Buffalo: ಈ ಎಮ್ಮೆ ವೀರ್ಯ ಮಾರಾಟ ಮಾಡಿ ತಿಂಗಳಿಗೆ ರೂ.25 ಲಕ್ಷ ಗಳಿಸಿದ ಮಾಲೀಕ: ಅಂತಹ ಸ್ಪೆಶಾಲಿಟಿ ಏನಪ್ಪಾ?

Thailand Buffalo: ಮೊಂಗ್ಕೋಲ್ ಮೊಂಗ್‌ಫೆಟ್ ಎಂಬಾತ ತನ್ನ ಎಮ್ಮೆಯನ್ನು 'ಬಿಗ್ ಬಿಲಿಯನ್' ಎಂದು ಕರೆಯುತ್ತಾನೆ. ಈತನೇ ಲಕ್ಷಾಂತರ ರೂ. ಹಣವನ್ನು ಗಳಿಸಿದ್ದಾನೆ. ಇನ್ನು ಈ ಎಮ್ಮೆಯನ್ನು ಅನೇಕ ಸ್ಪರ್ಧೆಗಳಿಗೆ ಕರೆದುಕೊಂಡು ಹೋಗಲಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಗೆದ್ದಿದೆ. ಮೊಂಗ್‌ಫೆಟ್ ಬಳಿ ಇಂತಹ 20 ಎಮ್ಮೆಗಳಿವೆ

Written by - Bhavishya Shetty | Last Updated : Jan 19, 2023, 10:03 AM IST
    • ಎಮ್ಮೆಯ ವೀರ್ಯವನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ಹಣ ಗಳಿಕೆ
    • ಪ್ರತಿ ತಿಂಗಳು 25 ಲಕ್ಷ ರೂಪಾಯಿ ಆದಾಯ ಗಳಿಸಿದ ಮಾಲೀಕ
    • ಥಾಯ್ಲೆಂಡ್‌ನಲ್ಲಿ ಎಮ್ಮೆಯೊಂದು ಭಾರೀ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ
Buffalo: ಈ ಎಮ್ಮೆ ವೀರ್ಯ ಮಾರಾಟ ಮಾಡಿ ತಿಂಗಳಿಗೆ ರೂ.25 ಲಕ್ಷ ಗಳಿಸಿದ ಮಾಲೀಕ: ಅಂತಹ ಸ್ಪೆಶಾಲಿಟಿ ಏನಪ್ಪಾ?  title=
Murrah

Thailand Buffalo: ಥಾಯ್ಲೆಂಡ್‌ನಲ್ಲಿ ಎಮ್ಮೆಯೊಂದು ಭಾರೀ ಚರ್ಚೆಯ ವಿಷಯವಾಗಿ ಹೊರಹೊಮ್ಮಿದೆ. ಮಾಲೀಕನಿಗೆ ಪ್ರತಿ ತಿಂಗಳು ಅಪಾರ ಆದಾಯ ಬರಲು ಈ ಎಮ್ಮೆಯೇ ಕಾರಣ. ವಾಸ್ತವವಾಗಿ, ಈ ಎಮ್ಮೆಯ ವೀರ್ಯವನ್ನು ಮಾರಾಟ ಮಾಡುವ ಮೂಲಕ ಅದರ ಮಾಲೀಕರು ಪ್ರತಿ ತಿಂಗಳು 25 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಈ ಎಮ್ಮೆಯ ವೀರ್ಯವನ್ನು ತಳಿ ಸುಧಾರಣೆಗೆ ಬಳಸಲಾಗುತ್ತದೆ. ಇದರಿಂದ ಬರುವ ಜಾತಿಯ ಎಮ್ಮೆಗಳು ಶಕ್ತಿಯುತವಾಗಿರುತ್ತವೆ.

ಇದನ್ನೂ ಓದಿ: No Ball : ಕ್ರಿಕೆಟ್‌ ವೃತ್ತಿಜೀವನದಲ್ಲಿ ಒಂದೇ ಒಂದು No Ball ಎಸೆಯದ 5 ಶ್ರೇಷ್ಠ ಬೌಲರ್‌ಗಳಿವರು.!

ಮೊಂಗ್ಕೋಲ್ ಮೊಂಗ್‌ಫೆಟ್ ಎಂಬಾತ ತನ್ನ ಎಮ್ಮೆಯನ್ನು 'ಬಿಗ್ ಬಿಲಿಯನ್' ಎಂದು ಕರೆಯುತ್ತಾನೆ. ಈತನೇ ಲಕ್ಷಾಂತರ ರೂ. ಹಣವನ್ನು ಗಳಿಸಿದ್ದಾನೆ. ಇನ್ನು ಈ ಎಮ್ಮೆಯನ್ನು ಅನೇಕ ಸ್ಪರ್ಧೆಗಳಿಗೆ ಕರೆದುಕೊಂಡು ಹೋಗಲಾಗಿದ್ದು, ಹಲವು ಸ್ಪರ್ಧೆಗಳಲ್ಲಿ ಗೆದ್ದಿದೆ. ಮೊಂಗ್‌ಫೆಟ್ ಬಳಿ ಇಂತಹ 20 ಎಮ್ಮೆಗಳಿವೆ.

'ಬಿಗ್ ಬಿಲಿಯನ್' ಎಮ್ಮೆಯನ್ನು ಖರೀದಿಸಲು ಜನರ ಸಾಲು ನಿಂತಿದ್ದಾರೆ ಎಂದು ಕಲಾಸಿನ್ ನಗರದ ನಿವಾಸಿ ಮೊಗ್ಕೋಲ್ ಹೇಳುತ್ತಾರೆ. ಈ ಎಮ್ಮೆಯನ್ನು ಖರೀದಿಸಲು ರೈತರೊಬ್ಬರು ಏಳೂವರೆ ಕೋಟಿ ರೂಪಾಯಿ ಬೆಲೆ ನೀಡಿದ್ದಾರೆ ಎಂದು ತಿಳಿಸಿದರು. ಮೊಂಗ್ಕೋಲ್ ಈ ಎಮ್ಮೆಯನ್ನು 12 ಲಕ್ಷ ರೂ.ಗೆ ಖರೀದಿಸಿದ್ದಾರೆ. ಆದರೆ, ಇಂದು ಈ ಎಮ್ಮೆಯಿಂದಲೇ ಇವರ ಆದಾಯ ದುಪ್ಪಟ್ಟಾಗಲು ಸಾಧ್ಯವಾಗಿದೆ.

ಭಾರತದಲ್ಲಿಯೂ ಇದೆ ಈ ಎಮ್ಮೆ:

ಅಂದಹಾಗೆ, ಅಂತಹ ಬೆಲೆಬಾಳುವ ಎಮ್ಮೆ ಭಾರತದಲ್ಲಿಯೂ ಇದೆ. ಈ ಎಮ್ಮೆಯ ಹೆಸರು ಭೀಮ. ಇದು ಮುರ್ರಾ ಜಾತಿಗೆ ಸೇರಿದೆ. ಜೋಧಪುರದ ಜಾನುವಾರು ಜಾತ್ರೆಯಲ್ಲಿ ವಿದೇಶಿಗರೊಬ್ಬರು ಇದರ ಬೆಲೆ 24 ಕೋಟಿ ರೂ.ಗೆ ಕೊಡುವಂತೆ ಕೇಳಿದ್ದರು. ಆದರೆ ಎಮ್ಮೆ ಮಾಲೀಕರು ಅದನ್ನು ಮಾರಾಟ ಮಾಡಲು ನಿರಾಕರಿಸಿದ್ದರು.

ಮುರ್ರಾ ಎಮ್ಮೆಯನ್ನು ಸಾಕುವುದರ ಮೂಲಕ ಚೆನ್ನಾಗಿ ಹಣ ಗಳಿಸಬಹುದು. ನೀವು ಡೈರಿ ಸಂಬಂಧಿತ ಕೆಲಸವನ್ನು ಸಹ ಪ್ರಾರಂಭಿಸಬಹುದು. ಈ ತಳಿಯ ಎಮ್ಮೆ ದಿನಕ್ಕೆ 20 ರಿಂದ 30 ಲೀಟರ್ ವರೆಗೆ ಹಾಲು ನೀಡುತ್ತದೆ. ನೀವು ಅವುಗಳನ್ನು ಚೆನ್ನಾಗಿ ನೋಡಿಕೊಂಡರೆ ಅವು ಹೆಚ್ಚು ಹಾಲು ನೀಡಬಹುದು.

ಈ ತಳಿಯ ಎಮ್ಮೆಗಳನ್ನು ನೀವು ದೂರದಿಂದ ಗುರುತಿಸಬಹುದು. ಅವುಗಳ ಬಣ್ಣ ಗಾಢ ಕಪ್ಪು ಮತ್ತು ತಲೆಯ ಗಾತ್ರ ಚಿಕ್ಕದಾಗಿರುತ್ತದೆ. ದೇಹದ ರಚನೆ ಚೆನ್ನಾಗಿದ್ದು ಕೊಂಬುಗಳು ಉಂಗುರಗಳಂತಿರುತ್ತವೆ. ಇವುಗಳ ಬಾಲವೂ ಇತರ ತಳಿಯ ಎಮ್ಮೆಗಳಿಗಿಂತ ಉದ್ದವಾಗಿರುತ್ತದೆ. ಹರಿಯಾಣ, ಪಂಜಾಬ್ ನಲ್ಲಿ ಈ ತಳಿಯ ಎಮ್ಮೆಗಳನ್ನು ಹೆಚ್ಚಾಗಿ ಸಾಕುತ್ತಾರೆ.

ಇದನ್ನೂ ಓದಿ: ಈ ತಿಂಗಳ ಅಂತ್ಯದಲ್ಲಿ ಶನಿ ಸಂಚಾರದಲ್ಲಿ ಬದಲಾವಣೆ, ನಾಲ್ಕು ರಾಶಿಯವರಿಗೆ ಹಣದ ಸುರಿಮಳೆ

ಹೈನುಗಾರಿಕೆಯ ಹೊರತಾಗಿ, ಈ ತಳಿಯ ಎಮ್ಮೆಗಳನ್ನು ಖರೀದಿಸಿ ಮತ್ತು ಮಾರಾಟ ಮಾಡುವ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು. ಈ ರೀತಿಯ ಎಮ್ಮೆಗಳಿಗೆ ಬೇಡಿಕೆ ಉತ್ತಮವಾಗಿರುವುದರಿಂದ ಅವರು ಉತ್ತಮ ಹಣವನ್ನು ಗಳಿಸುತ್ತಾರೆ. ಒಂದು ಎಮ್ಮೆಗೆ 2 ಲಕ್ಷ ರೂ.ವರೆಗೆ ಬೆಲೆ ಇದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News