13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್‌!

Crime News : 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಿನ ಉರ್ವ ಪೊಲೀಸರು ಬಂಧಿಸಿದ್ದಾರೆ.  

Written by - Savita M B | Last Updated : Sep 5, 2023, 03:01 PM IST
  • ಆರೋಪಿಯನ್ನು ಪೊಲೀಸರು ಮುಂಬೈಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರು.
  • ಈತನ ವಿರುದ್ಧ ಎಲ್.ಪಿ.ಸಿ ವಾರೆಂಟ್ ಜ್ಯಾರಿಯಾಗಿದೆ
  • ಮುಂಬೈಗೆ ತೆರಳಿ ಈತನು ಕೆಲಸ ಮಾಡುವ ಹೊಟೇಲ್ ನಿಂದ ವಶಕ್ಕೆ ಪಡೆದಿದ್ದರು.
13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್‌! title=

Crime : ಆರೋಪಿ ಜಪ್ಪಿನಮೊಗರುವಿನ ಪ್ರೀತಮ್ ಆಚಾರ್ಯ(38) ಬಂಧಿತ ಆರೋಪಿ. ಆರೋಪಿಯನ್ನು ಪೊಲೀಸರು ಮುಂಬೈಯಲ್ಲಿ ವಶಕ್ಕೆ ತೆಗೆದುಕೊಂಡಿದ್ದರು. ಈತನ ವಿರುದ್ಧ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಅ.ಕ್ರ ನಂಬ್ರ 89/2009 ಕಲಂ ಐಪಿಸಿ 403, 406, 408, 409, 415, 417, 420 ಐಪಿಸಿ ದಾಖಲಾಗಿತ್ತು.

ಇದನ್ನೂ ಓದಿ-62 ತಾಲೂಕು ಬರ ಘೋಷಣೆಗೆ ಅರ್ಹ: ಸಂಪುಟ ಉಪ ಸಮಿತಿ ಶಿಫಾರಸ್ಸು

ಈತನು ಪ್ರಕರಣದ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಈತನ ವಿರುದ್ಧ ಎಲ್.ಪಿ.ಸಿ ವಾರೆಂಟ್ ಜ್ಯಾರಿಯಾಗಿದ್ದು, ಈತನು ಹೋಟೆಲ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸದಲ್ಲಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್, ಕಾನೂನು ಸುವ್ಯವಸ್ಥೆ ವಿಭಾಗದ ವೆಸ್ಟ್ ಮುಂಬೈ ಉಪ ಪೊಲೀಸ್ ಆಯುಕ್ತರಾದ ಅಂಶುಕುಮಾರ್, ಅಪರಾಧ ಸಂಚಾರ ವಿಭಾಗದ ಪೊಲೀಸ್ ಉಪ ಆಯುಕ್ತರಾದ ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಕೇಂದ್ರ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರರಾದ ಮಹೇಶ್ ಕುಮಾರ್ ರವರ ಮಾರ್ಗದರ್ಶನದಂತೆ, ಉರ್ವ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ ರವರ ನೇತೃತ್ವದಲ್ಲಿ ಉರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಹರೀಶ್ ಹೆಚ್.ಎ. ಸಹಾಯಕ ಪೊಲೀಸ್ ಉಪ ನಿರೀಕ್ಷಕ ಉಲ್ಲಾಸ್ ಮಹಲೆ, ಎಚ್.ಸಿ-ಸುಧಾಕರ್, ಮಹಿಳಾ ಕಾನ್ ಸ್ಟೇಬಲ್ ಸಫ್ರೀನಾ ವಿಶೇಷ ಕರ್ತವ್ಯದಲ್ಲಿ ಮುಂಬೈಗೆ ತೆರಳಿ ಈತನು ಕೆಲಸ ಮಾಡುವ ಹೊಟೇಲ್ ನಿಂದ ವಶಕ್ಕೆ ಪಡೆದಿದ್ದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ-ಕನ್ನಡ ಕಲಿಕಾ‌‌ ಕೇಂದ್ರ‌ ಸ್ಥಾಪನೆಗೆ ಶೀಘ್ರ ಕ್ರಮ- ಸಚಿವ ಶಿವರಾಜ್ ತಂಗಡಗಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News