Budget 2023 : ಮಹಿಳಾ ರೈತರಿಗಾಗಿ ಸರ್ಕಾರದ ವಿಶೇಷ ಯೋಜನೆ! ಬಜೆಟ್‌ಗೂ ಮುನ್ನವೇ ಗುಡ್ ನ್ಯೂಸ್?

Budget 2023 : ದೇಶಾದ್ಯಂತ ರೈತರಿಗೊಂದು ಸಂತಸದ ಸುದ್ದಿಯಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತಿದೆ.

Written by - Chetana Devarmani | Last Updated : Jan 31, 2023, 03:51 PM IST
  • ದೇಶಾದ್ಯಂತ ರೈತರಿಗೊಂದು ಸಂತಸದ ಸುದ್ದಿ
  • ಮಹಿಳಾ ರೈತರಿಗಾಗಿ ಸರ್ಕಾರದ ವಿಶೇಷ ಯೋಜನೆ
  • ಬಜೆಟ್‌ಗೂ ಮುನ್ನವೇ ಗುಡ್ ನ್ಯೂಸ್?
Budget 2023 : ಮಹಿಳಾ ರೈತರಿಗಾಗಿ ಸರ್ಕಾರದ ವಿಶೇಷ ಯೋಜನೆ! ಬಜೆಟ್‌ಗೂ ಮುನ್ನವೇ ಗುಡ್ ನ್ಯೂಸ್? title=
Budget 2023

Budget 2023 : ದೇಶಾದ್ಯಂತ ರೈತರಿಗೊಂದು ಸಂತಸದ ಸುದ್ದಿಯಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ರೈತರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುತ್ತಿದೆ. ನೀವು ಕೂಡ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಲಾಭ ಪಡೆದರೆ, ನಿಮಗೊಂದು ಒಳ್ಳೆಯ ಸುದ್ದಿ ಇದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಿಎಂ ಕಿಸಾನ್ ಯೋಜನೆ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಾರೆ.

ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳಲ್ಲಿ ಸುಮಾರು ಮೂರು ಕೋಟಿ ಮಹಿಳೆಯರಿದ್ದಾರೆ ಮತ್ತು ಅವರಿಗೆ ಒಟ್ಟು 54,000 ಕೋಟಿ ರೂ.ಗಿಂತ ಹೆಚ್ಚು ನೀಡಲಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ಹೇಳಿದ್ದಾರೆ. ಬಜೆಟ್ ಅಧಿವೇಶನದ ಮೊದಲ ದಿನ ಸಂಸತ್ತಿನ ಉಭಯ ಸದನಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಪ್ರಧಾನಿ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ 2.25 ಲಕ್ಷ ಕೋಟಿ ರೂ.ಗೂ ಹೆಚ್ಚು ನೀಡಲಾಗಿದೆ. ವಿಶೇಷವೆಂದರೆ ಈ ಫಲಾನುಭವಿಗಳಲ್ಲಿ ಸುಮಾರು ಮೂರು ಕೋಟಿ ಫಲಾನುಭವಿಗಳು ಮಹಿಳೆಯರಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ : Budget 2023 : ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಹೊಸ ವ್ಯವಸ್ಥೆ ! ಬಜೆಟ್ ನಲ್ಲಿ ಸಿಗಲಿದೆ ಗುಡ್ ನ್ಯೂಸ್

ಮಹಿಳಾ ರೈತರಿಗಾಗಿ ಸರ್ಕಾರ ವಿಶೇಷ ಯೋಜನೆ :

ಈ ಯೋಜನೆಯಡಿ ಇದುವರೆಗೆ ಮಹಿಳಾ ರೈತರಿಗೆ ಸುಮಾರು 54 ಸಾವಿರ ಕೋಟಿ ರೂ. ನೀಡುವ ಉದ್ದೇಶಿದೆ. ದೇಶದ 11 ಕೋಟಿ ಸಣ್ಣ ರೈತರೂ ಸರ್ಕಾರದ ಆದ್ಯತೆಯಲ್ಲಿದ್ದಾರೆ. ಈ ಸಣ್ಣ ರೈತರು ದಶಕಗಳಿಂದ ಸರ್ಕಾರದ ಆದ್ಯತೆಯಿಂದ ವಂಚಿತರಾಗಿದ್ದರು. ಈಗ ಅವರನ್ನು ಸದೃಢವಾಗಿ ಮತ್ತು ಸಮೃದ್ಧವಾಗಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.

ಸರ್ಕಾರ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುತ್ತಿದೆ :

ಬೆಳೆ ವಿಮೆ, ಮಣ್ಣು ಆರೋಗ್ಯ ಕಾರ್ಡ್, ಸಣ್ಣ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಹರಡುವಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಸರ್ಕಾರವು ಪ್ರಥಮ ಬಾರಿಗೆ ಜಾನುವಾರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯದೊಂದಿಗೆ ಸಂಪರ್ಕ ಕಲ್ಪಿಸಿದೆ. ಭಾರತವು ಒಂದೆಡೆ ನೈಸರ್ಗಿಕ ಕೃಷಿಗೆ ಉತ್ತೇಜನ ನೀಡುತ್ತಿದ್ದು, ಇನ್ನೊಂದೆಡೆ ನ್ಯಾನೋ ಯೂರಿಯಾದಂತಹ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಎಂದಿದ್ದಾರೆ.

ಇದನ್ನೂ ಓದಿ : ವೇತನ ವರ್ಗ ಮತ್ತು ಉದ್ಯಮಿಗಳಿಗೆ ಈ ಬಾರಿಯ ಬಜೆಟ್ ನಲ್ಲಿ ಸಿಗಲಿದೆ ಭರ್ಜರಿ ಕೊಡುಗೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News