ನವದೆಹಲಿ: SBI Bank Latest Update - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಈ ದಿನಗಳಲ್ಲಿ ಮನೆಯಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗೆ ಉತ್ತಮ ಸೇವೆಯನ್ನು (Banking Services) ನೀಡುವಲ್ಲಿ ನಿರತವಾಗಿದೆ. ಆದರೆ ಇದರಿಂದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಲವು ಗ್ರಾಹಕರಿದ್ದಾರೆ. ಹೀಗಾಗಿ ಅವರು ಎಸ್ಬಿಐಗೆ ಟ್ವೀಟ್ ಮಾಡುತ್ತಿದ್ದಾರೆ ಮತ್ತು ತಮ್ಮ ಸಮಸ್ಯೆಗಳನ್ನು ಹೇಳುತ್ತಿದ್ದಾರೆ. ಗ್ರಾಹಕರ ಸಮಸ್ಯೆಗಳನ್ನು ಹೋಗಲಾಡಿಸಲು ಎಸ್ಬಿಐ ಕೂಡ ಸಮಾನ ಪ್ರತಿಕ್ರಿಯೆ ನೀಡುತ್ತಿದೆ. ಹಲವು ಗ್ರಾಹಕರು ತಮ್ಮ ಮೊಬೈಲ್ನಲ್ಲಿ ಒಟಿಪಿ ಬರದೆ ಇರುವ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಎಸ್ಬಿಐ ಸಹ ಉತ್ತರಿಸಿದೆ.
ಒಂದು ವೇಳೆ ಬ್ಯಾಂಕ್ ಬ್ಯಾಂಕ್ ನ ಸೇವೆ ಪಡೆಯುವಲ್ಲಿ ವ್ಯತ್ಯಯ ಉಂಟಾಗುವ ಗ್ರಾಹಕರು SBIಗೆ ಆನ್ಲೈನ್ ಪ್ರೋಸೆಸ್ ಮೂಲಕ ತಮ್ಮ ಸಮಸ್ಯೆಗಳ ಹಂಚಿಕೊಳ್ಳಬಹುದು ಎಂದು ಹೇಳಿದೆ. ಗ್ರಾಹಕರ ಎಲ್ಲ ಸಮಸ್ಯೆಗಳ ಪರಿಹಾರ SBI Online Banking ನೀಡುತ್ತಿದೆ. ಯಾವ ರೀತಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬುದರ ಸಲಹೆ ನೀಡುತ್ತಿದೆ ಎಂದಿದೆ. ಈ ಕುರಿತು SBI ಗೆ ಟ್ವೀಟ್ ಮಾಡಿರುವ ಗ್ರಾಹಕರೋಬ್ಬರು, ತಾವು ತಮ್ಮ ಅಕೌಂಟ್ ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ, ಜೊತೆಗೆ ಕಳೆದ ಎರಡು ತಿಂಗಳಿನಿಂದ ತಮಗೆ OTP (SBI OTP Problem) ಕೂಡ ಬರುತ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ದೂರಿದ್ದಾರೆ. ಖಾತೆಗೆ ಲಾಗಿನ್ ಆಗಲು OTP ನಮೂದಿಸಲೇಬೇಕು. OTP ಇಲ್ಲದೆ ಹೋದಲ್ಲಿ ನೀವು ಬ್ಯಾಂಕ್ ನ ಯಾವುದೇ ಸೇವೆಯನ್ನು ಪಡೆಯಲು ಸಾಧ್ಯವಿಲ್ಲ. ಈ ಗ್ರಾಹಕರು ತಮ್ಮ ಸಮಸ್ಯೆಯ ಕುರಿತು ಸುಮಾರು ಐದು ಬಾರಿ ಬ್ಯಾಂಕ್ ಅನ್ನು ಸಂಪರ್ಕಿಸಿದ್ದಾರೆ.
@TheOfficialSBI struggling to login to my online SBI Account since last 2+ months. I never receive OTP to my register mobile number, which is now required to login. Raised 5 times complaint already, no help. Call center wants me to visit a branch in lockdown. Please help
— Tarun (@Tarun44972881) May 27, 2021
ಇದನ್ನೂ ಓದಿ- State Bank Of India: ಕೊರೊನಾ ಕಾಲದಲ್ಲಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ SBI
ಈ ಲಿಂಕ್ ಮೇಲೆ ಕ್ಲಿಕ್ಕಿಸಿ (Online Process)
ತನ್ನ ಗ್ರಾಹಕರ ಈ ಸಮಸ್ಯೆಯ ಪರಿಹಾರ ಸೂಚಿಸಿರುವ SBI, ಹಲವು ಬಾರಿ SMS (SMS Notification) ನಲ್ಲಾಗುವ ವಿಳಂಬಕ್ಕೆ ನೆಟ್ವರ್ಕ್ (Internet Banking) ಕೂಡ ಕಾರಣವಾಗಿದೆ. ಆದೆ, ಒಂದು ವೇಳೆ ನಿಮಗೆ ಸತತವಾಗಿ ಈ ಸಮಸ್ಯೆ ಎದುರಾಗುತ್ತಿದ್ದರೆ, https://crcf.sbi.co.in/ccf/ ಲಿಂಕ್ (SBI link to resolve OTP Problem) ಮೇಲೆ ಕ್ಲಿಕ್ಕಿಸಿ ಎಂದು ಬ್ಯಾಂಕ್ ಸಲಹೆ ನೀಡಿದೆ. ಈ ಲಿಂಕ್ ಮೂಲಕ ನೀವು ಇಂಟರ್ನೆಟ್ ಬ್ಯಾಂಕಿಂಗ್, ಆನ್ಲೈನ್ SMS ಅಲರ್ಟ್ (Online SMS Alert), High Security Password ಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಬಹುದು. ನಿಮ್ಮ ದೂರಿನ ಕುರಿತು ಖಂಡಿತ ಪರಿಶೀಲನೆ ನಡೆಸಲಾಗುವುದು ಎಂದು ಬ್ಯಾಂಕ್ ಹೇಳಿದೆ.
ಇದನ್ನೂ ಓದಿ-SBI ಡೆಬಿಟ್ ಕಾರ್ಡ್ ನಲ್ಲೂ ಸಿಗಲಿದೆ EMI ಸೌಲಭ್ಯ, ಲಾಭ ಪಡೆಯಲು ಏನು ಮಾಡಬೇಕು ತಿಳಿದಿರಲಿ
ಸಾಮಾನ್ಯವಾಗಿ ಯಾವುದೇ ಒಬ್ಬ ಗ್ರಾಹಕರು ತಮ್ಮ ಫೋನ್ ಸಂಖ್ಯೆಯನ್ನು ಬದಲಾಯಿಸಿದರೆ, ಆ ಗ್ರಾಹಕರಿಗೆ ಈ ಸಮಸ್ಯೆ ಎದುರಾಗುತ್ತದೆ. ಇದಕ್ಕಾಗಿ ಗ್ರಾಹಕರು ಮೊದಲು ಬ್ಯಾಂಕ್ ಗೆ ಭೇಟಿ ನೀಡಿ ತಮ್ಮ ಅಧಿಕೃತ ಸಂಖ್ಯೆಯನ್ನು ಬದಲಾಯಿಸಬೇಕು. ಹೀಗೆ ಮಾಡುವುದರಿಂದ ಬ್ಯಾಂಕ್ ನಲ್ಲಿ ನೀವು ನಮೂದಿಸಿರುವ ಸಂಖ್ಯೆಗೆ ಮಾತ್ರ ನಿಮ್ಮ SMS ನೋಟಿಫಿಕೇಶನ್ ಬರಲಿದೆ. ಒಂದು ವೇಳೆ ನೀವು ಈ ಕೆಲಸವನ್ನು ಮನೆಯಿಂದಲೇ ಮಾಡಲು ಬಯಸಿದರೆ, ನಿಮಗೆ ಎರಡು ಆಯ್ಕೆಗಳಿವೆ. OTP ಮೂಲಕ ಅಥವಾ SBI Online Banking ಮೂಲಕ ನೀವು ಈ ಕೆಲಸ ಮಾಡಬಹುದು. ಆದೆ, OTP ಮೂಲಕ ಬದಲಾವಣೆ ಮಾಡಲು ನಿಮ್ಮ ಎರಡೂ ಮೊಬೈಲ್ ಸಂಖ್ಯೆಗಳು ಚಾಲ್ತಿಯಲ್ಲಿರಬೇಕು.
ಇದನ್ನೂ ಓದಿ-ನಿಮ್ಮ SBI ಖಾತೆಯಿಂದಲು ಹಣ ಕಟ್ ಆಗಿದೆಯಾ? SBI ಗ್ರಾಹಕರು ಈ ಸುದ್ದಿ ತಪ್ಪದೆ ಓದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.