Budget 2023: ಮಾರುಕಟ್ಟೆಗೆ ಹಿಡಿಸದ ನಿರ್ಮಲಾ ಬಜೆಟ್, 1200 ಅಂಕಗಳಿಂದ ಗೋತಾ ಹೊಡೆದ ಸೆನ್ಸೆಕ್ಸ್

Stock Market Update: ಸಂಸತ್ತಿನಲ್ಲಿ ಮಂಡನೆಯಾದ ಇಂದಿನ ಬಜೆಟ್ ಕುರಿತು ಎಲ್ಲೆಡೆಯಿಂದ ಪ್ರತಿಕ್ರಿಯೆಗಳು ಬರಲಾರಂಭಿಸಿವೆ. ಕೆಲವರು ಈ ಬಜೆಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಉಳಿದವರ ಪಾಲಿಗೆ ಬಜೆಟ್ ಭಾರಿ ನಿರಾಶೆ ತಂದಿದೆ. ಷೇರು ಮಾರುಕಟ್ಟೆಯ ಕುರಿತು ಹೇಳುವುದಾದರೆ, ಈ ಬಾರಿಯ ಬಜೆಟ್ ಷೇರು ಮಾರುಕಟ್ಟೆಯ ಪಾಲಿದೆ ನಿರಾಶೆ ತಂದಂತಿದೆ ಎಂಬುದು ಗೋಚರಿಸುತ್ತಿದೆ.  

Written by - Nitin Tabib | Last Updated : Feb 1, 2023, 05:01 PM IST
  • ದೊಡ್ಡ ಕಂಪನಿಗಳ ಷೇರುಗಳ ಪ್ರತಿಕ್ರಿಯೆ ಉತ್ತಮವಾಗಿರಲಿಲ್ಲ.
  • ಸೆನ್ಸೆಕ್ಸ್ ಕಂಪನಿಗಳಲ್ಲಿ, ಬಜಾಜ್ ಫಿನ್‌ಸರ್ವ್ ಶೇ. 5.50 ರಷ್ಟು ಹೆಚ್ಚು ಕುಸಿದಿದೆ.
  • ಎಸ್‌ಬಿಐ ಷೇರುಗಳು ಸಹ ಶೇ. 5 ಕ್ಕಿಂತ ಹೆಚ್ಚು ಕುಸಿದಿದೆ.
Budget 2023: ಮಾರುಕಟ್ಟೆಗೆ ಹಿಡಿಸದ ನಿರ್ಮಲಾ ಬಜೆಟ್, 1200 ಅಂಕಗಳಿಂದ ಗೋತಾ ಹೊಡೆದ ಸೆನ್ಸೆಕ್ಸ್ title=
ಬಜೆಟ್ ಬಳಿಕ ಮಾರುಕಟ್ಟೆ ಸ್ಥಿತಿಗತಿ

Share Market Closing:  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಬುಧವಾರ ಲೋಕಸಭೆಯಲ್ಲಿ ಬಹು ನಿರೀಕ್ಷಿತ ಬಜೆಟ್ (ಕೇಂದ್ರ ಬಜೆಟ್ 2023) ಮಂಡಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಬಜೆಟ್‌ಗೆ ಪ್ರತಿ ವರ್ಗದವರ ಆಶಯಗಳು ಅಂಟಿಕೊಂಡಿವೆ. ಆದರೆ, ಎಲ್ಲರ ನಿರೀಕ್ಷೆಗಳನ್ನು ಪೂರೈಸಲು ಈ ಬಜೆಟ್ ವಿಫಲವಾಗಿದೆ ಎಂಬ ವಾತಾವರಣ ನಿರ್ಮಾಣಗೊಂಡಿದೆ. ಅದರಲ್ಲೂ ಷೇರುಪೇಟೆಯನ್ನು ನೋಡಿದರೆ, ಅದು ಸ್ಪಷ್ಟವಾಗಿ  ಕಾಣುತ್ತಿದೆ. ಬೆಳ್ಳಂಬೆಳಗ್ಗೆ ಭಾರಿ ವೇಗದೊಂದಿಗೆ ತನ್ನ ವಹಿವಾಟನ್ನು ಆರಂಭಿಸಿದ್ದ ದೇಶೀಯ ಷೇರು ಪೇಟೆ, ಸಂಜೆ ಹೊತ್ತಿಗೆ ತನೆಲ್ಲಾ ಗತಿಯನ್ನು ಕಳೆದುಕೊಂಡಿದೆ. 

30 ಷೇರುಗಳ ಸಂವೇದಿ ಸೂಚ್ಯಂಕವಾಗಿರುವ ಬಿಎಸ್‌ಇ ಸೆನ್ಸೆಕ್ಸ್ ಇಂದು ಉತ್ತಮ ವಹಿವಾಟು ಆರಂಭಿಸಿದ್ದು, ಮಾರುಕಟ್ಟೆ ಆರಂಭವಾದ ಕೂಡಲೇ 60 ಸಾವಿರ ಗಡಿ ದಾಟಿತ್ತು. ಎನ್‌ಎಸ್‌ಇ ನಿಫ್ಟಿ ಕೂಡ 17,800 ಮಟ್ಟದಲ್ಲಿ ಏರಿಕೆಯೊಂದಿಗೆ ತನ್ನ ವಹಿವಾಟನ್ನು ಆರಂಭಿಸಿತ್ತು. ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣ ಮುಂದುವರೆದಂತೆ, ಮಾರುಕಟ್ಟೆಯೂ ಭಾರಿ ಏರಿಳಿತಗಳನ್ನು ಕಂಡಿದೆ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಸೆನ್ಸೆಕ್ಸ್ ದಿನದ ಗರಿಷ್ಠ ಮಟ್ಟವಾದ 60,773.44 ಅಂಕಗಳಿಗೆ ತಲುಪಿದ್ದರೆ, ನಿಫ್ಟಿ 17,972.20 ಅಂಕಗಳಿಗೆ ತಲುಪಿತ್ತು. ಇದರ ನಂತರ, ಮಾರುಕಟ್ಟೆಯು ಬಜೆಟ್ ಅನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದಾಗ, ಮಾರುಕಟ್ಟೆಯ ಆವೇಗವು ಕಡಿಮೆಯಾಗತೊಡಗಿತು. ದಿನದ ವಹಿವಾಟಿನ ಒಂದು ಕ್ಷಣದಲ್ಲಿ ಸೆನ್ಸೆಕ್ಸ್ ಒಂದು ಹಂತದಲ್ಲಿ 59,542.35 ಅಂಕಗಳಿಗೆ ಕುಸಿಡಿದೆ.

ಈ ರೀತಿಯಾಗಿ, ದಿನದಾಂತ್ಯದ ವಹಿವಾಟಿನ ಅಂತಿಮ ಘಟ್ಟದಲ್ಲಿ  ಸೆನ್ಸೆಕ್ಸ್ ಸಂವೇದಿ ಸೂಚ್ಯಂಕ 1200 ಅಂಕಗಳಿಗಿಂತ ಹೆಚ್ಚು ಗೋತಾ ಹೊಡೆದಿದೆ. ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ 158.18 ಅಂಕಗಳ ಅಲ್ಪ ಏರಿಕೆಯೊಂದಿಗೆ 59,708.08 ಅಂಕಗಳಿಗೆ ತಲುಪಿದರೆ, ನಿಫ್ಟಿ ಕೂಡ 45.85 ಅಂಕಗಳ ನಷ್ಟದೊಂದಿಗೆ 17,616.30 ತಲುಪಿದೆ. ಮಂಗಳವಾರದಂದು ಸೆನ್ಸೆಕ್ಸ್ 59,549.90 ಅಂಕಗಳಲ್ಲಿ ಮತ್ತು ನಿಫ್ಟಿ 17,662.15 ಅಂಕಗಳಲ್ಲಿ ಕೊನೆಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.

ವಿವಿಧ ವಲಯಗಳ ಪ್ರಕಾರ, ಬಜೆಟ್ ಮೇಲಿನ ಪ್ರತಿಕ್ರಿಯೆಯೂ ವಿಭಿನ್ನವಾಗಿತ್ತು. ಬಜೆಟ್‌ನಲ್ಲಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿದ್ದರಿಂದ ಹೋಟೆಲ್ ಷೇರುಗಳು ಲಾಭ ಗಳಿಸಿವೆ. ಇಐಎಚ್, ಇಂಡಿಯನ್ ಹೋಟೆಲ್ಸ್, ಎಚ್‌ಎಲ್‌ವಿ ಲಿಮಿಟೆಡ್, ಕ್ಲಬ್ ಮಹೀಂದ್ರಾ, ಲೆಮನ್ ಟ್ರೀ ಮುಂತಾದ ಷೇರುಗಳು ಶೇ.8ರವರೆಗೂ ಜಿಗಿತ ಕಂಡಿವೆ.ಅದೇ ರೀತಿ ರೈಲ್ವೇ ವಲಯಕ್ಕೆ ಸಂಬಂಧಿಸಿದ ಷೇರುಗಳಲ್ಲಿಯೂ ಕೂಡ ನಂತರದ ಅವಧಿಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ರೈಲ್ವೇಗೆ 2.4 ಲಕ್ಷ ಕೋಟಿ ರೂ.ಗಳ ದಾಖಲೆ ಬಂಡವಾಳ ವೆಚ್ಚಕ್ಕೆ ಅವಕಾಶ ಕಲ್ಪಿಸಿದ್ದಾರೆ. ಈ ಪ್ರಕಟಣೆಯ ನಂತರ, RVNL, Titagarh ವ್ಯಾಗನ್ಸ್, IRCON, KEC ಇಂಟರ್ನ್ಯಾಷನಲ್ ಮತ್ತು ಸೀಮೆನ್ಸ್ ನಂತಹ ರೈಲು ವಲಯಕ್ಕೆ ಸಂಬಂಧಿಸಿದ ಷೇರುಗಳು ಶೇ.4 ರಷ್ಟು ಏರಿಕೆ ಕಂಡಿವೆ.

ಇದನ್ನೂ ಓದಿ-Budget 2023: 1992 ರಲ್ಲಿ ಎಷ್ಟು ಆದಾಯ ತೆರಿಗೆ ಪಾವತಿಸಬೇಕಾಗುತ್ತಿತ್ತು? 30 ವರ್ಷಗಳ ಹಿಂದಿನ ಹಳೆ ಚಿತ್ರ ವೈರಲ್

ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶೇ. 66 ರಷ್ಟು ಅನುದಾನ ಹೆಚ್ಚಳದಿಂದ ಸಿಮೆಂಟ್ ಷೇರುಗಳು ಲಾಭ ಪಡೆದಿವೆ. ಈ ಬಾರಿಯ ಬಜೆಟ್ ನಲ್ಲಿ ಹಣಕಾಸು ಸಚಿವರು ಈ ಯೋಜನೆಯ ಬಜೆಟ್ ಅನ್ನು  66,000 ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. ಇದರ ನಂತರ, ಇಂಡಿಯಾ ಸಿಮೆಂಟ್ಸ್, ರಾಮ್ಕೊ ಸಿಮೆಂಟ್ಸ್, ಶ್ರೀ ಸಿಮೆಂಟ್ಸ್ ಮತ್ತು ಅಲ್ಟ್ರಾಟೆಕ್ ಸಿಮೆಂಟ್ಸ್ ಷೇರುಗಳು ಶೇ.4 ರಷ್ಟು ಜಿಗಿತ ದಾಖಲಿಸಿವೆ.

ಇದನ್ನೂ ಓದಿ-Budget 2023: ಇಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ಸಿಕ್ತು ಸಂತಸದ ಸುದ್ದಿ, ಆಟೋ ಸೆಕ್ಟರ್ ಘೋಷಣೆಗಳು ಇಲ್ಲಿವೆ

ಆದರೆ, ದೊಡ್ಡ ಕಂಪನಿಗಳ ಷೇರುಗಳ ಪ್ರತಿಕ್ರಿಯೆ ಉತ್ತಮವಾಗಿರಲಿಲ್ಲ. ಸೆನ್ಸೆಕ್ಸ್ ಕಂಪನಿಗಳಲ್ಲಿ, ಬಜಾಜ್ ಫಿನ್‌ಸರ್ವ್ ಶೇ. 5.50 ರಷ್ಟು ಹೆಚ್ಚು ಕುಸಿದಿದೆ. ಎಸ್‌ಬಿಐ ಷೇರುಗಳು ಸಹ ಶೇ. 5 ಕ್ಕಿಂತ ಹೆಚ್ಚು ಕುಸಿದಿದೆ. ಇಂಡಸ್‌ಇಂಡ್ ಬ್ಯಾಂಕ್, ಸನ್ ಫಾರ್ಮಾ, ಮಹೀಂದ್ರಾ ಮತ್ತು ಮಹೀಂದ್ರಾ, ಆಕ್ಸಿಸ್ ಬ್ಯಾಂಕ್, ಟೈಟಾನ್, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್ ಶೇ.1ರಿಂದ ಶೇ.4ರಷ್ಟು ಕುಸಿತ ದಾಖಲಿಸಿವೆ, ಐಟಿಸಿ, ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಟಿಸಿಎಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಮಹೀಂದ್ರಾ ಕೊಟಕ್ ಷೇರುಗಳು ಕೂಡ ಕುಸಿತ ದಾಖಲಿಸಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News