NEET Results 2023: ನೀಟ್ ಯುಜಿ ಪರೀಕ್ಷೆ 2023ರ ಫಲಿತಾಂಶ ಪ್ರಕಟ, ಇಲ್ಲಿ ಕ್ಲಿಕ್ಕಿಸಿ ಫಲಿತಾಂಶ ಪರಿಶೀಲಿಸಿ

NEET UG Results 2023: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು NEET UG ಪರೀಕ್ಷೆ 2023 ರ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು.  

Written by - Nitin Tabib | Last Updated : Jun 13, 2023, 10:39 PM IST
  • ಫಲಿತಾಂಶವನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಈ ವಿವರಗಳು ಬೇಕಾಗುತ್ತವೆ.
  • ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ. ಇವುಗಳನ್ನು ಹಾಕುವ ಮೂಲಕ, ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.
  • ಅವುಗಳನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿ ಮತ್ತು ನೀವು ಬಯಸಿದರೆ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು.
NEET Results 2023: ನೀಟ್ ಯುಜಿ ಪರೀಕ್ಷೆ 2023ರ ಫಲಿತಾಂಶ ಪ್ರಕಟ, ಇಲ್ಲಿ ಕ್ಲಿಕ್ಕಿಸಿ ಫಲಿತಾಂಶ ಪರಿಶೀಲಿಸಿ title=

NEET UG Results 2023 Announced: NTA ಯು NEET UG ಪರೀಕ್ಷೆ 2023 ರ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಈ ವರ್ಷದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ 2023 ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಇದನ್ನು ಮಾಡಲು, ನೀವು  neet.nta.nic.in, ntaresults.nic.in. ಈ ಎರಡು ವೆಬ್‌ಸೈಟ್‌ಗಳಲ್ಲಿ ಯಾವುದಾದರೂ ಒಂದನ್ನು ಭೇಟಿ ಮಾಡಬಹುದು. ಫಲಿತಾಂಶದ ಜೊತೆಗೆ, NTA ಟಾಪರ್‌ಗಳ ಹೆಸರುಗಳು, ಅಂಕಗಳು, ವರ್ಗವಾರು ಕಟ್-ಆಫ್ ಅಂಕಗಳು ಇತ್ಯಾದಿಗಳನ್ನು ಸಹ ಬಿಡುಗಡೆ ಮಾಡಿದೆ.

ತಮಿಳುನಾಡಿನ ಪ್ರಬಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಅವರು ನೀಟ್ ಪರೀಕ್ಷೆಯಲ್ಲಿ ಶೇ. 99.99 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ ಎಂದು ಎನ್‌ಟಿಎ ಮಾಹಿತಿ ನೀಡಿದೆ. ಪರೀಕ್ಷೆಯಲ್ಲಿ ಒಟ್ಟು 20.38 ಲಕ್ಷ ಅಭ್ಯರ್ಥಿಗಳ ಪೈಕಿ 11.45 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 1.39 ಲಕ್ಷ, ಮಹಾರಾಷ್ಟ್ರದಲ್ಲಿ 1.31 ಲಕ್ಷ ಮತ್ತು ರಾಜಸ್ಥಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರವು ದೇಶದ ಎರಡು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಾಗಿದ್ದು, ಜನಸಂಖ್ಯೆಯ ದೃಷ್ಟಿಯಿಂದ ರಾಜಸ್ಥಾನ ಕೂಡ ಮೊದಲ ಹತ್ತು ರಾಜ್ಯಗಳಲ್ಲಿ ಬರುತ್ತದೆ.

ವರುಣ್ ಬೋರಾ ಅಗ್ರಸ್ಥಾನ ಪಡೆದುಕೊಂಡಿದ್ದಾರೆ
ಆಂಧ್ರಪ್ರದೇಶದ ವರುಣ್ ಬೋರಾ NEET UG 2023 ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ವರುಣ್ ಶಾಲಾ ದಿನಗಳಿಂದಲೂ ಟಾಪರ್ ಆಗಿದ್ದು, ಆತನ ಸಾಧನೆಯಿಂದ ಕುಟುಂಬವಷ್ಟೇ ಅಲ್ಲ, ಶಿಕ್ಷಕರು, ಶಾಲಾ ಮಕ್ಕಳು ಸೇರಿದಂತೆ ಇಡೀ ಆಂಧ್ರಪ್ರದೇಶವೇ ಸಂತಸ ವ್ಯಕ್ತಪಡಿಸಿದೆ.

ಈ ದಿನಾಂಕದಂದು ಪರೀಕ್ಷೆ ನಡೆದಿತ್ತು
ಮಣಿಪುರವನ್ನು ಹೊರತುಪಡಿಸಿ, NEET UG ಪರೀಕ್ಷೆ 2023 ಅನ್ನು ಮೇ 7 ರಂದು ಆಯೋಜಿಸಲಾಗಿತ್ತು. ಮಣಿಪುರದ ಹಿಂಸಾಚಾರದ ಕಾರಣ, ಜೂನ್ 6 ರಂದು 11 ನಗರಗಳಲ್ಲಿ 8,753 ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ತಾತ್ಕಾಲಿಕ ಆನ್ಸರ್ ಕೀಯನ್ನೂ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಅಭ್ಯರ್ಥಿಗಳ ಒಎಂಆರ್ ಪ್ರತಿ ಮತ್ತು ದಾಖಲಾದ ಪ್ರತಿಕ್ರಿಯೆ ಪತ್ರವನ್ನೂ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ-Modi Government: ಸರ್ಕಾರಿ ನೌಕರರನ್ನು ಒತ್ತಡ ಮುಕ್ತವಾಗಿರಿಸಲು ಆಶ್ಚರ್ಯಕರ ನಿರ್ಧಾರ ಕೈಗೊಂಡ ಕೇಂದ್ರ ಸರ್ಕಾರ

ಫಲಿತಾಂಶ ಪರಿಶೀಲಿಸಲು ಈ ವಿವರಗಳು ಬೇಕು
ಫಲಿತಾಂಶವನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಈ ವಿವರಗಳು ಬೇಕಾಗುತ್ತವೆ. ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ. ಇವುಗಳನ್ನು ಹಾಕುವ ಮೂಲಕ, ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು. ಫಲಿತಾಂಶದಲ್ಲಿ ಮೀಸಲಾತಿ ಕುರಿತು ಹೇಳುವುದಾದರೆ, ಪ್ರತಿ ಕೋರ್ಸ್‌ನಲ್ಲಿ ಎಸ್‌ಸಿ ವರ್ಗಕ್ಕೆ ಶೇ.15 ಮೀಸಲಾತಿ ಸಿಗುತ್ತದೆ. ಶೇ. 7.5 ರಷ್ಟು ಎಸ್ಟಿ ವರ್ಗಕ್ಕೆ ಮತ್ತು ಶೇ. 5 ರಷ್ಟು PWD ಅಭ್ಯರ್ಥಿಗಳಿಗೆ ಮೀಸಲಾಗಿವೆ.

ಇದನ್ನೂ ಓದಿ-Biparjoy Update: ಭಾರಿ ವಿನಾಶ ಸೃಷ್ಟಿಸಲಿದೆ ಬಿಪರ್ ಜಾಯ್, ಗಂಟೆಗೆ 150 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ!

ಫಲಿತಾಂಶವನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ
>> ಫಲಿತಾಂಶವನ್ನು ಪರಿಶೀಲಿಸಲು, ಮೊದಲು ಅಧಿಕೃತ ವೆಬ್‌ಸೈಟ್ ಅಂದರೆ neet.nta.nic.in ಗೆ ಹೋಗಿ.
>> ಬಳಿಕ ಅಲ್ಲಿ ಹೋಮ್ ಪೇಜ್ ನಲ್ಲಿ  NEET UG 2023 ಫಲಿತಾಂಶದ ಹೆಸರಿನ ಲಿಂಕ್ ಅನ್ನು ನೀಡಲಾಗಿರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
>> ಇದರಿಂದ ನಿಮ್ಮ ಮುಂದೆ ಹೊಸ ಪುಟ ತೆರೆದುಕೊಳ್ಳುತ್ತದೆ. ಈ ಪುಟದಲ್ಲಿ ನೀವು ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು.
>> ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ ಮೇಲೆ ಕ್ಲಿಕ್ಕಿಸಬೇಕು. ಇದರಿಂದ ಫಲಿತಾಂಶಗಳು ನಿಮ್ಮ ಕಂಪ್ಯೂಟರ್ ಪರದೆಯಲ್ಲಿ ಗೋಚರಿಸುತ್ತವೆ.
>> ಅವುಗಳನ್ನು ಪರಿಶೀಲಿಸಿ, ಡೌನ್‌ಲೋಡ್ ಮಾಡಿ ಮತ್ತು ನೀವು ಬಯಸಿದರೆ ಪ್ರಿಂಟ್ ಔಟ್ ಕೂಡ ತೆಗೆದುಕೊಳ್ಳಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News