UAS Dharwad Recruitment 2023: ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

UAS Dharwad Recruitment 2023: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದೇ ಜುಲೈ 17ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ.

Written by - Puttaraj K Alur | Last Updated : Jul 9, 2023, 04:31 PM IST
  • ಧಾರವಾಡದ ಕೃಷಿ ವಿಜ್ಞಾನ ವಿವಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಈ ನೇಮಕಾತಿಯಡಿ ಕಮ್ಯುನಿಟಿ ಹೆಲ್ಪರ್ಸ್ & ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು
UAS Dharwad Recruitment 2023: ಧಾರವಾಡ ಕೃಷಿ ವಿವಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ title=
ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಧಾರವಾಡ: ಧಾರವಾಡದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಯಡಿ ಕಮ್ಯುನಿಟಿ ಹೆಲ್ಪರ್ಸ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಈ ನೇಮಕಾತಿ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಹುದ್ದೆಗಳ ವಿವರ: ಧಾರವಾಡದ ಕೃಷಿ ವಿವಿಯಲ್ಲಿ ಖಾಲಿ ಇರುವ 21 ಕಮ್ಯುನಿಟಿ ಹೆಲ್ಪರ್ಸ್ ಹಾಗೂ ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: ಜಗತ್ತಿನ ಅತೀ ಶ್ರೀಮಂತ ಭಿಕ್ಷುಕನ ಆಸ್ತಿ ಮೌಲ್ಯ ರೂ. 7.5 ಕೋಟಿ! ಈ ಹೈಫೈ ಬೆಗ್ಗರ್ ಭಾರತದವನೇ…

ಉದ್ಯೋಗ ಸ್ಥಳ: ಧಾರವಾಡ, ಬೆಳಗಾವಿ, ಹಾವೇರಿ ಮತ್ತು ವಿಜಯಪುರ

ಸಲಹೆಗಾರ- 1 ಹುದ್ದೆ

ಹಿರಿಯ ಸಂಶೋಧನಾ ಫೆಲೋ (SRF) - 1 ಹುದ್ದೆ

ಯೋಜನಾ ಸಹಾಯಕ (LRI) - 4 ಹುದ್ದೆಗಳು

ಯೋಜನೆಯ ಸಹಾಯಕ (ಜಲವಿಜ್ಞಾನ) - 2 ಹುದ್ದೆಗಳು

ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು - 1 ಹುದ್ದೆ

ಸಮುದಾಯ ಸಹಾಯಕರು (ಜಲ ಮಿತ್ರ) - 12 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಸಲಹೆಗಾರ: RS & GSನಲ್ಲಿ M.Sc, M.Tech, ಜಿಯೋ-ಇನ್ಫರ್ಮ್ಯಾಟಿಕ್ಸ್‌ನಲ್ಲಿ Ph.D ಮಾಡಿರಬೇಕು.

ಹಿರಿಯ ಸಂಶೋಧನಾ ಫೆಲೋ (SRF): ಕೃಷಿ, ಮಣ್ಣು ವಿಜ್ಞಾನ ಮತ್ತು ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಮಾಡಿರಬೇಕು.

ಪ್ರಾಜೆಕ್ಟ್ ಅಸಿಸ್ಟೆಂಟ್ (LRI): ಡಿಪ್ಲೊಮಾ, ಪದವಿ, ಕೃಷಿಯಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು.

ಪ್ರಾಜೆಕ್ಟ್ ಅಸಿಸ್ಟೆಂಟ್ (Hydrology): ಕೃಷಿಯಲ್ಲಿ ಬಿ.ಎಸ್ಸಿ, ಕೃಷಿ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿರಬೇಕು.

ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು, ಸಮುದಾಯ ಸಹಾಯಕರು (ಜಲ ಮಿತ್ರ): 10ನೇ ತರಗತಿ ಪಾಸ್ ಆಗಿರಬೇಕು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಮಾಸಿಕ ವೇತನ:

ಸಲಹೆಗಾರ: 70 ಸಾವಿರ ರೂ.

ಹಿರಿಯ ಸಂಶೋಧನಾ ಫೆಲೋ (SRF): 31 ಸಾವಿರ ರೂ.

ಯೋಜನಾ ಸಹಾಯಕ (LRI): 21-25 ಸಾವಿರ ರೂ.

ಯೋಜನೆಯ ಸಹಾಯಕ (ಜಲವಿಜ್ಞಾನ):  25 ಸಾವಿರ ರೂ.

ಕ್ಷೇತ್ರ ಸಹಾಯಕ/ಕ್ಷೇತ್ರ ಮೇಲ್ವಿಚಾರಕರು: 13 ಸಾವಿರ ರೂ.

ಸಮುದಾಯ ಸಹಾಯಕರು (ಜಲ ಮಿತ್ರ): 5 ಸಾವಿರ ರೂ.

ಪ್ರಮುಖ ದಿನಾಂಕ: ಜುಲೈ 18ರಂದು ಬೆಳಗ್ಗೆ 10.30ಕ್ಕೆ ನೇರ ಸಂದರ್ಶನ ನಡೆಯಲಿದೆ.

ಸಂದರ್ಶನ ನಡೆಯುವ ಸ್ಥಳ: Chamber of Office of Assoc. Director of Research (HQ), Krishinagar, Dharwad

ನೇಮಕಾತಿ ಕುರಿತ ಮತ್ತಷ್ಟು ಮಾಹಿತಿ ಮತ್ತು  ಅಧಿಕೃತ ಅಧಿಸೂಚನೆ ಪರಿಶೀಲಿಸಲು ಅಧಿಕೃತ ವೆಬ್‌ಸೈಟ್: uasd.eduಗೆ ಭೇಟಿ ನೀಡಬಹುದು.

ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಮಾಸ್ಟರ್ ಪ್ಲಾನ್! ರಾಷ್ಟ್ರೀಯ ಕಾರ್ಯಕಾರಿಣಿಗೆ ಈ 10 ಹಿರಿಯ ನಾಯಕರ ಸೇರ್ಪಡೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News