Changes From July: ಜುಲೈ ಒಂದರಿಂದ ಆಗಲಿದೆ ಈ ಎಲ್ಲಾ ಬದಲಾವಣೆ : ಜೇಬಿಗೆ ಬೀಳಲಿದೆ ಕತ್ತರಿ

Changes From July: ಜುಲೈ 1 ರಿಂದ ನಿಮ್ಮ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಆಗಲಿವೆ.

Written by - Ranjitha R K | Last Updated : Jun 28, 2021, 08:57 AM IST
  • ಜುಲೈ ಒಂದರಿಂದ ಜೇಬಿಗೆ ಬೀಳಲಿದೆ ಕತ್ತರಿ
  • ಅಡುಗೆಮನೆಯಿಂದ ಹಿಡಿದು ಕಾರಿನವರೆಗೆ ಎಲ್ಲದರ ಮೇಲೂ ಪರಿಣಾಮ
  • ನಿಮ್ಮ ಜೀವನದಲ್ಲಿ ಆಗಲಿರುವ ಬದಲಾವಣೆಗಳನ್ನು ತಿಳಿದುಕೊಳ್ಳಿ
Changes From July: ಜುಲೈ ಒಂದರಿಂದ ಆಗಲಿದೆ ಈ ಎಲ್ಲಾ ಬದಲಾವಣೆ : ಜೇಬಿಗೆ ಬೀಳಲಿದೆ ಕತ್ತರಿ title=
ಜುಲೈ ಒಂದರಿಂದ ಜೇಬಿಗೆ ಬೀಳಲಿದೆ ಕತ್ತರಿ (photo zee news)

ನವದೆಹಲಿ :  Changes From July: ಜುಲೈ 1 ರಿಂದ ನಿಮ್ಮ ಜೀವನದಲ್ಲಿ ಅನೇಕ ದೊಡ್ಡ ಬದಲಾವಣೆಗಳು ಆಗಲಿವೆ. ಅಡುಗೆಮನೆಯಿಂದ ಹಿಡಿದು ನಿಮ್ಮ ಕಾರಿನವರೆಗೆ ಎಲ್ಲದರ ಮೇಲೂ ಈ ಬದಲಾವಣೆ ಪರಿಣಾಮ ಬೀರಲಿದೆ. ಹಾಗಿದ್ದರೆ ಯಾವ ಬದಲಾವಣೆಗಳು ಆಗಲಿವೆ ನೋಡೋಣ.. 

1. ಎಸ್‌ಬಿಐ ಎಟಿಎಂನಿಂದ ಹಣ ವಿತ್ ಡ್ರಾ ದುಬಾರಿ : 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State bank of India) ತನ್ನ ಹಲವು ಪ್ರಮುಖ ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಇದು ಜುಲೈ 1 ರಿಂದ ಅನ್ವಯವಾಗಲಿದೆ. ಜುಲೈ ಒಂದರಿಂದ ಎಟಿಎಂನಿಂದ (ATM) ಹಣವನ್ನು ವಿತ್ ಡ್ರಾ ಮಾಡುವುದು ದುಬಾರಿಯಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂ ಮತ್ತು ಬ್ಯಾಂಕ್ ಸೇವೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಎಸ್‌ಬಿಐ (SBI) ಗ್ರಾಹಕರು ನಾಲ್ಕು ಬಾರಿಗಿಂತ ಹೆಚ್ಚು ಬ್ಯಾಂಕ್ ಮತ್ತು ಎಟಿಎಂನಿಂದ ಹಣವನ್ನು ಪಡೆಯುವುದಾದರೆ, ಪ್ರತಿ ವಹಿವಾಟಿನ ಮೇಲೆ 15 ರೂ. ಮತ್ತು ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

ಇದನ್ನೂ ಓದಿ : Fact Check: ಜುಲೈ ತಿಂಗಳಿನಿಂದ DA-DR ಸಿಗಲಿದೆ! ಸರ್ಕಾರಿ ನೌಕರರು ಓದಲೇ ಬೇಕಾದ ಸುದ್ದಿ ಇದು

2.  ದುಬಾರಿಯಾಗಲಿದೆ ಎಸ್ ಬಿಐ ಚೆಕ್ ಬುಕ್ : 
ಎಸ್ಬಿಐ 10 ಚೆಕ್‌ ಗಳಿಗೆ  ಬಿಎಸ್‌ಬಿಡಿ ಖಾತೆದಾರರಿಗೆ ಯಾವ ಶುಲ್ಕವನ್ನೂ ವಿಧಿಸುವುದಿಲ್ಲ. ಆದರೆ  10 ಚೆಕ್ ಗಳ  ನಂತರ 40 ರೂ ಮತ್ತು ಜಿಎಸ್‌ಟಿ (GST) ವಿಧಿಸಲಾಗುತ್ತದೆ. ಅದೇ ಸಮಯದಲ್ಲಿ, 25 ಚೆಕ್ ಹೊಂದಿರುವ ಚೆಕ್ ಪುಸ್ತಕದ ಮೇಲೆ  75 energency ಚೆಕ್ ಬುಕ್ ಬೇಕಾದಲ್ಲಿ 50 ರು ಶುಲ್ಕ ಪಾವತಿಸಬೇಕಾಗುತ್ತದೆ. ಹಿರಿಯ ನಾಗರಿಕರಿಗೆ ಚೆಕ್ ಪುಸ್ತಕಗಳಲ್ಲಿನ ಹೊಸ ಸೇವಾ ಶುಲ್ಕದಿಂದ ವಿನಾಯಿತಿ ನೀಡಲಾಗುವುದು. 

3. ಎಲ್ಪಿಜಿ ಸಿಲಿಂಡರ್ ಬೆಲೆಗಳು ಬದಲಾಗುತ್ತವೆ :
ಜುಲೈ 1 ರಿಂದ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಪರಿಷ್ಕರಿಸಲಾಗುವುದು. ತೈಲ ಕಂಪನಿಗಳು ಜೂನ್ ತಿಂಗಳಲ್ಲಿ ಬೆಲೆಗಳನ್ನು ಹೆಚ್ಚಿಸಿಲ್ಲ. ಆದರೆ ಕಚ್ಚಾ ತೈಲ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನೂ ಹೆಚ್ಚಿಸಬಹುದೆಂಬ ಆತಂಕವಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಗದಿಪಡಿಸಲಾಗುತ್ತದೆ. 

4.ಟಿಡಿಎಸ್, ಟಿಸಿಎಸ್ ಕಡಿತದಲ್ಲೂ ಬದಲಾವಣೆ : 
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸದವರ ಮೇಲೆ ಜುಲೈ 1 ರಿಂದ ಹೆಚ್ಚಿನ ಟಿಡಿಎಸ್ (TDS), ಟಿಸಿಎಸ್ ಶುಲ್ಕ ವಿಧಿಸಲು ಸಿದ್ಧತೆಗಳು ನಡೆಯುತ್ತಿವೆ. ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸದವರನ್ನು ಈಗ ಕಟ್ಟುನಿಟ್ಟಾಗಿ ಪರಿಗಣಿಸಲು ಆದಾಯ ತೆರಿಗೆ ಇಲಾಖೆ ನಿರ್ಧರಿಸಿದೆ. 

ಇದನ್ನೂ ಓದಿ : LPG Cylinder Discount: ಕೇವಲ ರೂ.9 ಕ್ಕೆ ಮನೆಗೆ ಬರಲಿದೆ LPG Cylinder, ಈ ಮೊಬೈಲ್ ಆಪ್ ಮೇಲೆ ಬುಕಿಂಗ್ ಮಾಡಿ

5. ಸಿಂಡಿಕೇಟ್ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್ : 
ಸಿಂಡಿಕೇಟ್ ಬ್ಯಾಂಕಿನ ಐಎಫ್‌ಎಸ್‌ಸಿ (IFSC) ಕೋಡ್ ಜುಲೈ 1 ರಿಂದ ಬದಲಾಗುತ್ತದೆ. ಕೆನರಾ ಬ್ಯಾಂಕ್‌ನೊಂದಿಗೆ ಬ್ಯಾಂಕ್ ವಿಲೀನಗೊಂಡಿರುವುದರಿಂದ ಸಿಂಡಿಕೇಟ್ ಬ್ಯಾಂಕ್ ಖಾತೆದಾರರು ಹೊಸ ಐಎಫ್‌ಎಸ್‌ಸಿ ಕೋಡ್‌ಗಳನ್ನು ಪಡೆಯಬೇಕಾಗುತ್ತದೆ. ಕೆನರಾ ಬ್ಯಾಂಕ್ ಹೊಸ ಐಎಫ್‌ಎಸ್‌ಸಿ ಕೋಡ್ ಪಡೆಯಲು ಸಿಂಡಿಕೇಟ್ ಬ್ಯಾಂಕಿನ ಎಲ್ಲಾ ಖಾತೆದಾರರಿಗೆ ಮನವಿ ಮಾಡಿದೆ. ಹೊಸ ಐಎಫ್‌ಎಸ್‌ಸಿ ಕೋಡ್ (Syndicate Bank) ಇಲ್ಲದೆ, ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಯಾವುದೇ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಕೆನರಾ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ ಹೊಸ ಐಎಫ್‌ಎಸ್‌ಸಿ ಕೋಡ್‌ಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜುಲೈ 1 ರಿಂದ ಹಳೆಯ ಚೆಕ್‌ಬುಕ್‌ಗಳ ಬದಲಿಗೆ ಸಿಂಡಿಕೇಟ್ ಬ್ಯಾಂಕ್ ಗ್ರಾಹಕರಿಗೆ ಹೊಸ ಚೆಕ್‌ಬುಕ್‌ಗಳನ್ನು ಸಹ ನೀಡಲಿದೆ. 

6. ದುಬಾರಿಯಾಗಲಿವೆ ಮಾರುತಿ ಕಾರುಗಳು : 
ನೀವು ಸಹ ಮಾರುತಿ ಕಾರನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದೇ ತಿಂಗಳು ಖರೀದಿಸುವುದು ಉತ್ತ. ಏಕೆಂದರೆ ಜುಲೈ ಒಂದರಿಂದ ಎಲ್ಲಾ ಮಾರುತಿ ಕಾರುಗಳು ದುಬಾರಿಯಾಗಲಿವೆ. ಮುಂದಿನ ತಿಂಗಳಿನಿಂದ ಅಂದರೆ ಜುಲೈನಿಂದ ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಮಾರುತಿ ಸುಜುಕಿ ಇಂಡಿಯಾ (Maruti Suzuki India) ಘೋಷಿಸಿದೆ. ಆದರೆ, ಬೆಲೆ ಎಷ್ಟು ಹೆಚ್ಚಿಸಲಾಗುವುದು ಎಂದು ಮಾರುತಿ ಇನ್ನೂ ತಿಳಿಸಿಲ್ಲ.

7. ಹೀರೋ ಕಾರುಗಳು ಸಹ ದುಬಾರಿಯಾಗಲಿವೆ :
ಲಾಕ್‌ಡೌನ್‌ (Lockdown) ಹಿನ್ನೆಲೆಯಲ್ಲಿ ಮಾರಾಟ ಸ್ಥಗಿತಗೊಂಡಿದ್ದರಿಂದ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಆಟೋ ಕಂಪನಿಗಳು,  ಈಗ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿವೆ. ಹೀರೋ ಮೊಟೊಕಾರ್ಪ್ (Hero Motocorp) ತನ್ನ ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಬೆಲೆಯಲ್ಲಿ ಹೆಚ್ಚಳವನ್ನು ಘೋಷಿಸಿದೆ. ಕಂಪನಿಯ ದ್ವಿಚಕ್ರ ವಾಹನಗಳ ಬೆಲೆ ಜುಲೈ 1, 2021 ರಿಂದ 3,000 ರೂ. ವರೆಗೆ ಹೆಚ್ಚಾಗಲಿದೆ. 

ಇದನ್ನೂ ಓದಿ : Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News