೂರಿಗೆ ಕರೆದೊಯ್ಯುವ ಅಗತ್ಯವಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ಜುಲೈ 6ರವರೆಗೂ ಅಜಿತ್ ರೈರನ್ನ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ. 

ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 28ರಂದು ಲೋಕಾಯುಕ್ತ ನಗರ ವಿಭಾಗದ ಎಸ್ಪಿ ಅಶೋಕ್ ಕೆ‌.ವಿ ನೇತೃತ್ವದ ತಂಡ ಅಜಿತ್ ರೈಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಸಹಕಾರನಗರ, ರಾಮಮೂರ್ತಿನಗರದಲ್ಲಿರುವ ನಿವಾಸಗಳು ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿತ್ತು. ದಾಳಿ ವೇಳೆ ಅಜಿತ್ ರ ಮನೆಯಲ್ಲಿ‌ ಲಕ್ಷಾಂತರ ರೂಪಾಯಿ ಹಣ  ಮಹತ್ವದ ದಾಖಲಾತಿಗಳನ್ನ ವಶಕ್ಕೆ ಪಡೆಯಲಾಗಿತ್ತು. ಈ ಹಿಂದೆ ಕೆ.ಆರ್.ಪುರದ ತಹಶಿಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಜಿತ್, ರಾಜಕಾಲುವೆ ಒತ್ತುವರಿದಾರರಿಗೆ ಸಹಕಾರ ನೀಡಿ ಹೈಕೋರ್ಟ್ ನಿಂದ ತಡೆಯಾಜ್ಞೆ ತರಲು ನೆರವು ನೀಡಿದ್ದರು ಎಂಬ‌ ಆರೋಪದಡಿ ಅವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು. ಕೆಲ ದಿನಗಳ ಹಿಂದೆ ಅಮಾನತು ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದ್ದರಿಂದ ಮತ್ತೆ ಕೆ.ಆರ್.ಪುರ ತಹಶೀಲ್ದಾರ್ ಆಗಿ ಅಜಿತ್ ಬಂದಿದ್ದರು.‌‌‌.

ಇದನ್ನೂ ಓದಿ- ಕೇರಳ ಮೂಲದ ಉದ್ಯಮಿಯನ್ನು ಹನಿಟ್ರ್ಯಾಪ್‌ಗೆ ಕೆಡವಿದ ಯುವತಿ ಸೇರಿ 8 ಜನರ ಬಂಧನ 

ಕಳೆದ ಒಂದು ವಾರದ ಹಿಂದಷ್ಟೇ ಸ್ಥಳ ತೋರಿಸದೆ ಅಜಿತ್ ರೈರನ್ನ ವರ್ಗಾವಣೆ  ಮಾಡಲಾಗಿತ್ತು.. ನಂತರ ಮನೆಯಲ್ಲಿದ್ದ ಈತನಿಗೆ ಇದೀಗ ಜೀವನ ಪೂರ್ತಿ ಮನೆಯಲ್ಲಿಯೇ ಇರುವಂತೆ ಆಗುತ್ತಾ ಅನ್ನೋದೆ ಇದೀಗ ಪ್ರಶ್ನೆಯಾಗಿದೆ.. ಒಟ್ಟಿನಲ್ಲಿ ಏಳು ದಿನಗಳ ಕಾಲ ಅಜಿತ್ ರೈಗೆ ಫುಲ್ ಡ್ರಿಲ್ ನಡೆಯಲಿದ್ದು, ಏನೆಲ್ಲಾ ಬೆಳವಣಿಗೆ ಆಗಲಿವೆ. ಲೋಕಾ ಡ್ರಿಲ್ ವೇಳೆ ಯಾವೆಲ್ಲಾ ವಿಚಾರಗಳು ಹೊರ ಬೀಳಲಿವೆ ಎಂಬುದನ್ನೂ ಕಾದು ನೋಡಬೇಕಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/38l6m8543Vk?feature=share

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News