ಬ್ಯಾಟರಿ ಇಲ್ಲದ ಈ ಎಲೆಕ್ಟ್ರಿಕ್ ಸ್ಕೂಟರ್ 40% ಅಗ್ಗವಾಗಲಿದೆ, ಮುಂದಿನ ತಿಂಗಳು ‘Bounce’ ಭಾರತಕ್ಕೆ ಬರಲಿದೆ!

ಭಾರತದಲ್ಲಿ ಇ-ಸ್ಕೂಟರ್‌ನ ಪೂರ್ವ-ಬುಕಿಂಗ್(Pre-booking) ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದೇವೆ ಎಂದು ಇಲೆಕ್ಟ್ರಿಕ್ ವಾಹನ ತಯಾರಕರು ಹೇಳಿದ್ದಾರೆ.

Written by - Puttaraj K Alur | Last Updated : Nov 14, 2021, 09:45 AM IST
  • ಶೀಘ್ರವೇ ಭಾರತೀಯ ಮಾರುಕಟ್ಟೆಗೆ Bounce ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ
  • 2022ರ ಜನವರಿಯಿಂದ ಗ್ರಾಹಕರ ಕೈಸೇರಲಿರುವ Bounce E-scooterಗಳು
  • Ola S1 & TVS iCube ಸೇರಿ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿರುವ Bounce
ಬ್ಯಾಟರಿ ಇಲ್ಲದ ಈ ಎಲೆಕ್ಟ್ರಿಕ್ ಸ್ಕೂಟರ್ 40% ಅಗ್ಗವಾಗಲಿದೆ, ಮುಂದಿನ ತಿಂಗಳು ‘Bounce’ ಭಾರತಕ್ಕೆ ಬರಲಿದೆ!  title=
Bounce ಕಂಪನಿಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಎಂಟ್ರಿ

ನವದೆಹಲಿ: Bounce ಕಂಪನಿಯ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬೌನ್ಸ್ ಇನ್ಫಿನಿಟಿ(Bounce Infinity)ಯನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. Infinity EV ಸ್ಕೂಟರ್ ಅನ್ನು ಭಾರತದಲ್ಲಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರಾಹಕರಿಗೆ ಇಷ್ಟವಾಗುವ ಅತ್ಯುತ್ತಮ ವೈಶಿಷ್ಟ್ಯಗಳನ್ನು ಈ ಸ್ಕೂಟರ್ ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಭಾರತದಲ್ಲಿ ಇ-ಸ್ಕೂಟರ್‌ನ ಪೂರ್ವ-ಬುಕಿಂಗ್(Pre-booking) ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಿದ್ದೇವೆ ಎಂದು ಇಲೆಕ್ಟ್ರಿಕ್ ವಾಹನ ತಯಾರಕರು ಹೇಳಿದ್ದಾರೆ. ಆದರೆ Bounce E-scooterಗಳನ್ನು ಗ್ರಾಹಕರಿಗೆ ಹಸ್ತಾಂತರಿಸುವ ಕೆಲಸ ಜನವರಿ 2022ರಿಂದ ಪ್ರಾರಂಭವಾಗಲಿದೆ. ಪ್ರಸ್ತುತ ಕಂಪನಿಯು ಇಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಗಳನ್ನು ಘೋಷಿಸಿಲ್ಲ, ಡಿಸೆಂಬರ್ ಮೊದಲ ವಾರದಲ್ಲಿ ಈ ಬಗ್ಗೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: SHOCKING: ಫ್ಲಿಪ್‌ಕಾರ್ಟ್ ನಲ್ಲಿ ಐಪೋನ್ ಬುಕ್ ಮಾಡಿದ ವ್ಯಕ್ತಿಗೆ ಸಿಕ್ಕಿದ್ದೇನು ಗೊತ್ತಾ?

ಬೌನ್ಸ್ ಇನ್ಫಿನಿಟಿ ಎಲೆಕ್ಟ್ರಿಕ್ ಸ್ಕೂಟರ್(Bounce Infinity Electric Scooter)ಸ್ಮಾರ್ಟ್, ಡಿಟ್ಯಾಚೇಬಲ್ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುತ್ತದೆ. ಅಗತ್ಯವಿದ್ದರೆ ಈ ಬ್ಯಾಟರಿಯನ್ನು ಸ್ಕೂಟರ್‌ನಿಂದ ಬೇರ್ಪಡಿಸಬಹುದು ಮತ್ತು ಅದನ್ನು ಅನುಕೂಲಕ್ಕೆ ಅನುಗುಣವಾಗಿ ಚಾರ್ಜ್ ಮಾಡಬಹುದು. ಕಂಪನಿಯು ಸ್ಕೂಟರ್‌ನಲ್ಲಿ ವಿಶಿಷ್ಟವಾದ 'Battery as a Service' ಆಯ್ಕೆಯನ್ನು ಸಹ ನೀಡುತ್ತಿದೆ. ಇಲ್ಲಿ ಗ್ರಾಹಕರು ಬ್ಯಾಟರಿ ಇಲ್ಲದೆಯೇ ಸ್ಕೂಟರ್ ಅನ್ನು ಖರೀದಿಸಬಹುದು. ಗ್ರಾಹಕರ ಬಜೆಟ್ ಗೆ ತಕ್ಕಂತೆ ಈ ಸ್ಕೂಟರ್ ಅನ್ನು ಅತ್ಯುತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

ಗ್ರಾಹಕರು ಬೌನ್ಸ್ ಬ್ಯಾಟರಿ-ಸ್ವಾಪಿಂಗ್ ನೆಟ್‌ವರ್ಕ್(Electric Vehicle Charging Stations) ಸಹಾಯದಿಂದ ಚಾರ್ಜಿಂಗ್ ಪಾಯಿಂಟ್ ಗಳಲ್ಲಿ ಖಾಲಿಯಾದ ಬ್ಯಾಟರಿಗಳನ್ನು ಠೇವಣಿ ಮಾಡಿ ಫುಲ್ ಚಾರ್ಜ್ ಆಗಿರುವ ಮತ್ತೊಂದು ಬ್ಯಾಟರಿಯನ್ನು ಸ್ಕೂಟರ್‌ನೊಂದಿಗೆ ಬದಲಾಯಿಸಬಹುದು. ಬ್ಯಾಟರಿ ಹೊಂದಿರುವ ಸ್ಕೂಟರ್‌ಗಿಂತಲೂ ಶೇ.40 ರಷ್ಟು ಕಡಿಮೆ ವೆಚ್ಚದಲ್ಲಿ ನೀವು ಬ್ಯಾಟರಿ ಇಲ್ಲದ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ.

ಇದನ್ನೂ ಓದಿ: Good news...! ಕೇವಲ 634 ರೂಪಾಯಿಗೆ ಎಲ್‌ಪಿಜಿ ಸಿಲಿಂಡರ್ ಲಭ್ಯ

ಹೊಸ Infinity EV ಸ್ಕೂಟರ್ ಬಗ್ಗೆ ಕಂಪನಿಯು ಇನ್ನೂ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಈ ಮಧ್ಯೆ ಕಂಪನಿಯು 2021ರಲ್ಲಿ 22 ಮೋಟಾರ್‌ಗಳ ಶೇ.100ರಷ್ಟು ಸುಮಾರು 52 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿದೆ ಎಂದು ಘೋಷಿಸಿದೆ. ಈ ಒಪ್ಪಂದದಡಿ ಎಲೆಕ್ಟ್ರಿಕ್ ವಾಹನ ತಯಾರಕರು ರಾಜಸ್ಥಾನದ 22 ಮೋಟಾರ್ಸ್‌ನ ಭಿವಾಡಿ ಸ್ಥಾವರ ಮತ್ತು ಅಲ್ಲಿನ ಆಸ್ತಿಯ ಮೇಲೆ ಹಕ್ಕುಗಳನ್ನು ಪಡೆದುಕೊಂಡಿದೆ. ಈ ಸ್ಥಾವರದಲ್ಲಿ ವಾರ್ಷಿಕವಾಗಿ 1,80,000 ಸ್ಕೂಟರ್‌ಗಳನ್ನು ಉತ್ಪಾದಿಸಬಹುದಾಗಿದ್ದು, ಇದಲ್ಲದೇ ದಕ್ಷಿಣ ಭಾರತದಲ್ಲಿಯೂ ಹೊಸ ಪ್ಲಾಂಟ್ ಆರಂಭಿಸುವ ಯೋಜನೆಯನ್ನು ಕಂಪನಿ ಪ್ರಕಟಿಸಿದೆ. ಈ ಸ್ಕೂಟರ್ Ola S1 ಮತ್ತು TVS iCube ಜೊತೆಗೆ ಅನೇಕ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News