ಸರ್ಕಾರಿ ನೌಕರರಿಗೆ ಸೂಪರ್ ಗಿಫ್ಟ್ ! ಸಾಲು ಸಾಲು ಹಬ್ಬದ ಹಿನ್ನೆಲೆಯಲ್ಲಿ ಸರ್ಕಾರದ ಮಹತ್ವದ ನಿರ್ಧಾರ

ರಾಜ್ಯ ಸರ್ಕಾರಗಳೂ ಈ ಬಾರಿ ಕೆಲ ನೌಕರರಿಗೆ ಮುಂಗಡವಾಗಿ ವೇತನ ನೀಡಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಪಿಂಚಣಿದಾರರು ಕೂಡಾ ಶೀಘ್ರ ಪಿಂಚಣಿ ಪಡೆಯಲಿದ್ದಾರೆ.

Written by - Ranjitha R K | Last Updated : Aug 18, 2023, 10:50 AM IST
  • ಓಣಂ ಮತ್ತು ವಿನಾಯಕರ ಚತುರ್ಥಿಯನ್ನು ಆಚರಿಸಲಾಗುತ್ತದೆ.
  • ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರದಿಂದ ಈ ಅಧಿಸೂಚನೆ.
  • ಈ ಸಂಬಂಧ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಸರ್ಕಾರಿ ನೌಕರರಿಗೆ ಸೂಪರ್ ಗಿಫ್ಟ್ ! ಸಾಲು ಸಾಲು ಹಬ್ಬದ ಹಿನ್ನೆಲೆಯಲ್ಲಿ  ಸರ್ಕಾರದ ಮಹತ್ವದ ನಿರ್ಧಾರ  title=

ಬೆಂಗಳೂರು : ಇದೀಗ ಎರಡು ರಾಜ್ಯ ಸರ್ಕಾರಗಳು ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರಗಳೂ ಈ ಬಾರಿ ಕೆಲ ನೌಕರರಿಗೆ ಮುಂಗಡವಾಗಿ ವೇತನ ನೀಡಲು ನಿರ್ಧರಿಸಿವೆ ಎಂದು ತಿಳಿದು ಬಂದಿದೆ. ಇದರೊಂದಿಗೆ ಪಿಂಚಣಿದಾರರು ಕೂಡಾ ಶೀಘ್ರ ಪಿಂಚಣಿ ಪಡೆಯಲಿದ್ದಾರೆ. 

ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರವು ಉದ್ಯೋಗಿಗಳಿಗೆ ಮುಂಗಡ ವೇತನ ಮತ್ತು ಪಿಂಚಣಿ ನೀಡಲು ನಿರ್ಧರಿಸಿದೆ. ಓಣಂ ಮತ್ತು ವಿನಾಯಕ ಚತುರ್ಥಿ ಹಬ್ಬಗಳ ಹಿನ್ನೆಲೆಯಲ್ಲಿ ಈ ಬಾರಿ ವೇತನವನ್ನು ಮೊದಲೇ ಬಿಡುಗಡೆ ಮಾಡಲು ರಾಜ್ಯ ಸರ್ಕಾರಗಳು ನಿರ್ಧರಿಸಿವೆ ಎಂದು ವರದಿಯಾಗಿದೆ. 

ಇದನ್ನೂ ಓದಿ : ಇನ್ನು ಸುಲಭದಲ್ಲಿ ಸಿಗುವುದಿಲ್ಲ ಹೊಸ ಸಿಮ್ ! ಈ ಪ್ರಕ್ರಿಯೆ ಪೂರ್ಣಗೊಳಿಸಲೇ ಬೇಕು ! ಕೇಂದ್ರದ ಮಹತ್ವದ ಹೆಜ್ಜೆ

ಈ ಬಾರಿ ನೌಕರರು ತಮ್ಮ ಹಬ್ಬವನ್ನು ಸಡಗರದಿಂದ ಆಚರಿಸಬಹುದು. ಅದಕ್ಕಾಗಿಯೇ ಸರ್ಕಾರವು ಹಬ್ಬದ ಮೊದಲು ವೇತನ ಮತ್ತು ಪಿಂಚಣಿಯನ್ನು ವರ್ಗಾಯಿಸಲು ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಹಣಕಾಸು ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಎಲ್ಲಾ ಉದ್ಯೋಗಿಗಳ ವೇತನವನ್ನು ಮುಂಗಡವಾಗಿ ಕೇಳಲಾಗಿದೆ. ಇದಲ್ಲದೇ ಓಣಂ ಹಬ್ಬದ ಸಂದರ್ಭದಲ್ಲಿ 4 ಸಾವಿರ ಮುಂಗಡ ಹಣ ನೀಡಲು ಕೇರಳ ಸರ್ಕಾರ ನಿರ್ಧರಿಸಿದೆ.

ಹಬ್ಬವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬ ವರದಿಗಳಿವೆ. ಮಹಾರಾಷ್ಟ್ರದಲ್ಲಿ ವಿನಾಯಕ ಚತುರ್ಥಿ ಮತ್ತು ಕೇರಳದಲ್ಲಿ ಓಣಂ ಹಬ್ಬವನ್ನು ಹೆಚ್ಚು ಜನರು ಆಚರಿಸುತ್ತಾರೆ. ಮಹಾರಾಷ್ಟ್ರ ನೌಕರರ ಖಾತೆಗೆ ಸೆ. 27ರಂದು ಹಣ ವರ್ಗಾವಣೆಯಾಗಲಿದೆ. ಇದಲ್ಲದೇ ಕೇರಳದ ಉದ್ಯೋಗಿಗಳಿಗೆ ಆಗಸ್ಟ್ 25ರಂದು ಹಣ ವರ್ಗಾವಣೆಯಾಗಲಿದೆ ಎಂದು ವರದಿಯಾಗಿದೆ. ಕೇರಳದ ಎಲ್ಲಾ ಕೇಂದ್ರ ಪಿಂಚಣಿದಾರರ ಪಿಂಚಣಿಯನ್ನು ಪಿಎಒ ಮೂಲಕ ರವಾನೆ ಮಾಡಲಾಗುವುದು ಎಂದು ತಿಳಿಸಲಾಗಿದೆ. 

ಇದನ್ನೂ ಓದಿ : ಶೀಘ್ರದಲ್ಲಿಯೇ ಸರ್ಕಾರಿ ನೌಕರರಿಗೆ ಸಿಗಲಿದೆ ಈ ಗುಡ್ ನ್ಯೂಸ್, ತುಟ್ಟಿಭತ್ಯೆಯಲ್ಲಿ ಬಂಬಾಟ್ ಹೆಚ್ಚಳ ಸಾಧ್ಯತೆ!

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಸರ್ಕಾರವು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸುತ್ತಿದೆ. ಅದರಂತೆ, 2023 ರಲ್ಲಿ,  ತುಟ್ಟಿ ಭತ್ಯೆಯನ್ನು ಜನವರಿಯಲ್ಲಿ 4 ಪ್ರತಿಶತದಷ್ಟು ಹೆಚ್ಚಿಸಿದರೆ, ಜುಲೈನಲ್ಲಿ 3 ಶೇಕಡಾದಷ್ಟು ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ತುಟ್ಟಿಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳವಾದರೆ ನೌಕರರ ಒಟ್ಟು ತುಟ್ಟಿಭತ್ಯೆಯನ್ನು ಶೇಕಡಾ 45 ಕ್ಕೆ  ಏರುತ್ತದೆ. 

ಪ್ರತಿ ತಿಂಗಳು ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ಪ್ರಕಟಿಸುವ  ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ಉದ್ಯೋಗಿಗಳು ಮತ್ತು ನಿವೃತ್ತಿ ವೇತನದಾರರಿಗೆ ತುಟ್ಟಿ ಭತ್ಯೆಯನ್ನು ಲೆಕ್ಕಹಾಕಲಾಗುತ್ತದೆ. ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಈ ಮೊತ್ತವನ್ನು ನೀಡಲಾಗುತ್ತಿದೆ.

ಇದನ್ನೂ ಓದಿ : ಕುಸಿಯುತ್ತಲೇ ಇದೆ ಚಿನ್ನದ ದರ ! ವರಮಹಾಲಕ್ಷ್ಮೀ ಹಬ್ಬದ ವೇಳೆಗೆ ಇನ್ನೂ ಅಗ್ಗವಾಗುವ ಸಾಧ್ಯತೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News