ಏನಿದು ಧೈ ಅಖರ್ ಪತ್ರ ಬರವಣಿಗೆ ಅಭಿಯಾನ?

Written by - Zee Kannada News Desk | Last Updated : Jul 23, 2022, 12:35 AM IST
  • ಅಂತರದೇಶಿ ಪತ್ರಗಳು, ಲಕೋಟೆಗಳನ್ನು ಸಂಬಂಧಪಟ್ಟ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಂಚೆ ಅಧೀಕ್ಷಕರು, ಅಂಚೆ ಅಧೀಕ್ಷಕರಿಗೆ ತಿಳಿಸಬೇಕು.
ಏನಿದು ಧೈ ಅಖರ್ ಪತ್ರ ಬರವಣಿಗೆ ಅಭಿಯಾನ? title=

ಕರ್ನಾಟಕ ಅಂಚೆ ವೃತ್ತವು ಕರ್ನಾಟಕ ರಾಜ್ಯದಲ್ಲಿ ನೆಲೆಸಿರುವ ನಾಗರಿಕರಿಂದ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ರಾಷ್ಟ್ರ ಮಟ್ಟದ ಧೈ-ಅಖರ್ ಪತ್ರ ಬರವಣಿಗೆ ಅಭಿಯಾನವನ್ನು ಆರಂಭಿಸಿದ್ದು, ಅಭಿಯಾನದಲ್ಲಿ ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.

ಈ ಪತ್ರ ಬರವಣಿಗೆಯ ಅಭಿಯಾನವು ‘ದೃಷ್ಟಿಕೋನ-2047’ ವಿಷಯದ ಅಡಿಯಲ್ಲಿ 2047 ರಲ್ಲಿ ಭಾರತದ ದೃಷ್ಟಿಕೋನ ಪತ್ರವನ್ನು ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಬರೆಯಬಹುದು. 18 ವರ್ಷದೊಳಗೆ ಮತ್ತು 18 ವರ್ಷ ಮೇಲ್ಪಟ್ಟವರು ಎಂದು 2 ವಿಭಾಗಗಳನ್ನು ಮಾಡಲಾಗಿದ್ದು, ವಿದ್ಯಾರ್ಥಿಗಳು ಅಂತರದೇಶಿ ಪತ್ರ ವರ್ಗ, ಅಂಚೆ ಲಕೋಟೆ ವರ್ಗದ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: ದಿವಂಗತ ಸಂಚಾರಿ ವಿಜಯ್‌ ಸಿನಿಮಾಗೆ ಮತ್ತೊಂದು ರಾಷ್ಟ್ರಪಶಸ್ತಿ..!

ಅಂತರದೇಶಿ ಪತ್ರಗಳು, ಲಕೋಟೆಗಳನ್ನು ಸಂಬಂಧಪಟ್ಟ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಂಚೆ ಅಧೀಕ್ಷಕರು, ಅಂಚೆ ಅಧೀಕ್ಷಕರಿಗೆ ತಿಳಿಸಬೇಕು.

https://karnatakapost.gov.in ನಲ್ಲಿ ಸಂಬಂಧಪಟ್ಟ ವಿಭಾಗದ ಅಂಚೆ ಕಚೇರಿಗಳ ಹಿರಿಯ ಅಂಚೆ ಅಧೀಕ್ಷಕರು, ಅಂಚೆ ಅಧೀಕ್ಷಕರ ಪಟ್ಟಿ ಲಭ್ಯವಿದೆ.ಅಂತರದೇಶಿ ಪತ್ರಗಳು/ಲಕೋಟೆಗಳನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಕರ್ನಾಟಕದ ಎಲ್ಲ ಶಾಲೆ-ಕಾಲೇಜುಗಳು ತಮ್ಮ ವಿದ್ಯಾರ್ಥಿಗಳನ್ನು ಅಭಿಯಾನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು.

ವೃತ್ತ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.25,000/-, ದ್ವಿತೀಯ ಬಹುಮಾನ ರೂ.10,000/-, ತೃತೀಯ ಬಹುಮಾನ ರೂ.5000/- ನೀಡಲಾಗುವುದು. ರಾಷ್ಟ್ರ ಮಟ್ಟದಲ್ಲಿ ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ ರೂ.50,000/-, ದ್ವಿತೀಯ ಬಹುಮಾನ ರೂ.25,000/-, ತೃತೀಯ ಬಹುಮಾನ ರೂ.10,000/- ನೀಡಲಾಗುವುದು.

ಹೆಚ್ಚಿನ ವಿವರಗಳಿಗಾಗಿ www.karnatakapost.gov.in ಭೇಟಿ ನೀಡಿ ಮಾಹಿತಿ ಪಡೆಯಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News