SSLC Exam TimeTable 2024: SSLC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ, PDF ಫೈಲ್ ಡೌನ್‌ಲೋಡ್ ಮಾಡಿ

Karnataka SSLC Exam Timetable 2024: ವೇಳಾಪಟ್ಟಿ ಪ್ರಕಾರ, ಪರೀಕ್ಷೆಗಳು 2024ರ ಮಾರ್ಚ್ 2 ರಿಂದ 22ರವರೆಗೆ ನಡೆಯಲಿದೆ. 2 ಗಂಟೆ 15 ನಿಮಿಷಗಳ ಕಾಲ (ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ವರೆಗೆ) ಪರೀಕ್ಷೆಗಳು ನಡೆಯಲಿವೆ. ​

Written by - Puttaraj K Alur | Last Updated : Dec 2, 2023, 01:31 PM IST
  • ಕರ್ನಾಟಕ SSLC ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆಯಾಗಿದೆ
  • ಕರ್ನಾಟಕ ಶಾಲಾ ಪರೀಕ್ಷೆ & ಮೌಲ್ಯಮಾಪನ ಮಂಡಳಿ(KSEAB)ಯಿಂದ ಬಿಡುಗಡೆ
  • 2024ರ ಮಾರ್ಚ್ 2 ರಿಂದ 22ರವರೆಗೆ ನಡೆಯಲಿರುವ SSLC ಪರೀಕ್ಷೆಗಳು
SSLC Exam TimeTable 2024: SSLC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ, PDF ಫೈಲ್ ಡೌನ್‌ಲೋಡ್ ಮಾಡಿ title=
SSLC ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

Karnataka SSLC Exam Time Table 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ(KSEAB)ಯು 10ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮುಂಬರುವ ಬೋರ್ಡ್ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳಲಿರುವ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ kseab.karnataka.gov.in.ನಲ್ಲಿ ದಿನಾಂಕದ ಫೈಲ್‍ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಂಪೂರ್ಣ ಪರೀಕ್ಷೆಯ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳು ಇಲ್ಲಿ ಪರಿಶೀಲಿಸಬಹುದು.

ಕರ್ನಾಟಕ SSLC ಪರೀಕ್ಷಾ ವೇಳಾಪಟ್ಟಿ 2024ರ ಪ್ರಕಾರ, ಪರೀಕ್ಷೆಗಳು 2024ರ ಮಾರ್ಚ್ 2 ರಿಂದ 22ರವರೆಗೆ ನಡೆಯಲಿದೆ. 2 ಗಂಟೆ 15 ನಿಮಿಷಗಳ ಕಾಲ (ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30 ವರೆಗೆ) ಪರೀಕ್ಷೆಗಳು ನಡೆಯಲಿವೆ. SSLC ವೇಳಾಪಟ್ಟಿಯಲ್ಲಿ ವಿಷಯದ ಕೋಡ್, ಪರೀಕ್ಷಾ ಅವಧಿ ಮತ್ತು ವಿಷಯಕ್ಕೆ ನಿಗದಿಪಡಿಸಿದ ಗರಿಷ್ಠ ಅಂಕಗಳ ಮಾಹಿತಿಯನ್ನು ಸಹ ನೀಡಲಾಗಿದೆ.

ಕರ್ನಾಟಕ SSLC ಪರೀಕ್ಷಾ ವೇಳಾಪಟ್ಟಿ 2024

ವಿಷಯ ಪರೀಕ್ಷೆಯ ದಿನಾಂಕ
ಕನ್ನಡ, ಅರೇಬಿಕ್ ಮಾರ್ಚ್ 2, 2024
ಇತಿಹಾಸ, ಭೌತಶಾಸ್ತ್ರ ಮಾರ್ಚ್ 4, 2024
ಮಾಹಿತಿ ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ(Retail), ಆಟೋಮೊಬೈಲ್, ಆರೋಗ್ಯ, Beauty and Wellness ಮಾರ್ಚ್ 5, 2024
ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ಮಾರ್ಚ್ 6, 2024
ಹಿಂದಿ ಮಾರ್ಚ್ 7, 2024
ರಾಜಕೀಯ ವಿಜ್ಞಾನ, Statistics ಮಾರ್ಚ್ 9, 2024

ಇಂಗ್ಲಿಷ್

ಮಾರ್ಚ್ 11, 2024
Languages ಮಾರ್ಚ್ 12, 2024
ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ ಮಾರ್ಚ್ 13, 2024
ಗಣಿತ, ಶಿಕ್ಷಣ ಮಾರ್ಚ್ 14, 2024
ಭೂಗೋಳ, ಜೀವಶಾಸ್ತ್ರ ಮಾರ್ಚ್ 16, 2024
ಸಂಗೀತ, ಮನೋವಿಜ್ಞಾನ, ರಸಾಯನಶಾಸ್ತ್ರ, ಮೂಲ ಗಣಿತ ಮಾರ್ಚ್ 18, 2024
ಲೆಕ್ಕಶಾಸ್ತ್ರ, ಭೂವಿಜ್ಞಾನ, ಗೃಹ ವಿಜ್ಞಾನ, ಐಚ್ಛಿಕ ಕನ್ನಡ ಮಾರ್ಚ್ 20, 2024
ಅರ್ಥಶಾಸ್ತ್ರ ಮಾರ್ಚ್ 22, 2024

SSLC ಪರೀಕ್ಷಾ ವೇಳಾಪಟ್ಟಿ ಡೌನ್‍ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

2nd ಪಿಯುಸಿ ಟೈಮ್ ಟೇಬಲ್ ಬಿಡುಗಡೆ!

ಏತನ್ಮಧ್ಯೆ, ಮಂಡಳಿಯು ಕರ್ನಾಟಕ 2024ರ 2nd ಪಿಯುಸಿ ಪರೀಕ್ಷೆಗಳ ದಿನಾಂಕಗಳನ್ನು ಸಹ ಪ್ರಕಟಿಸಿದೆ. ಮಾರ್ಚ್ 2ರಿಂದ ಮಾರ್ಚ್ 22ರವರೆಗೆ ಈ ಪರೀಕ್ಷೆಗಳು ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News