Cheapest Used Cars : ಜೀವನದಲ್ಲೊಮ್ಮೆ ಕಾರು ಖರೀದಿಸಬೇಕು. ಕಾರಿನ ಮಾಲೀಕರಾಗಬೇಕು ಎನ್ನುವ ಕನಸು ಪ್ರತಿಯೊಬ್ಬನಿಗೂ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಹಳೆಯ ಕಾರುಗಳನ್ನು ಖರೀದಿಸುವುದು ಅಂಥಾ ಕಷ್ಟವಾದ ಕೆಲಸವಲ್ಲ. ಹಳೆಯ ಕಾರುಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿವೆ. ಇಲ್ಲಿ ಅತೀ ಕಡಿಮೆ ಬೆಲೆಗೆ ಕಾರುಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ. ನಾವು ಇಲ್ಲಿ ನಿಮಗೆ ಮಾಹಿತಿ ನೀಡಲಿರುವ ಕಾರುಗಳ ಬೆಲೆ ಸುಮಾರು ಎರಡು ಲಕ್ಷ ರೂಪಾಯಿಗಳು. ಈ ಕಾರುಗಳನ್ನು ನವೆಂಬರ್ 30, ಮಧ್ಯಾಹ್ನ Cars24 ನ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.
2012 ಮಾರುತಿ ಆಲ್ಟೊ 800 ಎಲ್‌ಎಕ್ಸ್‌ಐ ಮ್ಯಾನುಯಲ್ ಕಾರಿಗೆ ಇಲ್ಲಿ 2,05,299 ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಕಾರು ಇದುವರೆಗೆ 86,123 ಕಿ.ಮೀ ಕದೂರವನ್ನು ಕ್ರಮಿಸಿದೆ. ಇದು ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿದ್ದು, ಇದನ್ನು ಮಾರಾಟಕ್ಕೆ ಇಟ್ಟಿರುವ ವ್ಯಕ್ತಿ ಈ ಕಾರಿನ ಮೊದಲ ಮಾಲೀಕರಾಗಿರುತ್ತಾರೆ. ಇದು ಹರಿಯಾಣ ನೋಂದಣಿ ಇರುವ ಕಾರು.
ಇದನ್ನೂ ಓದಿ : Uniparts India IPO: ತಡಮಾಡದೆ ರೂ.14,425ನ್ನು ಇಲ್ಲಿ ಹೂಡಿಕೆ ಮಾಡಿ: ಬಹುದೊಡ್ಡ ಮೊತ್ತದಲ್ಲಿ ಹಣ ಗಳಿಸಿ
2013 ಮಾರುತಿ ಆಲ್ಟೊ 800 ಎಲ್‌ಎಕ್ಸ್‌ಐ ಸಿಎನ್‌ಜಿ ಮ್ಯಾನುಯಲ್ ಕಾರನ್ನು ಮಾರಲು ಬಯಸುವ ವ್ಯಕ್ತಿ ಇಲ್ಲಿ ಬೇಡಿಕೆ ಇಟ್ಟಿರುವುದು 2,09,899 ರೂಪಾಯಿಗಳಿಗೆ. ಕಾರು ಇದುವರೆಗೆ 90,407 ಕಿ.ಮೀ ಕ್ರಮಿಸಿದೆ. ಇದು ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಸಿಎನ್‌ಜಿ ಕಿಟ್ ಅನ್ನು ಕೂಡಾ ಹೊಂದಿದೆ. ಈ ಕಾರನ್ನು ಮಾರಾಟಕ್ಕೆ ಇಟ್ಟಿರುವುದು ಇದರ ಮೊದಲ ಮಾಲೀಕ. ಈ ಕಾರು ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿದೆ.
2012 ಹ್ಯುಂಡೈ i10 ERA 1.1 IRDE ಮ್ಯಾನುಯಲ್ ಕಾರಿಗೆ ಕೂಡಾ ಇಲ್ಲಿ 2,11,999 ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಕಾರು ಇದುವರೆಗೆ 45,732 ಕಿ.ಮೀ ಕ್ರಮಿಸಿದೆ. ಇದು ಪೆಟ್ರೋಲ್ ಇಂಜಿನ್‌ನಿಂದ ಚಾಲಿತವಾಗಿದ್ದು, ಈಗಾಗಲೇ ಕಾರು ಇಬ್ಬರು ಮಾಲೀಕರನ್ನು ಕಂಡಿದೆ. ಈ ಕಾರು ಕೂಡಾ ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಇದನ್ನೂ ಓದಿ : ನಿಮ್ಮ ಮಕ್ಕಳಿಗೂ ಬಾಲ್ ಆಧಾರ್ ಕಾರ್ಡ್ ಮಾಡಿಸಿದ್ದೀರಾ? ಈ ಸುದ್ದಿಯನ್ನು ತಪ್ಪದೇ ಓದಿ
2009 ಮಾರುತಿ ಸ್ವಿಫ್ಟ್ ಡಿಜೈರ್ VXI 1.3 ಮ್ಯಾನುಯಲ್ ಕಾರಿಗೆ ಇಲ್ಲಿ ಕೇಳುತ್ತಿರುವ ಬೆಲೆ ಎಂದರೆ 2,14,199 ರೂಪಾಯಿ . ಕಾರು ಇದುವರೆಗೆ 26,495 ಕಿ.ಮೀ ಕ್ರಮಿಸಿದೆ. ಇದು ಪೆಟ್ರೋಲ್ ಎಂಜಿನ್ ಹೊಂದಿದೆ. ಇದು ಸೆಕೆಂಡ್ ಓನರ್ ಅನ್ನು ಹೊಂದಿದೆ. ಈ ಕಾರು ಕೂಡಾ ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿದೆ.
2011 ಮಾರುತಿ ವ್ಯಾಗನ್ ಆರ್ 1.0 ವಿಎಕ್ಸ್ಐ ಮ್ಯಾನುಯಲ್ ಗೆ ನಿಗದಿ ಪಡಿಸಿರುವ ಬೆಲೆ 2,22,499 ರೂಪಾಯಿ. ಕಾರು ಇದುವರೆಗೆ 37,831 ಕಿ.ಮೀ ಕ್ರಮಿಸಿದೆ. ಇದು ಎರಡನೇ ಮಾಲೀಕನ ಕೈಯ್ಯಲ್ಲಿದೆ. ಕಾರು ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಕಾರು ಕೂಡಾ ದೆಹಲಿ ನೋಂದಣಿ ಸಂಖ್ಯೆಯನ್ನು ಹೊಂದಿದೆ.
ಈ ಎಲ್ಲಾ ಕಾರುಗಳು ನೊಯಿಡಾದಲ್ಲಿ ಮಾರಾಟಕ್ಕಿವೆ.
(ಬಳಸಿದ ಕಾರನ್ನು ಖರೀದಿಸಲು ನಾವು ಯಾರಿಗೂ ಸೂಚಿಸುವುದಿಲ್ಲ. ಈ ಸುದ್ದಿಯನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಬರೆಯಲಾಗಿದೆ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.