Budget 2024 : ಪಿಂಚಣಿ ಮತ್ತು ವರ್ಷಾಶನ ಯೋಜನೆಗಳ ಮೇಲೆ ತೆರಿಗೆ ವಿನಾಯಿತಿ : ಸರ್ಕಾರದ ಪ್ಲಾನ್ ಹೀಗಿದೆ

Budget 2024 :ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ಯಾವುದೇ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಲಾಗಿಲ್ಲ. ಆದರೂ ಮತದಾರರನ್ನು ಸೆಳೆಯಲು ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಬಹುದು ಎಂದು  ಮೂಲಗಳು ಹೇಳುತ್ತವೆ.   

Written by - Ranjitha R K | Last Updated : Jan 23, 2024, 03:37 PM IST
  • ವಿವಿಧ ಕ್ಷೇತ್ರಗಳ ವಿವಿಧ ಜನರು ಬಜೆಟ್ ಬಗ್ಗೆ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ.
  • ಪಿಂಚಣಿ ಮತ್ತು ವರ್ಷಾಶನ ಯೋಜನೆಗಳಲ್ಲಿ ಬದಲಾವಣೆಗಳು
  • ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಜೀವ ವಿಮೆಗೆ ಪ್ರತ್ಯೇಕ ವಿನಾಯಿತಿ
Budget 2024 : ಪಿಂಚಣಿ ಮತ್ತು ವರ್ಷಾಶನ ಯೋಜನೆಗಳ ಮೇಲೆ ತೆರಿಗೆ ವಿನಾಯಿತಿ : ಸರ್ಕಾರದ ಪ್ಲಾನ್ ಹೀಗಿದೆ  title=

Budget 2024 : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024-25 ನೇ ಹಣಕಾಸು ವರ್ಷದ ಬಜೆಟ್ ಅನ್ನು ಫೆಬ್ರವರಿ 1, 2024 ರಂದು ಮಂಡಿಸಲಿದ್ದಾರೆ. ಈ ವರ್ಷ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಈ ಬಜೆಟ್ ಮಧ್ಯಂತರ ಬಜೆಟ್ ಆಗಲಿದೆ. ಚುನಾವಣೆಯ ನಂತರ ಹೊಸ ಸರ್ಕಾರ ರಚನೆಯಾದ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಇದು ಮಧ್ಯಂತರ ಬಜೆಟ್ ಆಗಿರುವುದರಿಂದ ಯಾವುದೇ ಪ್ರಮುಖ ಘೋಷಣೆಗಳನ್ನು ನಿರೀಕ್ಷಿಸಲಾಗಿಲ್ಲ. ಆದರೂ ಮತದಾರರನ್ನು ಸೆಳೆಯಲು ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡಬಹುದು ಎಂದು  ಮೂಲಗಳು ಹೇಳುತ್ತವೆ. 

ಬಜೆಟ್ 2024 ನಿರೀಕ್ಷೆಗಳು : 
ವಿವಿಧ ಕ್ಷೇತ್ರಗಳ ವಿವಿಧ ಜನರು ಬಜೆಟ್ ಬಗ್ಗೆ ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ. ವಿತ್ತ ಸಚಿವರು ಮಾಡುವ ಘೋಷಣೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ. ತೆರಿಗೆ ನಿಯಮಗಳನ್ನು ಸರಳೀಕರಿಸುವುದು ಮತ್ತು ವರ್ಷಾಶನ ಯೋಜನೆಗಳ ಮೇಲಿನ ತೆರಿಗೆ ತೆಗೆದುಹಾಕುವುದರಿಂದ ಹೆಚ್ಚಿನವರು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಉತ್ತೇಜಿಸುತ್ತದೆ. ನಿವೃತ್ತಿಯ ನಂತರದ ಆದಾಯಕ್ಕೆ ಪಿಂಚಣಿ ಮತ್ತು ವರ್ಷಾಶನ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.

ಇದನ್ನೂ ಓದಿ : Ram Mandir Ayodhya: ಶ್ರೀರಾಮನ ದರ್ಶನಕ್ಕೆ ಉಚಿತ ಬಸ್ ಟಿಕೆಟ್, ಇಂದಿನಿಂದ ಕೊಡುಗೆ ಆರಂಭ, ಈ ರೀತಿ ಬುಕ್ ಮಾಡಿ!

ಪಿಂಚಣಿ ಮತ್ತು ವರ್ಷಾಶನ ಯೋಜನೆಗಳಲ್ಲಿ  ಬದಲಾವಣೆಗಳು :
ಸೆಕ್ಷನ್ 80CCD(1B) ಅಡಿಯಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ ತೆರಿಗೆ ವಿನಾಯಿತಿ ಮಿತಿ  50,000  ರೂ. ಯನ್ನು ವಿಮಾ ಕಂಪನಿಗಳ ಪಿಂಚಣಿ ಮತ್ತು ವರ್ಷಾಶನ ಯೋಜನೆಗಳಿಗೆ ವಿಸ್ತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.  ಒಂದು ವೆಲ್ ಸರ್ಕಾರ ಇದನ್ನೂ ಗಣನೆಗೆ ತೆಗೆದುಕೊಂಡರೆ ಹೆಚ್ಚಿನವರು ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಸಾಧ್ಯವಾಗುತ್ತದೆ. 

ಹೆಚ್ಚುವರಿಯಾಗಿ, ಪಿಂಚಣಿ ಮತ್ತು ವರ್ಷಾಶನ ಯೋಜನೆಗಳ ಶೂನ್ಯ ರೇಟಿಂಗ್ ಅನ್ನು ಪರಿಗಣಿಸಲು ಶಿಫಾರಸು ಮಾಡಲಾಗಿದೆ. ಅಂದರೆ, ಈ ಯೋಜನೆಗಳಿಗೆ 0% GST ದರವನ್ನು ನಿಗದಿಪಡಿಸುವುದು. ಇದು ಪಿಂಚಣಿದಾರರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

ಇದನ್ನೂ ಓದಿ : Ayodhya Ram Mandir:ರಾಮನ ಹೆಸರಿನಲ್ಲಿ 3,200 ಕೋಟಿ ರೂಪಾಯಿ ದೇಣಿಗೆ : ಅತಿ ಹೆಚ್ಚು ದಾನ ನೀಡಿದ್ದು ಅಂಬಾನಿ ಅದಾನಿ ಅಲ್ಲ ಈ ವ್ಯಕ್ತಿ!

ಹಳೆಯ ಮತ್ತು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಜೀವ ವಿಮೆಗೆ ಪ್ರತ್ಯೇಕ ವಿನಾಯಿತಿ :
"ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಜೀವ ವಿಮೆಗಾಗಿ ಪ್ರತ್ಯೇಕ ತೆರಿಗೆ ವಿನಾಯಿತಿ ಮಿತಿಯನ್ನು ಪರಿಚಯಿಸಲು ಸರ್ಕಾರಕ್ಕೆ ವಿನಂತಿಸಲಾಗಿದೆ. ಪ್ರಸ್ತುತ ಸೆಕ್ಷನ್ 80C ಇತರ ತೆರಿಗೆ ಉಳಿತಾಯ ಯೋಜನೆಗಳಾದ PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ELSS ಅನ್ನು ಸಹ ಒಳಗೊಂಡಿದೆ. ತೆರಿಗೆ "ವ್ಯವಸ್ಥೆಯ ಅಡಿಯಲ್ಲಿ ಜೀವ ವಿಮೆಗೆ ವಿನಾಯಿತಿ ಇರಬೇಕು. ಇದು ಜೀವ ವಿಮೆಯನ್ನು ಆರ್ಥಿಕವಾಗಿ ಆಕರ್ಷಕವಾಗಿಸುತ್ತದೆ ಮತ್ತು ಜವಾಬ್ದಾರಿಯುತ ಆರ್ಥಿಕ ನಡವಳಿಕೆಗಳನ್ನು ಅಳವಡಿಸಿಕೊಳ್ಳಲು ತೆರಿಗೆದಾರರನ್ನು ಉತ್ತೇಜಿಸುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ.  

“ಕಳೆದ 5 ರಿಂದ 6 ವರ್ಷಗಳಿಂದ ನಾವು ಜೀವ ವಿಮೆಗೆ ಪ್ರತ್ಯೇಕ ತೆರಿಗೆ ವಿನಾಯಿತಿ ಮಿತಿಯನ್ನು ಪರಿಚಯಿಸಲು ಸರ್ಕಾರವನ್ನು ಕೇಳುತ್ತಿದ್ದೇವೆ. ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಕಾರಣ ಈಗಿನ ಸೆಕ್ಷನ್ 80ಸಿ ತುಂಬಾ ಗೊಂದಲಮಯ ಸ್ಥಿತಿಯಲ್ಲಿದೆ. ಇದರಲ್ಲಿ ಪಿಪಿಎಫ್, ಸುಕನ್ಯಾ ಸಮೃತಿ ಯೋಜನೆ, ಇಎಲ್‌ಎಸ್‌ಎಸ್, ತೆರಿಗೆ ಉಳಿತಾಯ ನಿಶ್ಚಿತ ಠೇವಣಿ, ಶಾಲಾ ಶುಲ್ಕ, ಗೃಹ ಸಾಲದ ಅಸಲು, ಜೀವ ವಿಮೆ ಸೇರಿದಂತೆ ₹1.5 ಲಕ್ಷದವರೆಗೆ ಕಡಿತವನ್ನು ಪಡೆಯಬಹುದು ಎನ್ನುತ್ತಾರೆ "ಏಜಿಸ್ ಫೆಡರಲ್ ಲೈಫ್ ಇನ್ಶುರೆನ್ಸ್ ಕಂಪನಿಯ ಎಂಡಿ ಮತ್ತು ಸಿಇಒ ವಿಘ್ನೇಶ್ ಶಹಾನೆ.  

ಆಯುಷ್ಮಾನ್ ಭಾರತ್ : 
ನೀವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್‌ನ ಫಲಾನುಭವಿಯಾಗಿದ್ದರೆ ಈ ಸುದ್ದಿ ನಿಮಗೆ ಉಪಯುಕ್ತವಾಗಿರುತ್ತದೆ. ಫೆಬ್ರವರಿ 1 ರಂದು ಸರ್ಕಾರ ಮಂಡಿಸಲಿರುವ ಮಧ್ಯಂತರ ಬಜೆಟ್ ಆಯುಷ್ಮಾನ್ ಭಾರತ್ ಯೋಜನೆಯ ಕೋಟ್ಯಂತರ ಫಲಾನುಭವಿಗಳಿಗೆ ಒಳ್ಳೆಯ ಸುದ್ದಿಯನ್ನು ತರಬಹುದು. ಮಾಧ್ಯಮ ವರದಿಗಳ ಪ್ರಕಾರ, 'ಆಯುಷ್ಮಾನ್ ಭಾರತ್ ಯೋಜನೆ' ಅಡಿಯಲ್ಲಿ ಸರ್ಕಾರವು ಒದಗಿಸುವ ವ್ಯಾಪ್ತಿಯನ್ನು ಹೆಚ್ಚಿಸಲು  ತಯಾರಿ ನಡೆಯುತ್ತಿವೆ. ಪ್ರಸ್ತುತ, ಈ ಯೋಜನೆಯಡಿ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿಗಳವರೆಗೆ ವೈದ್ಯಕೀಯ ವಿಮೆಯನ್ನು ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ವಿಮಾ ರಕ್ಷಣೆಯನ್ನು 50% ವರೆಗೆ ಹೆಚ್ಚಿಸಲು ಶಿಫಾರಸು ಮಾಡಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News