ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿ

State Bank Of India - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಖಾತೆಗಳಿಂದ ಹಣವನ್ನು ಕಡಿತಗೊಳಿಸುತ್ತಿದೆ. ಆರಂಭದಲ್ಲಿ, ಗ್ರಾಹಕರ ಖಾತೆಯಿಂದ ಹಣ ಆಕಸ್ಮಿಕವಾಗಿ ವಜಾಗೊಂಡಾಗ ಗ್ರಾಹಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮೊಂದಿಗೆ Cyber Fraud ನಡೆದಿದೆ ಎಂದು ಭಾವಿಸಿ, ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ವ್ಯಥೆ ಹೊರಹಾಕಿದ್ದಾರೆ.

Written by - Nitin Tabib | Last Updated : May 22, 2021, 04:34 PM IST
  • SBI ಗ್ರಾಹಕರ ಖಾತೆಯಿಂದ ಆಕಸ್ಮಿಕವಾಗಿ ಕಡಿತಗೊಂಡ ಹಣ.
  • ಸಾಮಾಜಿಕ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡ ಗ್ರಾಹಕರು.
  • ಬಳಿಕ ಸಾಮಾಜಿಕ ಮಾಧ್ಯಮದಲ್ಲಿಯೇ ಹಣ ಕಡಿತದ ಕುರಿತು ಸ್ಪಷ್ಟನೆ ನೀಡಿದ ಬ್ಯಾಂಕ್
ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿ title=
State Bank Of India (File Photo)

ನವದೆಹಲಿ: State Bank Of India - ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ತನ್ನ ಗ್ರಾಹಕರ ಖಾತೆಯಿಂದ ಆಕಸ್ಮಿಕವಾಗಿ ಹಣ ಕಡಿತಗೊಳಿಸಿದೆ. ಆರಂಭಿಕ ಹಂತದಲ್ಲಿ ತನ್ನ ಖಾತೆಯಿಂದ ಹಣ ವಜಾಗೊಂಡಿದ್ದನ್ನು ಗಮನಿಸಿದ ಗ್ರಾಹಕರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮೊಂದಿಗೆ ಸೈಬರ್ ಫ್ರಾಡ್ ನಡೆದಿದೆ ಎಂದು ಅವರು ಭಾವಿಸಿ, ಅದನ್ನು ಖಾತರಿ ಪಡಿಸಲು ಸಾಮಾಹಿಕ ಮಾಧ್ಯಮಗಳಲ್ಲಿ ವ್ಯಥೆ ತೋಡಿಕೊಂಡಿದ್ದಾರೆ. ಇದನ್ನು ಮನಗಂಡ SBI ತನ್ನೆಲ್ಲಾ ಗ್ರಾಹಕರಿಗೆ ಅವರ ಜೊತೆಗೆ ಯಾವುದೇ ರೀತಿಯ ಸೈಬರ್ ಫ್ರಾಡ್ ಅಥವಾ ವಂಚನೆ ನಡೆದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದೆ. ಈ ಹಣವನ್ನು SBI ಕಡಿತಗೊಳಿಸಿದೆ.

ಇದನ್ನೂ ಓದಿ-Bank Alert : ಇಂದು ರಾತ್ರಿಯಿಂದ ನಾಳೆ ಮಧ್ಯಾಹ್ನದವರೆಗೆ 'NEFT' ಸೇವೆ ಬಂದ್..!

ಬ್ಯಾಂಕ್ ತನ್ನ ಗ್ರಾಹಕರಿಗೆ ಹಲವು ರೀತಿಯ ಸೌಕರ್ಯಗಳನ್ನು ಒದಗಿಸುತ್ತವೆ. ಉದಾಹರಣೆಗೆ ಗ್ರಾಹಕರ ಖಾತೆ ನಿರ್ವಹಿಸಲು, ಗ್ರಾಹಕರಿಗೆ ಡೆಬಿಟ್ /ATM ಕಾರ್ಡ್ ಸೌಲಭ್ಯ ಒದಗಿಸುವುದು, Internet Banking ಸೌಕರ್ಯ ಒದಗಿಸುವುದು ಇತ್ಯಾದಿಗಳು ಇದರಲ್ಲಿ ಶಾಮೀಲಾಗಿರುತ್ತವೆ. ಆದರೆ, ಬ್ಯಾಂಕ್ ಈ ರೀತಿಯ ಸೇವೆಗಳನ್ನು ಒದಗಿಸಲು ಗ್ರಾಹಕರಿಂದಲೇ ಶುಲ್ಕವನ್ನು (ATM Maintenance Charge) ಪಡೆಯುತ್ತದೆ. ಈ ಬಾರಿ ಬ್ಯಾಂಕ್ ಸಕ್ರೀಯ ATM ಬಳಕೆದಾರರಿಂದ 147.50 ರೂ ವಸೂಲಿ ಮಾಡಿದೆ.

ಇದನ್ನೂ ಓದಿ-Big Alert! ಇಂದು ರಾತ್ರಿ 10.45 ರಿಂದ ಮೂರು ದಿನಗಳ ಕಾಲ SBI ಈ ಸೇವೆಗಳು ಬಂದ್ ಇರಲಿವೆ

ಈ ಕುರಿತು ತನ್ನ ಟ್ವಿಟ್ಟರ್ ಹ್ಯಾಂಡಲ್ ಮೂಲಕ ಗ್ರಾಹಕಾರಿಗೆ ಉತ್ತರಿಸಿರುವ ಬ್ಯಾಂಕ್, ಈ ಹಣವನ್ನು ನಿರ್ವಹಣಾ ಶುಲ್ಕದ ರೂಪದಲ್ಲಿ ಕಡಿತಗೊಳಿಸಲಾಗಿದೆ ಎಂದು ಹೇಳಿದೆ. ಈ ಶುಲ್ಕ ರೂ.125 + GST ಒಳಗೊಂಡಿದೆ ಎಂದು ಬ್ಯಾಂಕ್ ಹೇಳಿದೆ. ಈ ಕುರಿತು ಗ್ರಾಹಕರಿಗೆ ನೀಡಿರುವ ತನ್ನ ಸಂದೇಶದಲ್ಲಿ ಹೇಳಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಪ್ರತಿವರ್ಷ ಸಕ್ರೀಯ ATM ಕಾರ್ಡ್ ನಿರ್ವಹಣಾ ವೆಚ್ಚವನ್ನು ಪಡೆಯಲಾಗುತ್ತದೆ ಎಂದಿದೆ. SBI ಖಾತೆದಾರರು ಒಂದು ವೇಳೆ ಸ್ಟೇಟ್ ಬ್ಯಾಂಕ್ ನಿಂದ ಪ್ರತಿ ತಿಂಗಳು ಕೇವಲ ಐದು ಬಾರಿ ಹಣಕಾಸಿನ ವಹಿವಾಟು ನಡೆಸಿದ್ದೆ ಆದಲ್ಲಿ ಅವರಿಂದ ಯಾವುದೇ ರೀತಿಯ ಶುಲ್ಕ ಪಡೆಯಲಾಗುವುದಿಲ್ಲ. ಆದರೆ, ಅವರು ಬೇರೆ ಬ್ಯಾಂಕಿನ ATM ನಿಂದ ವಹಿವಾಟು ನಡೆಸುತ್ತಿದ್ದರೆ ಅವರಿಗೆ ಕೇವಲ ಮೂರು ಉಚಿತ ಅವಕಾಶಗಳು ಮಾತ್ರ ಲಭ್ಯವಿರುತ್ತವೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News