Wireless LED: ಮಾರುಕಟ್ಟೆಯಲ್ಲಿ ಭಾರಿ ಹಲ್ಚಲ್ ಸೃಷ್ಟಿಸಿದೆ ಗಾಳಿಯಲ್ಲಿ ತೇಲಾಡುವ ಈ ಬಲ್ಬ್, ಖರೀದಿಗೆ ಮುಗಿಬಿದ್ದ ಜನ!

Levitating Floating Wireless LED: ಆನ್ಲೈನ್ ಮರುಕಟ್ಟೆಯಲ್ಲಿ ಎಲ್ಇಡಿ ಬಲ್ಬ್ ವೊಂದು ಭಾರಿ ಹಲ್ಚಲ್ ಸೃಷ್ಟಿಸಿಸ್ದೆ. ಈ ಬಲ್ಬ್ ಅನ್ನು ಮೊದಲ ಬಾರಿಗೆ ನೋಡಿದ ನಂತರ ಜನರು ನಿಬ್ಬೆರಬಾಗುತ್ತಿದ್ದಾರೆ, ತನ್ನ ಹಾರುವ ವೈಶಿಷ್ಟ್ಯದಿಂದಾಗಿ ಇದು ತುಂಬಾ ಟ್ರೆಂಡಿಂಗ್ ಉತ್ಪನ್ನವಾಗಿ ಹೊರಹೊಮ್ಮಿದೆ.  

Written by - Nitin Tabib | Last Updated : May 9, 2023, 06:40 PM IST
  • ಹಾಗಂದ ಮಾತ್ರಕ್ಕೆ ಇದಕ್ಕೆ ರೆಕ್ಕೆಪುಕ್ಕನೂ ಇಲ್ಲ, ಆದರೆ ಈ ಬಲ್ಬ್ ತುಂಬಾ ಸುಲಭವಾಗಿ ಹಾರುತ್ತದೆ.
  • ಬಲ್ಬ್ ನ ಈ ಹಾರಾಟ ಕೆಲವೇ ನಿಮಿಷಗಳಿಗೆ ಮಾತ್ರ ಸೀಮಿತವಲ್ಲ ಎಂಬುದು ಇಲ್ಲಿ ವಿಶೇಷ.
  • ಹಲವು ವರ್ಷಗಳವರೆಗೆ ಅದು ಹಾರುತ್ತಲೆ ಇರುತ್ತದೆ. ನೀವು ಸಹ ಅದನ್ನು ಖರೀದಿಸಲು ಬಯಸಿದರೆ ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ,
  • ಇಂದು ನಾವು ಅದರ ಬಗ್ಗೆ ವಿವರವಾಗಿ ಹೇಳಲಿದ್ದೇವೆ.
Wireless LED: ಮಾರುಕಟ್ಟೆಯಲ್ಲಿ ಭಾರಿ ಹಲ್ಚಲ್ ಸೃಷ್ಟಿಸಿದೆ ಗಾಳಿಯಲ್ಲಿ ತೇಲಾಡುವ ಈ ಬಲ್ಬ್, ಖರೀದಿಗೆ ಮುಗಿಬಿದ್ದ ಜನ! title=
ಗಾಳಿಯಲ್ಲಿ ತೇಲಾಡುವ ಬಲ್ಬ್

Floting Wireless LED Bulb: ಇದುವರೆಗೆ ನೀವು ಹಲವಾರು ವಿಧದದ ಸಾಮಾನ್ಯ ಬಲ್ಬ್‌ಗಳನ್ನು ನೋಡಿರಬಹುದು, ಮನೆಗಳಲ್ಲಿ ವಿಭಿನ್ನ ಪ್ರಕಾರಗಳು ಮತ್ತು ಪಾರ್ಟಿ ಸ್ಥಳಗಳಲ್ಲಿ ವಿಭಿನ್ನ ಪ್ರಕಾರಗಳು, ಜನರು ತಮ್ಮ ಮನಸ್ಥಿತಿಗೆ ಅನುಗುಣವಾಗಿ ಬಲ್ಬ್‌ಗಳನ್ನು ಆರಿಸಿಕೊಳ್ಳುತ್ತಾರೆ ಏಕೆಂದರೆ ಅವು ವಾತಾವರಣವನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಎಲ್ಲಾ ರೀತಿಯ ಬಲ್ಬ್‌ಗಳನ್ನು ನೋಡಿದ ನಂತರವೂ ಕೂಡ ನೀವು ನಿಮ್ಮ ಜೀವನದಲ್ಲಿ ಹಾರುವ ಬಲ್ಬ್ ಅನ್ನು ಎಂದಾದರೂ ನೋಡಿರುವಿರಾ?  ಹೌದು,  ಈ ಸಾಮರ್ಥ್ಯವೂ ಯಾವುದಾದರೊಂದು ಬಲ್ಬ್ ನಲ್ಲಿರಬಹುದು ಎಂದು ಊಹಿಸಿರಲಿಕ್ಕಿಲ್ಲ. ವಾಸ್ತವದಲ್ಲಿ ಅಂತಹದ್ದೊಂದು ಬಲ್ಬ್ ಇದ್ದು ಅದು ಹಾರಾಟ ನಡೆಸಬಲ್ಲದು. ಹಾಗಂದ ಮಾತ್ರಕ್ಕೆ ಇದಕ್ಕೆ ರೆಕ್ಕೆಪುಕ್ಕನೂ ಇಲ್ಲ,   ಆದರೆ ಈ ಬಲ್ಬ್ ತುಂಬಾ ಸುಲಭವಾಗಿ ಹಾರುತ್ತದೆ. ಬಲ್ಬ್ ನ ಈ ಹಾರಾಟ ಕೆಲವೇ ನಿಮಿಷಗಳಿಗೆ ಮಾತ್ರ ಸೀಮಿತವಲ್ಲ ಎಂಬುದು ಇಲ್ಲಿ ವಿಶೇಷ.  ಹಲವು ವರ್ಷಗಳವರೆಗೆ ಅದು ಹಾರುತ್ತಲೆ ಇರುತ್ತದೆ. ನೀವು ಸಹ ಅದನ್ನು ಖರೀದಿಸಲು ಬಯಸಿದರೆ ಅಥವಾ ಅದರ ಬಗ್ಗೆ ತಿಳಿದುಕೊಳ್ಳಲು ಬಯಸಿದರೆ, ಇಂದು ನಾವು ಅದರ ಬಗ್ಗೆ ವಿವರವಾಗಿ ಹೇಳಲಿದ್ದೇವೆ.

ಇದನ್ನೂ ಓದಿ-Google Update: ಇನ್ಮುಂದೆ ಗೂಗಲ್ ನಲ್ಲಿ ನಿಮಗೆ ಪಾಸ್ವರ್ಡ್ ನೆನಪಿನಲ್ಲಿಟ್ಟುಕೊಳ್ಳುವ ಗೊಡವೆ ಇಲ್ಲ! ಕಾರಣ ಇಲ್ಲಿದೆ

ಇದು ವಿಶೇಷ ರೀತಿಯ ಬಲ್ಬ್
ವಾಸ್ತವದಲ್ಲಿ ನಾವು ಹೇಳುತ್ತಿರುವ ಬಲ್ಬ್ ಅನ್ನು ಲೆವಿಟೇಟಿಂಗ್ ಬಲ್ಬ್ ಅಥವಾ ಫ್ಲೋಟಿಂಗ್ ಬಲ್ಬ್ ಎಂದು ಕರೆಯಲಾಗುತ್ತದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. ನಿಮಗೂ ಇದು ತಮಾಷೆ ಎನಿಸುತ್ತಿದ್ದರೇ ಕೇಳಿ, ತಂತ್ರಜ್ಞಾನದ ಸಹಾಯದಿಂದ ಈ ಬಲ್ಬ್ ಗಾಳಿಯಲ್ಲಿ ತೇಲುವ ಸಾಮರ್ಥ್ಯವನ್ನು ಹೊಂದಿರುವುದು ಮಾತ್ರ ನಿಜ. ನೋಡುಗರು ಇದನ್ನು ಒಂದು ಮ್ಯಾಜಿಕಲ್ ಬಲ್ಬ್ ಎನ್ನುತ್ತಿದ್ದಾರೆ, ಆದರೆ ವಾಸ್ತವದಲ್ಲಿ, ತಂತ್ರಜ್ಞಾನದಿಂದಾಗಿ, ಬಲ್ಬ್ ಗೆ ಈ ಸಾಮರ್ಥ್ಯ ಇದೆ, ಅದು ಅದನ್ನು ತುಂಬಾ ವಿಶೇಷವಾಗಿಸುತ್ತದೆ. ಒಮ್ಮೆ ಸ್ವಿಚ್ ಆನ್ ಮಾಡಿದರೆ, ಈ ಬಲ್ಬ್ ಬೆಳಕನ್ನು ಹೊರಸೂಸುತ್ತದೆ, ಇದರ ಜೊತೆಗೆ ಗಾಳಿಯಲ್ಲಿ ತೇಲಾಡಲು ಪ್ರಾರಂಭಿಸುತ್ತದೆ. ಹಾಗಂದ ಮಾತ್ರಕ್ಕೆ ಇದು ಮನೆ ತುಂಬಾ ಓಡಾಡಿಕೊಂಡು ಇರುತ್ತದೆ ಎಂಬುದು ಇದರ ಅರ್ಥವಲ್ಲ. ಈ ಅದು ಒಂದೇ ಸ್ಥಳದಲ್ಲಿ ನಿಂತು ತೇಲುತ್ತದೆ. ಅದನ್ನು ನೋಡಿ ಇದು ಸಾಧ್ಯಾನಾ? ಎಂಬುದು ಎಲ್ಲರ ಪ್ರಶ್ನೆಯಾಗಿರುತ್ತದೆ.  ಆದರೆ ತಂತ್ರಜ್ಞಾನದ ಮಾತ್ರ ಅದ್ಭುತವಾಗಿದೆ.

ಇದನ್ನೂ ಓದಿ-Royal Enfield 350 ಗೆ ಪೈಪೋಟಿ ನೀಡಲು ಶೀಘ್ರದಲ್ಲೇ ಮತ್ತೆ ರೋಡಿಗಿಳಿಯುತ್ತಿದೆ ಯಮಾಹಾ ಕಂಪನಿಯ ಈ ಬೈಕ್!

ಈ ಬಲ್ಬ್ ಹೇಗೆ ತೇಲುತ್ತದೆ?
ವಾಸ್ತವದಲ್ಲಿ ಈ ಬಲ್ಬ್‌ನೊಂದಿಗೆ ಮ್ಯಾಗ್ನೆಟಿಕ್ ಪ್ಲಾಟ್‌ಫಾರ್ಮ್ ಅನ್ನು ಒದಗಿಸಲಾಗಿದೆ, ಇದು ವೈರ್‌ಲೆಸ್‌ನಲ್ಲಿ ಅದನ್ನು ಬೆಳಗಿಸುವುದಲ್ಲದೆ ಗಾಳಿಯಲ್ಲಿ ಚಲಿಸಲು ಸಹಾಯ ಮಾಡುತ್ತದೆ. ವಿದೇಶಿ ಮಾರುಕಟ್ಟೆಯಲ್ಲಿ ಈ ಬಲ್ಬ್ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಇದೀಗ ಭಾರತದಲ್ಲೂ ಜನರು ಇದನ್ನು ಖರೀದಿಸಿ ತಮ್ಮ ಮನೆ ಬೆಳಗುತ್ತಿದ್ದಾರೆ. ಲೆವಿಟಿಂಗ್ ಬಲ್ಬ್ ಆಯಸ್ಕಾಂತಗಳು ಮತ್ತು ವಿದ್ಯುತ್ ಸಹಾಯದಿಂದ ತೇಲುತ್ತದೆ. ನಾವು ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಗ್ರಾಹಕರು ಇದನ್ನು ರೂ. 8000 ರ ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು ಮತ್ತು ಇದು ತಂತ್ರಜ್ಞಾನವನ್ನು ಕಡಿಮೆ ಮಾಡಲು ಕೈಗೆಟುಕುವ ಬೆಲೆಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News