Prabuddha murder case: ಕೇವಲ 2 ಸಾವಿರಕ್ಕಾಗಿ ಪ್ರಬುದ್ಧಾ ಕೊಲೆ; 16 ವರ್ಷದ ಬಾಲಕನ ಬಂಧನ!

BBA student Prabuddha murder case: ಮೇ 15ರಂದು ಪ್ರಬುದ್ಧಾಳ ಮನೆಗೆ ಹೋಗಿದ್ದ ಬಾಲಕ, ʼಅಕ್ಕ, ನನ್ನಿಂದ ತಪ್ಪಾಗಿದೆ ಅಂತಾ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದನಂತೆ. ಆದರೆ ತನ್ನ 2 ಸಾವಿರ ರೂ. ವಾಪಸ್‌ ಕೊಡುವಂತೆ ಪ್ರಬುದ್ಧಾ ಕೇಳಿದ್ದಳಂತೆ. ಆದರೆ ಈಗ ನನ್ನ ಬಳಿ ಹಣವಿಲ್ಲ, ಶೀಘ್ರವೇ ಹಣ ನೀಡುತ್ತೇನೆ ಅಂತಾ ಬಾಲಕ ಹೇಳಿದ್ದನಂತೆ.

Written by - Puttaraj K Alur | Last Updated : May 25, 2024, 03:01 PM IST
  • ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ ಕೊಲೆ ಪ್ರಕರಣ ಭೇದಿಸಿದ ಸುಬ್ರಮಣ್ಯಪುರ ಠಾಣೆ ಪೊಲೀಸರು
  • ಕೇವಲ 2 ಸಾವಿರ ರೂ.ಗೆ ಪ್ರಬುದ್ಧಾಳನ್ನು ಕೊಲೆಗೈದು ಎಸ್ಕೇಪ್‌ ಆಗಿದ್ದ ಆರೋಪಿಯ ಬಂಧನ
  • ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ 16 ವರ್ಷದ ಬಾಲಕನ ಬಂಧನ
Prabuddha murder case: ಕೇವಲ 2 ಸಾವಿರಕ್ಕಾಗಿ ಪ್ರಬುದ್ಧಾ ಕೊಲೆ; 16 ವರ್ಷದ ಬಾಲಕನ ಬಂಧನ! title=
16 ವರ್ಷದ ಬಾಲಕನ ಬಂಧನ

BBA student Prabuddha murder case: ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ (20) ಕೊಲೆ ಪ್ರಕರಣವನ್ನು ಬೆಂಗಳೂರಿನ ಸುಬ್ರಮಣ್ಯಪುರ ಠಾಣೆ ಪೊಲೀಸರು ಭೇದಿಸಿದ್ದಾರೆ. ಪ್ರಬುದ್ಧಾಳನ್ನು ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ಆಕೆಯ ತಮ್ಮನ ಸ್ನೇಹಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಪದ್ಮನಾಭನಗರದ ಬೃಂದಾವನ ಲೇಔಟ್‌ನಲ್ಲಿರುವ ಮನೆಯಲ್ಲಿ ಬಿಬಿಎ ವಿದ್ಯಾರ್ಥಿನಿ ಪ್ರಬುದ್ಧಾ ಸಾವನ್ನಪ್ಪಿದ್ದರು. ತಮ್ಮ ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ತಾಯಿ, ಇದು ಆತ್ಮಹತ್ಯೆಯಲ್ಲ, ಯಾರೋ ಕೊಲೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು, ಸಿಸಿ ಟಿವಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಬಾಲಕನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: World War-3: ಈ ದಿನಾಂಕದಂದೇ ನಡೆಯುತ್ತೆ World War-3...! ಭಯಾನಕ ಭವಿಷ್ಯ ನುಡಿದ ಭಾರತೀಯ ಜೋತಿಷ್ಯಿ

ಆರೋಪಿ ಬಾಲಕ ಪ್ರಬುದ್ಧಾಳ ಸ್ನೇಹಿತ. ಆಗಾಗ ಅವರ ಮನೆಗೆ ಹೋಗುತ್ತಿದ್ದ. ಪ್ರಬುದ್ಧಾಳ ಪರ್ಸ್‌ನಿಂದ ಆತ 2 ಸಾವಿರ ರೂ. ಕಳ್ಳತನ ಮಾಡಿದ್ದ. ಇದು ಗೊತ್ತಾಗಿ ಹಣ ವಾಪಸು ನೀಡುವಂತೆ ಪ್ರಬುದ್ಧಾ ಒತ್ತಾಯಿಸಿದ್ದಳು. ಇದೇ ಕಾರಣಕ್ಕೆ ಬಾಲಕ ಪ್ರಬುದ್ಧಾಳನ್ನು ಕೊಲೆ ಮಾಡಿದ್ದಾನೆಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. 

ಈ ಪ್ರಕರಣದ ಬಗ್ಗೆ ಮಾತನಾಡಿರುವ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಜಗಲಾಸರ, ʼಪ್ರಬುದ್ಧಾಳ ತಮ್ಮನ ಸ್ನೇಹಿತನಾಗಿರುವ ಬಾಲಕನೇ ಆರೋಪಿ ಎಂಬುದು ಗೊತ್ತಾಗಿದೆ. ಇದಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ಸಂಗ್ರಹಿಸಿ ಬಾಲಕನ್ನು ವಶಕ್ಕೆ ಪಡೆಯಲಾಗಿದೆ. ಬಾಲಕ ಆಗಿರುವುದರಿಂದ ಈತನನ್ನು ಬಾಲ ನ್ಯಾಯ ಮಂಡಳಿ ಎದುರು ಹಾಜರುಪಡಿಸಿ ಮುಂದಿನ ಕ್ರಮ ಜರುಗಿಸಲಾಗುವುದು' ಅಂತಾ ತಿಳಿಸಿದ್ದಾರೆ.

ಇದನ್ನೂ ಓದಿ: 16 ವರ್ಷ ಬಾಲಕಿ ಕಾಮ್ಯಾ ಮೌಂಟ್‌ ಎವರೆಸ್ಟ್‌ ಶಿಖರ ಏರಿ ಸಾಧನೆ, ಅತಿ ಕಿರಿಯ ಭಾರತೀಯ ಎಂಬ ದಾಖಲೆ

ಮೇ 15ರಂದು ಪ್ರಬುದ್ಧಾಳ ಮನೆಗೆ ಹೋಗಿದ್ದ ಬಾಲಕ, ʼಅಕ್ಕ, ನನ್ನಿಂದ ತಪ್ಪಾಗಿದೆ ಅಂತಾ ಕಾಲಿಗೆ ಬಿದ್ದು ಕ್ಷಮೆ ಕೋರಿದ್ದನಂತೆ. ಆದರೆ ತನ್ನ ೨ ಸಾವಿರ ರೂ. ವಾಪಸ್‌ ಕೊಡುವಂತೆ ಪ್ರಬುದ್ಧಾ ಕೇಳಿದ್ದಳಂತೆ. ಆದರೆ ಈಗ ನನ್ನ ಬಳಿ ಹಣವಿಲ್ಲ, ಶೀಘ್ರವೇ ಹಣ ನೀಡುತ್ತೇನೆ ಅಂತಾ ಬಾಲಕ ಹೇಳಿದ್ದನಂತೆ. ಇದೇ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು. ಈ ವೇಳೆ ಪ್ರಬುದ್ಧಾಳನ್ನು ಕಾಲು ಎಳೆದು ಬೀಳಿಸಿದ್ದನಂತೆ. ತಲೆಗೆ ತೀವ್ರ ಪೆಟ್ಟಾಗಿ ಪ್ರಬುದ್ಧಾ ಪ್ರಜ್ಞೆ ಕಳೆದುಕೊಂಡಿದ್ದಳಂತೆ.

ಈ ವೇಳೆ ಬ್ಲೇಡ್‌ನಿಂದ ಕೈ ಮತ್ತು ಕತ್ತಿನ ಭಾಗಕ್ಕೆ ಕೊಯ್ದು ಆರೋಪಿ ಕೊಲೆ ಮಾಡಿದ್ದ. ಬಳಿಕ ಆಕೆಯ ಮೃತದೇಹವನ್ನು ಸ್ನಾನದ ಕೊಠಡಿಯಲ್ಲಿರಿಸಿ ಎಸ್ಕೇಪ್‌ ಆಗಿದ್ದ. ಪ್ರಬುದ್ಧಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಬಿಂಬಿಸುವುದು ಬಾಲಕನ ಉದ್ದೇಶವಾಗಿತ್ತು. ಆದರೆ ತಮ್ಮ ಮಗಳ ಸಾವಿನ ಬಗ್ಗೆ ಪ್ರಬುದ್ಧಾಳ ತಾಯಿ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಆರಂಭದಲ್ಲಿ ಆತ್ಮಹತ್ಯೆಯೇ ಇರಬಹುದು ಎಂದು ಶಂಕಿಸಿದ್ದ ಪೊಲೀಸರು ನಂತರ ತನಿಖೆ ನಡೆಸಿದಾಗ ಕೊಲೆಯಾಗಿರುವುದು ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News