ನವದೆಹಲಿ : EPFO Lates News : ಪ್ರತಿಯೊಬ್ಬ ಉದ್ಯೋಗಿಯು ತನ್ನದೇ ಆದ ಪಿಎಫ್ ಸಂಖ್ಯೆಯನ್ನು (PF Number) ಹೊಂದಿರುತ್ತಾರೆ. ತಮ್ಮ ಪಿಎಫ್ ಖಾತೆಯ ಕಾಂಟ್ರಿಬ್ಯೂಶನ್ ಎಷ್ಟು ಎನ್ನುವುದನ್ನು ಎಲ್ಲರೂ ತಿಳಿದುಕೊಳ್ಳಬಹುದು. ಆದರೆ, ನಿಮ್ಮ ಪಿಎಫ್ ಸಂಖ್ಯೆಯಲ್ಲಿ ಹಲವು ಮಾಹಿತಿಗಳು ಅಡಗಿವೆ ಎನ್ನುವ ವಿಚಾರ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಪಿಎಫ್ ಖಾತೆ ಸಂಖ್ಯೆಯು ಅಂಕಿಗಳ ಜೊತೆಗೆ ಕೆಲವು ಅಕ್ಷರಗಳನ್ನು ಕೂಡಾ ಹೊಂದಿದೆ. ಪಿಎಫ್ ಖಾತೆ ಸಂಖ್ಯೆ ಮತ್ತು ಅದರ ಕೋಡಿಂಗ್ ವಿವರಗಳು ಇಲ್ಲಿವೆ .
ಪಿಎಫ್ ಖಾತೆ ಸಂಖ್ಯೆ ಎಂದರೇನು?
ಪಿಎಫ್ ಖಾತೆ ಸಂಖ್ಯೆಯನ್ನು (PF Account number) ಆಲ್ಫಾನ್ಯೂಮರಿಕ್ ಸಂಖ್ಯೆ ಎಂದು ಕರೆಯಲಾಗುತ್ತದೆ. ಇದು ಕೆಲವು ವರ್ಣಮಾಲೆಗಳು ಮತ್ತು ಅಂಕಿಗಳಲ್ಲಿ ಕೆಲವು ವಿಶೇಷ ಮಾಹಿತಿಯನ್ನು ಹೊಂದಿದೆ. ಈ ಸಂಖ್ಯೆಯು ರಾಜ್ಯ, ಪ್ರಾದೇಶಿಕ ಕಚೇರಿ, ಎಸ್ಟಾಬ್ಲಿಶ್ ಮೆಂಟ್ (ಕಂಪನಿ) ಮತ್ತು ಪಿಎಫ್ ಸದಸ್ಯ ಕೋಡ್‌ನ ವಿವರಗಳನ್ನು ಒಳಗೊಂಡಿದೆ.
ಇದನ್ನೂ ಓದಿ : Price Hike: ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆ ಬಿಸಿ..! ಸಾಬೂನ್ , ಸರ್ಫ್ ಸೇರಿದಂತೆ ಈ ಎಲ್ಲಾ ವಸ್ತುಗಳ ದರದಲ್ಲಿ ಹೆಚ್ಚಳ
ಆಲ್ಫಾನ್ಯೂಮರಿಕ್ ಸಂಖ್ಯೆ ಎಂದರೇನು?
ಉದಾಹರಣೆಗೆ,
XX - ರಾಜ್ಯ ಕೋಡ್
XXX - ಪ್ರದೇಶ ಕೋಡ್
1234567 - ಎಸ್ಟಾಬ್ಲಿಶ್ ಮೆಂಟ್ ಕೋಡ್
XX1 - ಎಕ್ಸ್ ಟೆನ್ಶನ್ (ಯಾವುದಾದರೂ ಇದ್ದರೆ)
7654321 - ಖಾತೆ ಸಂಖ್ಯೆ.
ಪ್ರತಿಯೊಬ್ಬ ಉದ್ಯೋಗಿಗೆ ಯುಎಎನ್ ಇದೆಯೇ?
EPFOನ ಪ್ರತಿಯೊಬ್ಬ ಸದಸ್ಯರು ಯುನಿವರ್ಸಲ್ ಅಕೌಂಟ್ ನಂಬರ್ (UAN) ಅನ್ನು ಹೊಂದಿರುತ್ತಾರೆ. ಪ್ರತಿ ಉದ್ಯೋಗಿಯ UAN ಬೇರೆ ಬೇರೆಯಾಗಿರುತ್ತದೆ. ಉದ್ಯೋಗಿ ಕಂಪನಿಯನ್ನು ಬದಲಾಯಿಸುವ ವೇಳೆ, ಬೇರೆ ಬೇರೆ ಪಿಎಫ್ ಖಾತೆಗಳು ಇರುತ್ತವೆ. ಆದರೆ, ಯುಎಎನ್ ಖಾತೆ ಕೇವಲ ಒಂದೇ ಆಗಿರುತ್ತದೆ. ಒಂದು UAN ನಲ್ಲಿ, ಬೇರೆ ಬೇರೆ PF ನ ವಿವರಗಳನ್ನು ನೋಡಬಹುದು.
ಇದನ್ನೂ ಓದಿ : ಗ್ರಾಹಕರಿಗೆ ಮನೆ ಬಾಗಿಲಿಗೆ ವಿತರಣೆಯಾಗಲಿದೆ ಡಿಸೇಲ್, BPCL ಆರಂಭಿಸಿದೆ 'Safar20' ಸೇವೆ
SMS ಮೂಲಕ PF ಬ್ಯಾಲೆನ್ಸ್ ಚೆಕ್ ಮಾಡಿ :
EPFO ಚಂದಾದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ SMS ಮತ್ತು ಮಿಸ್ಡ್ ಕಾಲ್ ನೀಡುವ ಮೂಲಕ ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ, ಮೆಸೇಜ್ ಬಾಕ್ಸ್ ನಲ್ಲಿ EPFOHO UAN ಎಂದು ಟೈಪ್ ಮಾಡಿ, ಅದನ್ನು 7738299899 ನಂಬರ್ ಗೆ ಕಳುಹಿಸಬೇಕು. ಆಗ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದು ತಿಳಿಯುತ್ತದೆ. ಇದಲ್ಲದೇ, ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 011-22901406 ಗೆ ಮಿಸ್ಡ್ ಕಾಲ್ ಕೂಡಾ ನೀಡಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.