ಮ್ಯೂಸಿಕ್ ನಿಲ್ಲಿಸುವಂತೆ ಹೇಳಿದ ಗರ್ಭಿಣಿ ಮಹಿಳೆ ಮೇಲೆ ಗುಂಡಿನ ದಾಳಿ, ಆಸ್ಪತ್ರೆಯಲ್ಲಿ ಸಾವು 

ದೆಹಲಿಯ ಸಿರಾಸ್‌ಪುರದಲ್ಲಿ ಗರ್ಭಪಾತಕ್ಕೆ ಒಳಗಾಗಿದ್ದ 30 ವರ್ಷದ ಮಹಿಳೆಯೊಬ್ಬರು ಮೇಲೆ ನೆರೆಹೊರೆಯ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದರಿಂದಾಗಿ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

Written by - Zee Kannada News Desk | Last Updated : Apr 9, 2023, 08:31 PM IST
  • ಏಪ್ರಿಲ್ 3 ರಂದು ಸಿರಸ್‌ಪುರದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಪಿಸಿಆರ್ ಕರೆ ಬಂದಿದೆ.
  • ಸ್ಥಳಕ್ಕಾಗಮಿಸಿದ ಬಳಿಕ ರಂಜು ಅವರನ್ನು ಶಾಲಿಮಾರ್‌ ಬಾಗ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು
  • ಆಕೆಯ ಕುತ್ತಿಗೆಗೆ ಗುಂಡೇಟಿನಿಂದ ಗಾಯವಾಗಿದೆ ಮತ್ತು ಹೇಳಿಕೆ ನೀಡಲು ಅನರ್ಹಳು ಎಂದು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ
ಮ್ಯೂಸಿಕ್ ನಿಲ್ಲಿಸುವಂತೆ ಹೇಳಿದ ಗರ್ಭಿಣಿ ಮಹಿಳೆ ಮೇಲೆ ಗುಂಡಿನ ದಾಳಿ, ಆಸ್ಪತ್ರೆಯಲ್ಲಿ ಸಾವು  title=
ಸಾಂದರ್ಭಿಕ ಚಿತ್ರ

ನವದೆಹಲಿ: ದೆಹಲಿಯ ಸಿರಾಸ್‌ಪುರದಲ್ಲಿ ಗರ್ಭಪಾತಕ್ಕೆ ಒಳಗಾಗಿದ್ದ 30 ವರ್ಷದ ಮಹಿಳೆಯೊಬ್ಬರು ಮೇಲೆ ನೆರೆಹೊರೆಯ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದರಿಂದಾಗಿ ನಗರದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಏಪ್ರಿಲ್ 3 ರಂದು ತನ್ನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಜೋರಾಗಿ ಸಂಗೀತ ನುಡಿಸುವುದನ್ನು ವಿರೋಧಿಸಿದ ನಂತರ ರಂಜುಗೆ ನೆರೆಹೊರೆಯ ಹರೀಶ್ ಎನ್ನುವವ ಗುಂಡು ಹಾರಿಸಿದ್ದಾನೆ ಎಂದು ತಿಳಿದು ಬಂದಿದೆ.ಮಹಿಳೆಯ ಸ್ಥಿತಿ ಚಿಂತಾಜನಕವಾಗಿತ್ತು ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಶನಿವಾರ ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆಕೆಯ ಸಾವಿನ ನಂತರ ಪೊಲೀಸರು ಸೆಕ್ಷನ್ 302 ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.ಹರೀಶ್ ಮತ್ತು ಆತನ ಸ್ನೇಹಿತ ಅಮಿತ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಮುಂದಿನ ಸಿಎಂ ಆಗ್ತಾರಾ ಮಲ್ಲಿಕಾರ್ಜುನ್ ಖರ್ಗೆ...? ಶಶಿತರೂರ್ ಹೇಳಿದ್ದೇನು ?

ಏಪ್ರಿಲ್ 3 ರಂದು ಸಿರಸ್‌ಪುರದಲ್ಲಿ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಪಿಸಿಆರ್ ಕರೆ ಬಂದಿದೆ.ಸ್ಥಳಕ್ಕಾಗಮಿಸಿದ ಬಳಿಕ ರಂಜು ಅವರನ್ನು ಶಾಲಿಮಾರ್‌ ಬಾಗ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಕುತ್ತಿಗೆಗೆ ಗುಂಡೇಟಿನಿಂದ ಗಾಯವಾಗಿದೆ ಮತ್ತು ಹೇಳಿಕೆ ನೀಡಲು ಅನರ್ಹಳು ಎಂದು ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಹೊರ ಉತ್ತರ) ರವಿಕುಮಾರ್ ಸಿಂಗ್ ಹೇಳಿದ್ದಾರೆ.ಆಕೆಗೆ ಗರ್ಭಪಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ನಂತರ ಹೇಳಿದ್ದಾರೆ.

ಪ್ರತ್ಯಕ್ಷದರ್ಶಿ ಹೇಳಿಕೆಯ ಪ್ರಕಾರ, ಡೆಲಿವರಿ ಪರ್ಸನ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ತನ್ನ ಮಗನಿಗಾಗಿ ಡಿಜೆ ನುಡಿಸುವ 'ಕುವಾನ್ ಪೂಜೆ' ಸಮಾರಂಭವನ್ನು ಆಯೋಜಿಸಿದ್ದರು.ಕಾರ್ಯಕ್ರಮದ ಸಮಯದಲ್ಲಿ,ರಂಜು ತನ್ನ ಬಾಲ್ಕನಿಯಲ್ಲಿ ಹೊರಬಂದು ಬೀದಿಯಲ್ಲಿ ವಾಸಿಸುತ್ತಿದ್ದ ಹರೀಶ್‌ಗೆ ಸಂಗೀತವನ್ನು ನಿಲ್ಲಿಸುವಂತೆ ಕೇಳಿದಳು.ಅದನ್ನು ಅನುಸರಿಸಿ ಹರೀಶ್ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮಿತ್ ಎಂಬಾತನಿಂದ ಗನ್ ತೆಗೆದುಕೊಂಡು ಆಕೆಯ ಮೇಲೆ ಗುಂಡು ಹಾರಿಸಿದ್ದು, ಆಗ ರಂಜುಗೆ ಗುಂಡು ತಗುಲಿದೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ: ರಂಭಾಪುರಿ ಶ್ರೀಗಳು ಅಪಾಯದಿಂದ ಪಾರು!

ಈಗ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ) ಮತ್ತು 34 (ಸಾಮಾನ್ಯ ಉದ್ದೇಶ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ.ಬಿಹಾರ ಮೂಲದ ಕುಟುಂಬ ಇಲ್ಲಿ ಬಾಡಿಗೆಗೆ ವಾಸವಿತ್ತು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News