ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ತುಟ್ಟಿ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ

7th Pay Commission DA Hike: ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹೆಚ್ಚಳದಿಂದಾಗಿ ಶೇ.34ರಷ್ಟಿದ್ದ ತುಟ್ಟಿಭತ್ಯೆ ಈಗ ಶೇ.38ಕ್ಕೆ ಏರಿಕೆಯಾಗಿದೆ. 

Written by - Ranjitha R K | Last Updated : Sep 28, 2022, 02:32 PM IST
  • ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ
  • ಶೇ 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಒಪ್ಪಿಗೆ
  • ತುಟ್ಟಿಭತ್ಯೆ ಶೇ.34ರಿಂದ ಶೇ.38ಕ್ಕೆ ಏರಿಕೆ
ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್.! ತುಟ್ಟಿ ಭತ್ಯೆ ಹೆಚ್ಚಿಸಿ ಸರ್ಕಾರ ಆದೇಶ title=
7th pay commission (file photo)

7th Pay Commission DA Hike : ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಹೆಚ್ಚಳದಿಂದಾಗಿ ಶೇ.34ರಷ್ಟಿದ್ದ ತುಟ್ಟಿಭತ್ಯೆ ಈಗ ಶೇ.38ಕ್ಕೆ ಏರಿಕೆಯಾಗಿದೆ. ಸರ್ಕಾರದ ಈ ನಿರ್ಧಾರದಿಂದ ಅಸ್ತಿತ್ವದಲ್ಲಿರುವ 50 ಲಕ್ಷ ಕೇಂದ್ರ ನೌಕರರು ಮತ್ತು 62 ಲಕ್ಷ ಪಿಂಚಣಿದಾರರಿಗೆ ನೇರ ಲಾಭವಾಗಲಿದೆ.

ಜುಲೈ 1, 2022 ರಿಂದಲೇ ಅನ್ವಯ :  
ತುಟ್ಟಿ ಭತ್ಯೆ ಹೆಚ್ಚಳ ಜುಲೈ 1, 2022 ರಿಂದ ಅನ್ವಯವಾಗುತ್ತದೆ. ಈ ಹಿಂದೆ ಮಾರ್ಚ್ 2022 ರಲ್ಲಿ, ಜನವರಿಯಿಂದ ಡಿಎ ಹೆಚ್ಚಿಸಲು ಸರ್ಕಾರ ಘೋಷಿಸಿತ್ತು. ಆಗ ಕೇಂದ್ರ ನೌಕರರ ಡಿಎಯನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 4 ಶೇ ಹೆಚ್ಚಳವಾಗುವುದರೊಂದಿಗೆ  ತುಟ್ಟಿ ಭತ್ಯೆ ಶೇ.38ಕ್ಕೆ ಏರಿಕೆಯಾಗಿದೆ. ಇದರ ಪ್ರಕಾರ ಸೆಪ್ಟಂಬರ್ ತಿಂಗಳ ವೇತನದಲ್ಲಿ ನೌಕರರಿಗೆ ಎರಡು ತಿಂಗಳ ಡಿಎ ಅರಿಯರ್ ಸಿಗಲಿದೆ. 

ಇದನ್ನೂ ಓದಿ : ಶೀಘ್ರದಲ್ಲೇ ಬದಲಾಗಲಿದೆ ಆನ್‌ಲೈನ್ ಪೇಮೆಂಟ್ ನಿಯಮಗಳು.! ತಿಳಿದುಕೊಳ್ಳದಿದ್ದಲ್ಲಿ ಆಗುವುದು ನಷ್ಟ

ಈ ಆಧಾರದ ಮೇಲೆ ಏರಿಕೆಯಾಗುತ್ತದೆ ತುಟ್ಟಿಭತ್ಯೆ : 
ಲಕ್ಷಗಟ್ಟಲೆ ಉದ್ಯೋಗಿಗಳ ತುಟ್ಟಿಭತ್ಯೆ ಹೆಚ್ಚಳಕ್ಕಾಗಿ, ಕೇಂದ್ರ ಸರ್ಕಾರವು All India Consumer Price Index- Industrial Worker ಸೂಚ್ಯಂಕದ ಡೇಟಾವನ್ನು ಪರಿಗಣಿಸುತ್ತದೆ. AICPI-IW ಮೊದಲಾರ್ಧದ ಡೇಟಾದ ಆಧಾರದ ಮೇಲೆ ಜುಲೈನ DA ಅನ್ನು ಘೋಷಿಸಲಾಯಿತು. ಜೂನ್‌ನಲ್ಲಿ ಸೂಚ್ಯಂಕವು 129.2 ಕ್ಕೆ ಏರುವುದರೊಂದಿಗೆ, 4 ಶೇಕಡಾಕ್ಕೆ ಡಿಎ ಹೆಚ್ಚಳಕ್ಕೆ ದಾರಿ ಸುಗಮವಾಗಿತ್ತು. 

ಮೂಲ ವೇತನದಲ್ಲಿ ಎಷ್ಟು ಹೆಚ್ಚಳ : 
ತುಟ್ಟಿಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳವಾಗಿದ್ದು, ಜುಲೈ 1 ರಿಂದ ಅನ್ವಯವಾಗಲಿದೆ. ಡಿಎ ಶೇಕಡಾ 38 ಆಗಿರುವುದರಿಂದ ವೇತನದಲ್ಲಿಯೂ ಹೆಚ್ಚಳವಾಗಲಿದೆ. 4 ಶೇಕಡಾ DA ಯೊಂದಿಗೆ ಕನಿಷ್ಠ ಮತ್ತು ಗರಿಷ್ಠ ಮೂಲ ವೇತನವು ಎಷ್ಟು ಹೆಚ್ಚಾಗುತ್ತದೆ ಎಂದು ನೋಡೋಣ?

ಇದನ್ನೂ ಓದಿ ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಫ್ರೀ ರೇಷನ್ ಕುರಿತು ಮೋದಿ ಸರ್ಕಾರದಿಂದ ಮಹತ್ವದ ಘೋಷಣೆ

ಗರಿಷ್ಠ ಮೂಲ ವೇತನದ ಲೆಕ್ಕಾಚಾರ
1. ನೌಕರನ ಮೂಲ ವೇತನ 56,900  ರೂಪಾಯಿ  
2. ಹೊಸ ತುಟ್ಟಿಭತ್ಯೆ (38%) 21,622 ರೂ /ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%)  19,346 ರೂ/ತಿಂಗಳು
4. ಹೆಚ್ಚಳವಾದ ತುಟ್ಟಿ ಭತ್ಯೆ  21,622 - 19,346 =  2260 ರೂ/ತಿಂಗಳು
5. ವಾರ್ಷಿಕ ವೇತನದಲ್ಲಿ ಎಷ್ಟು ಹೆಚ್ಚಳ 2260 X12 =  27,120 ರೂ

ಕನಿಷ್ಠ ಮೂಲ ವೇತನದ ಲೆಕ್ಕಾಚಾರ
1. ಉದ್ಯೋಗಿಯ ಮೂಲ ವೇತನ  18,000  ರೂ
2. ಹೊಸ ತುಟ್ಟಿಭತ್ಯೆ (38%)  6840 ರೂ/ ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%)  6120 ರೂ/ತಿಂಗಳು
4. ಹೆಚ್ಚಳವಾದ ತುಟ್ಟಿ ಭತ್ಯೆ - 6840-6120 = 1080 ರೂ. /ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ 720X12= 8640 ರೂ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News