BMTC Recruitment 2024: ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

BMTC Recruitment 2024: ಒಟ್ಟು 2,500 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Written by - Puttaraj K Alur | Last Updated : Feb 28, 2024, 09:23 PM IST
  • BMTCಯಲ್ಲಿ ಖಾಲಿಯಿರುವ ನಿರ್ವಾಹಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಒಟ್ಟು 2,500 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ
  • ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
BMTC Recruitment 2024: ಬಿಎಂಟಿಸಿಯಲ್ಲಿ 2,500 ಕಂಡಕ್ಟರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ title=
BMTC Recruitment 2024

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಖಾಲಿ ಇರುವ ನಿರ್ವಾಹಕರ (ಗ್ರೇಡ್-3 ಮೇಲ್ವಿಚಾರಕರು) ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅಧಿಸೂಚನೆ ಹೊರಡಿಸಿದೆ. ಒಟ್ಟು 2,500 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

BMTCಯ ಮಿಕ್ಕುಳಿದ ವೃಂದದಲ್ಲಿ 2286 (RPC) ಹಾಗೂ ಸ್ಥಳೀಯ ವೃಂದ (ಹೈದರಾಬಾದ್‌ ಕರ್ನಾಟಕ) 214 ಹುದ್ದೆಗಳಿದ್ದು ಒಟ್ಟಾರೆ ಮಹಿಳೆಯರಿಗೂ 825 ಹುದ್ದೆಗಳು ಮೀಸಲಿವೆ.

ಇದನ್ನೂ ಓದಿ: "ಬಿಜೆಪಿ ಪಕ್ಕಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ"-ಬಿ.ಕೆ.ಹರಿಪ್ರಸಾದ್ ಟೀಕೆ

ಮಾರ್ಚ್ 10ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಏಪ್ರಿಲ್ 10ರಂದು ಮುಕ್ತಾಯವಾಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು cetonline.karnataka.gov.in ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು.

PUC, CBSC 10+2, ಮೂರು ವರ್ಷದ ಡಿಪ್ಲೋಮಾ ಅಥವಾ ಅದಕ್ಕೆ ಸಮಾನವಾದ ಶೈಕ್ಷಣಿಕ ಅರ್ಹತೆ ಜೊತೆಗೆ ‘ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ ಮತ್ತು ಬ್ಯಾಡ್ಜ್’ ಅನ್ನು ಹೊಂದಿದವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಕಡ್ಡಾಯ ಕನ್ನಡ: ಪಾಲಿಕೆ ವತಿಯಿಂದ ಕನ್ನಡೇತರ ಫಲಕಗಳ ತೆರವು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News