Driving license link aadhar card online : ಡ್ರೈವಿಂಗ್ ಲೈಸೆನ್ಸ್‍ಗೆ ಆಧಾರ್ ಲಿಂಕ್ ಮಾಡುವುದು ಇನ್ನು ಅನಿವಾರ್ಯ.! ಹೀಗೆ ಮಾಡಿ

Driving license link aadhar card online : ನೀವು ಡ್ರೈವಿಂಗ್ ಲೈಸೆನ್ಸ್ ನ್ನು (Driving license) ಆಧಾರ್ ಕಾರ್ಡಿಗೆ ಲಿಂಕ್  ಮಾಡಬೇಕಾಗುತ್ತದೆ. ಈ ನಿರ್ಧಾರದಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ ದಂಧೆಗೆ ಕಡಿವಾಣ ಬೀಳುತ್ತದೆ.  

Written by - Ranjitha R K | Last Updated : Jun 6, 2021, 10:34 AM IST
  • ಇನ್ನು ನೀವು ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕಾಗುತ್ತದೆ.
  • ಈ ನಿರ್ಧಾರದಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ ದಂಧೆಗೆ ಕಡಿವಾಣ ಬೀಳುತ್ತದೆ ಎಂದು ಹೇಳುತ್ತದೆ ಸರ್ಕಾರ.
  • ಹೀಗೆ ಮಾಡಿ, ನೀವು ಕೂಡಾ ಡ್ರೈವಿಂಗ್ ಲೈಸೆನ್ಸ್‍ನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಿಸಿಕೊಳ್ಳಿ.
Driving license link aadhar card online : ಡ್ರೈವಿಂಗ್ ಲೈಸೆನ್ಸ್‍ಗೆ ಆಧಾರ್ ಲಿಂಕ್ ಮಾಡುವುದು ಇನ್ನು ಅನಿವಾರ್ಯ.! ಹೀಗೆ ಮಾಡಿ title=
ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ್ ಕಾರ್ಡಿಗೆ ಲಿಂಕ್ ಮಾಡಬೇಕಾಗುತ್ತದೆ. (photo zee news)

ನವದೆಹಲಿ : ಇನ್ನು ನೀವು ಡ್ರೈವಿಂಗ್ ಲೈಸೆನ್ಸ್ ನ್ನು (Driving license) ಆಧಾರ್ ಕಾರ್ಡಿಗೆ ಲಿಂಕ್  ಮಾಡಬೇಕಾಗುತ್ತದೆ. ಈ ನಿರ್ಧಾರದಿಂದ ನಕಲಿ ಡ್ರೈವಿಂಗ್ ಲೈಸೆನ್ಸ್ ದಂಧೆಗೆ ಕಡಿವಾಣ ಬೀಳುತ್ತದೆ ಎಂದು ಹೇಳುತ್ತದೆ ಸರ್ಕಾರ. ನೀವು ಕೂಡಾ ಡ್ರೈವಿಂಗ್ ಲೈಸೆನ್ಸ್‍ನ್ನು ಆಧಾರ್ ಕಾರ್ಡ್ (Aadhaar card) ಜೊತೆ ಲಿಂಕ್ ಮಾಡುವ ಉದ್ದೇಶ ಇಟ್ಟು ಕೊಂಡಿದ್ದರೆ, ಆ ಪ್ರಕ್ರಿಯೆ ತುಂಬಾ ಸುಲಭ.  ಸ್ಟೆಪ್ ಬೈ ಸ್ಟೆಪ್ ಮಾಹಿತಿ ಇಲ್ಲಿದೆ.

ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡಿಗೆ ಲಿಂಕ್ ಮಾಡಲು ಹೀಗೆ ಮಾಡಿ :
1. ಮೊದಲು https://parivahan.gov.in ಕ್ಲಿಕ್ ಮಾಡಿ
2. ಲಿಂಕ್ ಆಧಾರ್ ಆಪ್ಶನ್ ಕ್ಲಿಕ್ ಮಾಡಿ.
3. ಡ್ರಾಪ್ ಡೌನ್ ಗೆ ಹೋಗಿ Driving Licence ಆಪ್ಶನ್ ಕ್ಲಿಕ್ ಮಾಡಿ.
4. ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving license)  ನಂಬರ್ ದಾಖಲಿಸಿ
5. ನಂತರ  'Get Details' ಆಪ್ಶನ್ ಕ್ಲಿಕ್ ಮಾಡಿ. 

ಇದನ್ನೂ ಓದಿ : Driving License ಮಾಡಿಸಲು RTO ಗೆ ಹೋಗಬೇಕಾಗಿಲ್ಲ, ಆನ್‌ಲೈನ್‌ ನಲ್ಲಿಯೇ ನಡೆಯುತ್ತದೆ ಡ್ರೈವಿಂಗ್ ಟೆಸ್ಟ್

6. ನಿಮ್ಮ ಆಧಾರ್ ನಂಬರ್ (Aadhaar) ಮತ್ತು ಮೊಬೈಲ್ ನಂಬರ್ ದಾಖಲಿಸಿ ಸಬ್ ಮಿಟ್ ಮಾಡಿ
7. ನಿಮ್ಮ ಮೊಬೈಲಿಗೆ ಒಂದು ಒಟಿಪಿ  ಬರುತ್ತದೆ.  
8. ಆ ಒಟಿಪಿಯನ್ನು (OTP) ಅಲ್ಲಿ ದಾಖಲಿಸಿ
9. ಒಟಿಪಿ ದಾಖಲಾಗುತ್ತಿದ್ದಂತೆ ನಿಮ್ಮ ಡ್ರೈವಿಂಗ್ ಲೈಸೆನ್ಸಿಗೆ ಆಧಾರ್ ನಂಬರ್ ಲಿಂಕ್ ಆಗಿರುತ್ತದೆ. 

ನೆನಪಿರಲಿ, ಇನ್ನುನಿಮ್ಮ ಡ್ರೈವಿಂಗ್ ಲೈಸೆನ್ಸ್ ವೆರಿಫಿಕೇಶನ್ ಗಾಗಿ ಆಧಾರ್ ನಂಬರ್ ಅನಿವಾರ್ಯವಾಗಿದೆ. ಹಾಗಾಗಿ ಶೀಘ್ರವೇ ನಿಮ್ಮ ಡ್ರೈವಿಂಗ್ ಲೈಸನ್ಸ್ ಅನ್ನು ಈ ಸುಲಭ ಪ್ರಕ್ರಿಯೆಯೊಂದಿಗೆ ನಿಮ್ಮ ಆಧಾರ್ ಜೊತೆ ಲಿಂಕ್ ಮಾಡಿ.. 

ಇದನ್ನೂ ಓದಿ :  ದೊಡ್ಡ ಬದಲಾವಣೆಯತ್ತ Transport Ministry, ಈ ಕೆಲಸ ಮಾಡಿದರಷ್ಟೇ ವಾಹನ ಚಲಾಯಿಸಲು ಸಾಧ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News