ATM New Rules: ಈ ಸರ್ಕಾರಿ ಬ್ಯಾಂಕ್‌ ಗ್ರಾಹಕರು ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಈ ಹೊಸ ನಿಯಮವನ್ನು ತಪ್ಪದೇ ಓದಿ

ATM New Rules: ಇತ್ತೀಚಿಗೆ ಸರ್ಕಾರಿ ವಲಯದ ಬ್ಯಾಂಕ್‌ ಒಂದು ಎಟಿಎಂ ವಹಿವಾಟಿಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ನೀವು ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರೆ ಎಟಿಎಂ ಅಥವಾ ಇನ್ನಾವುದೇ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಹಣದ ವಹಿವಾಟು ನಡೆಸುವ ಮೊದಲು ಈ ಹೊಸ ನಿಯಮಗಳ ಬಗ್ಗೆ ತಪ್ಪದೇ ತಿಳಿಯಿರಿ.

Written by - Yashaswini V | Last Updated : Dec 6, 2022, 07:43 AM IST
  • ಸರ್ಕಾರಿ ವಲಯದ ಜನಪ್ರಿಯ ಬ್ಯಾಂಕ್‌ ಇತ್ತೀಚಿಗೆ ಎಟಿಎಂ ವಹಿವಾಟಿಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ.
  • ನೀವೂ ಈ ಬ್ಯಾಂಕ್ ಗ್ರಾಹಕರಾಗಿದ್ದರೆ, ಈ ನಿಯಮಗಳ ಬಗ್ಗೆ ತಪ್ಪದೇ ತಿಳಿಯಿರಿ
  • ಈ ಬ್ಯಾಂಕ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಟಿಎಂ ನಗದು, ಪಿಒಸಿ ಮತ್ತು ಇ-ಕಾಮರ್ಸ್ ವಹಿವಾಟಿನ ದೈನಂದಿನ ವಹಿವಾಟಿನ ಮಿತಿಯನ್ನು ಹೆಚ್ಚಿಸಿದೆ.
ATM New Rules: ಈ ಸರ್ಕಾರಿ ಬ್ಯಾಂಕ್‌ ಗ್ರಾಹಕರು ಎಟಿಎಂನಲ್ಲಿ ಹಣ ಡ್ರಾ ಮಾಡುವ ಮುನ್ನ ಈ ಹೊಸ ನಿಯಮವನ್ನು ತಪ್ಪದೇ ಓದಿ  title=
ATM New Rules

ATM New Rules: ಸರ್ಕಾರಿ ವಲಯದ ಜನಪ್ರಿಯ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ ಇತ್ತೀಚಿಗೆ ಎಟಿಎಂ ವಹಿವಾಟಿಗೆ ಸಂಬಂಧಿಸಿದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಎಟಿಎಂ ಅಥವಾ ಇನ್ನಾವುದೇ ಕ್ರೆಡಿಟ್, ಡೆಬಿಟ್ ಕಾರ್ಡ್ ಮೂಲಕ ಹಣದ ವಹಿವಾಟು ನಡೆಸುವ ಮೊದಲು ಬ್ಯಾಂಕಿನ ಹೊಸ ನಿಯಮಗಳ ಬಗ್ಗೆ ತಪ್ಪದೇ ತಿಳಿಯಿರಿ.

ಕೆನರಾ ಬ್ಯಾಂಕ್ ಗ್ರಾಹಕರಿಗಾಗಿ ಹೊಸ ನಿಯಮ: 
ಕೆನರಾ ಬ್ಯಾಂಕ್ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಟಿಎಂ ನಗದು, ಪಿಒಸಿ ಮತ್ತು ಇ-ಕಾಮರ್ಸ್ ವಹಿವಾಟಿನ ದೈನಂದಿನ ವಹಿವಾಟಿನ ಮಿತಿಯನ್ನು ಹೆಚ್ಚಿಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ಸೈಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಕೆನರಾ ಬ್ಯಾಂಕ್, ಹೊಸ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ- PM Kisan Yojana : ರೈತರಿಗೆ ಭರ್ಜರಿ ಗಿಫ್ಟ್ ನೀಡಿದ ಪಿಎಂ! ಖಾತೆಗೆ ಬರಲಿದೆ ₹15 ಲಕ್ಷ, ಹೀಗೆ ಅರ್ಜಿ ಹಾಕಿ

ಏನಿದು ಹೊಸ ನಿಯಮ:
>> ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ, ಕೆನರಾ ಬ್ಯಾಂಕ್‌ನಿಂದ ಕಾರ್ಡ್ ವಹಿವಾಟಿನ ಸುರಕ್ಷತೆಯನ್ನು ಸಹ ಹೆಚ್ಚಿಸಲಾಗಿದೆ. 
>> ಬ್ಯಾಂಕ್ ಕ್ಲಾಸಿಕ್ ಡೆಬಿಟ್ ಕಾರ್ಡ್‌ನ ಎಟಿಎಂ ವಹಿವಾಟಿನ ಮಿತಿಯನ್ನು ದಿನಕ್ಕೆ 40,000 ರಿಂದ 75,000 ಕ್ಕೆ ಹೆಚ್ಚಿಸಿರುವುದಾಗಿ ತಿಳಿಸಿದೆ.
>> ಇದಲ್ಲದೆ, ಈ ಕಾರ್ಡ್‌ಗಳಿಗೆ ದೈನಂದಿನ ಪಿಒಸಿ ಕ್ಯಾಪ್ ಅನ್ನು 1 ಲಕ್ಷದಿಂದ 2 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. 
>> ಮತ್ತೊಂದೆಡೆ, ನೀವು ಕ್ಲಾಸಿಕ್ ಡೆಬಿಟ್ ಕಾರ್ಡ್ ಮೂಲಕ NFC ಗಾಗಿ ದೈನಂದಿನ ವಹಿವಾಟಿನ ಮಿತಿಯನ್ನು 25,000 ರೂಪಾಯಿಗಳಲ್ಲಿ ಇರಿಸಿಕೊಳ್ಳಲು ನಿರ್ಧರಿಸಿದ್ದರೆ. ಅದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂಬುದು ಗಮನಾರ್ಹ ಸಂಗತಿ.

ಇದನ್ನೂ ಓದಿ- Best Mileage Car: ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಮೈಲೇಜ್ ನೀಡುತ್ತೆ ಮಾರುತಿ ಸುಜುಕಿಯ ಈ ಕಾರ್

ಒಂದೊಮ್ಮೆ ನೀವು ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದು ನೀವು ಪ್ಲಾಟಿನಂ/ಬಿಸಿನೆಸ್/ಸೆಲೆಕ್ಟ್ ಡೆಬಿಟ್ ಕಾರ್ಡ್ ಹೊಂದಿದ್ದರೆ, ಅದರ ನಗದು ವಹಿವಾಟಿನ ಮಿತಿಯನ್ನು ಕೂಡ ಹೆಚ್ಚಿಸಲಾಗಿದೆ. ಈ ಕಾರ್ಡ್‌ಗಳ ನಗದು ವಹಿವಾಟಿನ ಮಿತಿಯನ್ನು  50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಅದೇ ಸಮಯದಲ್ಲಿ, ಅದರ POS ಗಾಗಿ ದೈನಂದಿನ ವಹಿವಾಟಿನ ಮಿತಿಯನ್ನು 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲು ಬ್ಯಾಂಕ್ ನಿರ್ಧರಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News