10 ನೇ ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಬಂಪರ್ ಉದ್ಯೋಗವಕಾಶ ! ಇಂದೇ ಅರ್ಜಿ ಸಲ್ಲಿಸಿ

Railway Recruitment Cell:10 ನೇ  ತರಗತಿ ಪಾಸಾದವರಿಗೆ  ಭಾರತೀಯ ರೈಲ್ವೆಯಲ್ಲಿ ಉದ್ಯೋಗಾವಕಾಶ ಒದಗಿ ಬಂದಿದೆ.   

Written by - Ranjitha R K | Last Updated : Sep 12, 2024, 03:53 PM IST
  • RRC ER ನೇಮಕಾತಿ 2024: ಅರ್ಹತಾ ಮಾನದಂಡ
  • ವಯಸ್ಸು ಕನಿಷ್ಠ 15 ವರ್ಷಗಳು ಗರಿಷ್ಠ 24 ವರ್ಷಗಳಾಗಿರಬೇಕು.
  • RRC ER ನೇಮಕಾತಿ 2024: ಹುದ್ದೆಯ ವಿವರಗಳು
10 ನೇ  ತರಗತಿ ಪಾಸಾದವರಿಗೆ ರೈಲ್ವೆಯಲ್ಲಿ ಬಂಪರ್ ಉದ್ಯೋಗವಕಾಶ ! ಇಂದೇ ಅರ್ಜಿ ಸಲ್ಲಿಸಿ  title=

Railway Recruitment Cell : ರೈಲ್ವೇ ನೇಮಕಾತಿ ಸೆಲ್ (RRC), ಪೂರ್ವ ರೈಲ್ವೆ (ER), ಅಪ್ರೆಂಟಿಸ್ ಆಕ್ಟ್, 1961 ಮತ್ತು ಅಪ್ರೆಂಟಿಸ್‌ಶಿಪ್ ನಿಯಮಗಳು, 1992 ರ ಅಡಿಯಲ್ಲಿ ಪೂರ್ವ ರೈಲ್ವೆಯ  ವರ್ಕ್ ಶಾಪ್ ಮತ್ತು ಡಿವಿಜನ್ ಗಳಲ್ಲಿ ಆಕ್ಟ್ ಅಪ್ರೆಂಟಿಸ್ ಆಗಿ ತರಬೇತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು RRC-ER ನ ಅಧಿಕೃತ ವೆಬ್‌ಸೈಟ್, rrcer.org ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಅಪ್ಲಿಕೇಶನ್ ವಿಂಡೋ ಸೆಪ್ಟೆಂಬರ್ 24 ರಂದು (ಬೆಳಿಗ್ಗೆ 11:00) ತೆರೆಯುತ್ತದೆ  ಅಕ್ಟೋಬರ್ 23 ಸಂಜೆ 5:00 ಗಂಟೆವರೆಗೂ ಅರ್ಜಿ ಸಲ್ಲಿಸಬಹುದು. 

RRC ER ನೇಮಕಾತಿ 2024: ಅರ್ಹತಾ ಮಾನದಂಡ
ಈ ಹುದ್ದೆಗೆ ಅರ್ಹತೆ ಪಡೆಯಲು, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 50 ಪ್ರತಿಶತ ಅಂಕಗಳೊಂದಿಗೆ 10ನೇ ತರಗತಿ ಅಥವಾ ಅದಕ್ಕೆ ಸಮಾನವಾದ (10+2 ಪರೀಕ್ಷಾ ವ್ಯವಸ್ಥೆಯ ಅಡಿಯಲ್ಲಿ) ಉತ್ತೀರ್ಣರಾಗಿರಬೇಕು.NCVT/SCVT ನೀಡಿದ ಅಧಿಸೂಚಿತ  ಟ್ರೇಡ್ ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೆಟ್  ಹೊಂದಿರಬೇಕು.

ಇದನ್ನೂ ಓದಿ : Career Updates: ಐಟಿಐ ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಗೆ ಹೆಚ್‌ಎಎಲ್ ನಲ್ಲಿ ಸುವರ್ಣಾವಕಾಶ..!

ವಯಸ್ಸಿನ ಮಿತಿ: ಅಭ್ಯರ್ಥಿಯ ವಯಸ್ಸು ಕನಿಷ್ಠ 15 ವರ್ಷಗಳು  ಗರಿಷ್ಠ 24 ವರ್ಷಗಳಾಗಿರಬೇಕು. 
 
RRC ER ನೇಮಕಾತಿ 2024: ಹುದ್ದೆಯ ವಿವರಗಳು: 
ಪೂರ್ವ ರೈಲ್ವೆ ವಲಯದಲ್ಲಿ ಒಟ್ಟು 3,115 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಭರ್ತಿ ಸೆಲ್ ಹೊಂದಿದೆ.ಮೇಲೆ ತಿಳಿಸಲಾದ ಖಾಲಿ ಹುದ್ದೆಗಳ ವಿವರಗಳು ಇಲ್ಲಿವೆ.

ಹೌರಾ ವಿಭಾಗ: 659 ಹುದ್ದೆಗಳು
ಲಿಲುವಾ  ವರ್ಕ್ ಶಾಪ್ : 612 ಪೋಸ್ಟ್‌ಗಳು
ಸೀಲ್ದಾ ವಿಭಾಗ: 440 ಪೋಸ್ಟ್‌ಗಳು
ಕಂಚ್ರಪಾರ ವರ್ಕ್ ಶಾಪ್ : 187 ಪೋಸ್ಟ್‌ಗಳು
ಮಾಲ್ಡಾ ವಿಭಾಗ: 138 ಹುದ್ದೆಗಳು
ಅಸನ್ಸೋಲ್ ವಿಭಾಗ: 412 ಹುದ್ದೆಗಳು
ಜಮಾಲ್ಪುರ್ ವರ್ಕ್ ಶಾಪ್: 667 ಪೋಸ್ಟ್ಗಳು

RRC ER ನೇಮಕಾತಿ 2024: ಅರ್ಜಿ ಸಲ್ಲಿಸುವುದು ಹೇಗೆ ?
೧.ಅಭ್ಯರ್ಥಿಗಳು RRC ಪೂರ್ವ ರೈಲ್ವೆಯ ಅಧಿಕೃತ ವೆಬ್‌ಸೈಟ್ rrcer.org ಗೆ ಭೇಟಿ ನೀಡಬೇಕು.
೨. ಮುಖಪುಟದಲ್ಲಿ 'RRC/ER/Act Apprentices/2024-25' ಅಧಿಸೂಚನೆ ಕಾಣಿಸುತ್ತದೆ. 
೩.ನೀವು ಈಗಾಗಲೇ ನೋಂದಾಯಿಸಿರದಿದ್ದರೆ ಅಗತ್ಯವಿರುವ ವಿವರಗಳನ್ನು ನಮೂದಿಸುವ ಮೂಲಕ ಹೊಸ ಖಾತೆಯನ್ನು ರಚಿಸಿ.
೪. ನಂತರ,  ಜನರೇಟ್ ಕ್ರೆಡೆನ್ಶಿಯಲ್  ಬಳಸಿಕೊಂಡು ಲಾಗಿನ್ ಮಾಡಿ ಮತ್ತು ಆನ್‌ಲೈನ್ ಅರ್ಜಿ ಫಾರ್ಮ್  ಭರ್ತಿ ಮಾಡಿ. 
೫. ನಿಗದಿತ ಅರ್ಜಿಯಲ್ಲಿ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ  ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
೬.ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು ಅರ್ಜಿ  ಸಲ್ಲಿಸಿ.
೭. ಮುಂದಿನ ಬಲಕೆಗಾಗಿ ಈ ಅರ್ಜಿ ಫಾರ್ಮ್ ಅನ್ನು ಸೇವ್ ಮಾಡಿ ಇಟ್ಟುಕೊಳ್ಳಿ. 

ಇದನ್ನೂ ಓದಿ : ನೀವು ಕ್ರೀಡಾಪಟುಗಳಾಗಿದ್ದಲ್ಲಿ ಇಲ್ಲಿದೆ ನಿಮಗೊಂದು ಸುವರ್ಣಾವಕಾಶ..! ಸ್ವಂತ ಜಿಮ್ ತೆರೆಯಲು ನಿಮಗೆ ಸಿಗಲಿದೆ ಸರ್ಕಾರದ ನೆರವು   

RRC ER ನೇಮಕಾತಿ 2024: ಅರ್ಜಿ ಶುಲ್ಕ
ಸಾಮಾನ್ಯ, OBC ಮತ್ತು EWS ವರ್ಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ  100 ಪಾವತಿಸಬೇಕಾಗುತ್ತದೆ. SC, ST, PWD ವರ್ಗದ ಅಭ್ಯರ್ಥಿಗಳು ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

RRC ER ನೇಮಕಾತಿ 2024: ಆಯ್ಕೆ ಪ್ರಕ್ರಿಯೆ
ಪೂರ್ವ ರೈಲ್ವೆಯ ಘಟಕದಲ್ಲಿ ತರಬೇತಿ ಸ್ಲಾಟ್‌ಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಆಯಾ ಹುದ್ದೆಯ ಅರ್ಹತೆಯ ಆಧಾರದ ಮೇಲೆ ಮಾಡಲಾಗುತ್ತದೆ. ಅರ್ಜಿ ನಮೂನೆಯಲ್ಲಿ ಅಭ್ಯರ್ಥಿಗಳು ಭರ್ತಿ ಮಾಡಿದ ವಿವರಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News