ಈ ಸುಲಭ ವಿಧಾನಗಳಲ್ಲಿ EPFO Balance Check ಮಾಡಿಕೊಳ್ಳಬಹುದು

ನಿಮ್ಮ ಮೊಬೈಲ್ ಸಂಖ್ಯೆಯನ್ನು ಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಿದ್ದರೆ, ಬರೀ ಮಿಸ್ಡ್ ಕಾಲ್ ನೀಡುವ ಮೂಲಕ ಪಿಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು.

Written by - Ranjitha R K | Last Updated : Mar 21, 2021, 02:31 PM IST
  • ಮನೆಯಲ್ಲಿ ಕುಳಿತುಕೊಂಡೆ ಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿಯಿರಿ
  • ಮಿಸ್ಡ್ ಕಾಲ್ ಮೂಲಕವೂ ಕಂಡುಹಿಡಿಯಬಹುದು ಪಿಎಫ್ ಬ್ಯಾಲೆನ್ಸ್
  • ಇಪಿಎಫ್‌ಒನ ಸೈಟ್‌ನಿಂದಲೂ ಮಾಹಿತಿ ಪಡೆದುಕೊಳ್ಳಬಹುದು
 ಈ ಸುಲಭ ವಿಧಾನಗಳಲ್ಲಿ EPFO Balance Check ಮಾಡಿಕೊಳ್ಳಬಹುದು  title=
ಮಿಸ್ಡ್ ಕಾಲ್ ಮೂಲಕವೂ ಕಂಡುಹಿಡಿಯಬಹುದು ಪಿಎಫ್ ಬ್ಯಾಲೆನ್ಸ್ (file photo)

ದೆಹಲಿ : ಕರೋನಾ ಕಾಲದಲ್ಲಿ ಜನರು ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದಾಗ, ಅದೆಷ್ಟೋ ಜನ ಪಿಎಫ್ (PF) ಖಾತೆಯಿಂದ ಹಣವನ್ನು ಹಿಂಪಡೆದಿದ್ದಾರೆ. ಇನ್ನು ಕೆಲವರಿಗೆ ತಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ಕೂಡಾ ಗೊತ್ತಿರುವುದಿಲ್ಲ. ನಿಮ್ಮ ಪಿಎಫ್ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತದ ಬಗ್ಗೆಯೂ ನಿಮಗೆ ಮಾಹಿತಿ ಇಲ್ಲದಿದ್ದರೆ, ಮನೆಯಲ್ಲಿ ಕುಳಿತುಕೊಂಡೆ ಪಿಎಫ್ ಖಾತೆಯ (PF account) ಸಂಪೂರ್ಣ ಮಾಹಿತಿಯನ್ನು ಹೇಗೆ ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ. 

ಮಿಸ್ಡ್ ಕಾಲ್ ಮೂಲಕ ಕಂಡುಹಿಡಿಯಬಹುದು ಪಿಎಫ್ ಬ್ಯಾಲೆನ್ಸ್ : 
ನಿಮ್ಮ ಮೊಬೈಲ್  (Mobile) ಸಂಖ್ಯೆಯನ್ನು ಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಿದ್ದರೆ, ಬರೀ ಮಿಸ್ಡ್ ಕಾಲ್ ನೀಡುವ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಇದಕ್ಕಾಗಿ 011-22901406 ಗೆ ಮಿಸ್ಡ್ ಕಾಲ್ (Missed call) ಕೊಡಬೇಕು. ಕಾಲ್ ಕಟ್ ಮಾಡಿದ ತಕ್ಷಣ ನಿಮಗೆ ಮೆಸೇಜ್ ಬರುತ್ತದೆ. ಈ ಮೆಸೇಜ್ ಮೂಲಕ ನಿಮ್ಮ ಖಾತೆಯಲ್ಲಿ ಇರಿಸಿರುವ ಠೇವಣಿ ಮೊತ್ತದ ಮಾಹಿತಿ ಸಿಗುತ್ತದೆ. 

ಇದನ್ನೂ  ಓದಿ ಅಂಚೆ ಕಚೇರಿ ಹೂಡಿಕೆಯಲ್ಲಿ ಉತ್ತಮ ರಿಟರ್ನ್ ಜೊತೆ ಸಿಗಲಿದೆ ತೆರಿಗೆ ವಿನಾಯಿತಿ

SMSನಿಂದ ಕೂಡಾ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು : 
ಪಿಎಫ್ (PF)  ಖಾತೆಯ ಬ್ಯಾಲೆನ್ಸ್ ಅನ್ನುSMS ಮೂಲಕವೂ ಪಡೆದುಕೊಳ್ಳಬಹುದು. ಇದಕ್ಕಾಗಿ 7738299899 ಸಂಖ್ಯೆಗೆ SMS ಮಾಡಬೇಕು. ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿದ್ದರೆ, ಕೂಡಲೇ ನಿಮಗೆ ಮೆಸೇಜ್ ಬರುತ್ತದೆ. ನಿಮ್ಮ ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತದ ಮಾಹಿತಿಯನ್ನು ಆ message ಹೊಂದಿರುತ್ತದೆ. ಇದಲ್ಲದೆ, UAN (Universal Account Number) ಸಹ ನಿಮಗೆ ತಿಳಿಯುತ್ತದೆ.

EPFO  ವೆಬ್‌ಸೈಟ್ ಮೂಲಕ : 
ಪಿಎಫ್ ಖಾತೆದಾರರು https://passbook.epfindia.gov.in/MemberPassBook/Login ನಲ್ಲಿ ಲಾಗ್ ಇನ್ ಆಗುವ  ಮೂಲಕ ತಮ್ಮ ಖಾತೆಯ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದು. ಇದಕ್ಕಾಗಿ, ಮೊದಲು UAN ಮತ್ತು password ಬಳಸಿ ಲಾಗ್ ಇನ್ ಆಗಬೇಕು. ನಂತರ ಪಾಸ್ ಬುಕ್ ಗೆ ಹೋಗಿ ಅಕೌಂಟ್ ಬ್ಯಾಲೆನ್ಸ್ ತಿಳಿದುಕೊಳ್ಳಬಹುದು. ಇಲ್ಲಿ ನಿಮ್ಮ ಪಿಎಫ್ ಖಾತೆಗೆ ಎಷ್ಟು ಹಣ ಜಮಾ ಮಾಡಲಾಗುತ್ತಿದೆ, ಆ ಹಣಕ್ಕೆ ಎಷ್ಟು ಬಡ್ಡಿ ಪಡೆಯಲಾಗಿದೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಕೂಡಾ  ಸಿಗುತ್ತದೆ. 

ಇದನ್ನೂ  ಓದಿ : SBI Debit Card ಕಳೆದಿದೆಯೇ? ಇಲ್ಲಿದೆ ಮತ್ತೊಂದು ಕಾರ್ಡ್ ಪಡೆಯುವ ಸುಲಭ ವಿಧಾನ

Umang App ನಿಂದಲೂ ಮಾಹಿತಿ ಪಡೆಯಬಹುದು:
ಪಿಎಫ್ ಖಾತೆಯ ಬ್ಯಾಲೆನ್ಸ್ ತಿಳಿಯಲು, ನೀವು play store ಅಥವಾ ಆಪ್ ಸ್ಟೋರ್‌ನಿಂದ Umang App ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಅಪ್ಲಿಕೇಶನ್‌ನಲ್ಲಿ ಅನೇಕ ಸರ್ಕಾರಿ ಸೇವೆಗಳು ಲಭ್ಯವಿದೆ. ಇದರಲ್ಲಿ, EPFO ಆಯ್ಕೆಯನ್ನು ಆರಿಸಿದ ನಂತರ, Employee Centric Service' ಸೆಲೆಕ್ಟ್  ಮಾಡಬೇಕು.  UAN ಸಂಖ್ಯೆಯನ್ನು ನಮೂದಿಸಿದ ನಂತರ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, ಅದರ ಮೂಲಕ View Passbookಗೆ ಹೋಗಿ ಬಾಕಿ ಮೊತ್ತವನ್ನು ನೋಡಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News