ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿ !ಕ್ರಮಿಸುವ ದೂರಕ್ಕಷ್ಟೇ ಟೋಲ್ ಪಾವತಿ

GPS Based Toll System :ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯು ಯಶಸ್ವಿಯಾಗಿದೆ ಎಂದು ಗಡ್ಕರಿ  ತಿಳಿಸಿದ್ದಾರೆ. ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಆರಂಭಿಸಲು ಸರ್ಕಾರ ಶೀಘ್ರದಲ್ಲೇ ಟೆಂಡರ್ ನೀಡಲಿದೆ.

Written by - Ranjitha R K | Last Updated : Feb 22, 2024, 12:34 PM IST
  • ಟೋಲ್ ಸಂಗ್ರಹ ವ್ಯವಸ್ಥೆಯಲ್ಲಿ ಶೀಘ್ರ ಬದಲಾವಣೆ
  • ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಆರಂಭ
  • ಈ ಪ್ರಕ್ರಿಯೆಗೆ ಶೀಘ್ರವೇ ಟೆಂಡರ್
 ಶೀಘ್ರದಲ್ಲೇ ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆ ಜಾರಿ !ಕ್ರಮಿಸುವ ದೂರಕ್ಕಷ್ಟೇ ಟೋಲ್ ಪಾವತಿ  title=

GPS Based Toll System : ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಶೀಘ್ರದಲ್ಲೇ ಬದಲಾಯಿಸುವ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಆರಂಭಿಸಲು ಸರ್ಕಾರ ಶೀಘ್ರವೇ ಟೆಂಡರ್ ನೀಡಲಿದೆ ಎಂದು ಹೇಳಿದ್ದಾರೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಪ್ರಾಯೋಗಿಕ ಯೋಜನೆಯಾಗಿ ತಂದ ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯು ಯಶಸ್ವಿಯಾಗಿದೆ ಎಂದು ಗಡ್ಕರಿ  ತಿಳಿಸಿದ್ದಾರೆ. ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಆರಂಭಿಸಲು ಸರ್ಕಾರ ಶೀಘ್ರದಲ್ಲೇ ಟೆಂಡರ್ ನೀಡಲಿದೆ.

GPS ನಿಂದ ನಿಮಗೆ ಎಷ್ಟು ದೂರ ತಿಳಿಯುತ್ತದೆ? :
ಸಂಚಾರ ದಟ್ಟಣೆ ಕಡಿಮೆ ಮಾಡುವುದು ಸರ್ಕಾರದ ಈ ನಿರ್ಧಾರದ ಹಿಂದಿನ ಉದ್ದೇಶ ಎಂದು ಕಾರ್ಯಕ್ರಮವೊಂದರಲ್ಲಿ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಪದ್ಧತಿ ಪ್ರಾರಂಭದ ನಂತರ, ಚಾಲಕರು ಅವರು ಕ್ರಮಿಸುವ ದೂರಕ್ಕೆ ಅನುಗುಣವಾಗಿ ಟೋಲ್ ಶುಲ್ಕವನ್ನು ವಿಧಿಸಲಾಗುತ್ತದೆ. ಸದ್ಯ ವಾಹನಗಳನ್ನು ನಿಲ್ಲಿಸಿ ಟೋಲ್ ಪಾವತಿಸುವುದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ, ಸಂಪೂರ್ಣ ದೂರವನ್ನು ಕ್ರಮಿಸದಿದ್ದರೂ, ಸಂಪೂರ್ಣ ಟೋಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಜಿಪಿಎಸ್ ಆಧಾರಿತ ಟೋಲಿಂಗ್ ವ್ಯವಸ್ಥೆಯನ್ನು ಪರಿಚಯಿಸುವುದರೊಂದಿಗೆ, ವಾಹನಗಳಲ್ಲಿ ಅಳವಡಿಸಲಾಗಿರುವ ಜಿಪಿಎಸ್ ಮೂಲಕ ನೀವು ಎಷ್ಟು ದೂರ ಕ್ರಮಿಸಿದ್ದೀರಿ ಎನ್ನುವುದನ್ನು ತಿಳಿಯಲು ಸಾಧ್ಯವಾಗುತ್ತದೆ. ಅಂದರೆ ನೀವು ಎಲ್ಲಿಯೂ ವಾಹನವನ್ನು ನಿಲ್ಲಿಸುವ ಅಗತ್ಯವಿಲ್ಲ.

ಇದನ್ನೂ ಓದಿ : FD Rate: ICICI ಬ್ಯಾಂಕ್‌ ಠೇವಣಿ ದರ ಹೆಚ್ಚಳ: ಇತರ ಬ್ಯಾಂಕ್‌ಗಳ ಬಡ್ಡಿದರ ಎಷ್ಟಿವೆ?

ಹೊಸ ವ್ಯವಸ್ಥೆಯನ್ನು ಅಳವಡಿಸಲು ಪರೀಕ್ಷೆ ಪೂರ್ಣ : 
ಇದರ ಇನ್ನೊಂದು ಪ್ರಯೋಜನವೆಂದರೆ ನೀವು ಪ್ರಯಾಣಿಸುವ ದೂರಕ್ಕೆ ಅನುಗುಣವಾಗಿ ಮಾತ್ರ ಟೋಲ್ ಅನ್ನು ಪಾವತಿಸಬೇಕಾಗುತ್ತದೆ. ಮೊದಲು ಇಡೀ ಮಾರ್ಗಕ್ಕೆ ಎಲ್ಲರೂ ಒಂದೇ ರೀತಿಯ ಟೋಲ್ ಪಾವತಿಸಬೇಕಿತ್ತು. ಈ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಟೆಸ್ಟಿಂಗ್ ನಡೆಸಿದೆ. ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳನ್ನು ಪರೀಕ್ಷೆಯಲ್ಲಿ ಬಳಸಲಾಗಿದೆ.  ಈ ವೇಳೆ  ಕ್ಯಾಮೆರಾಗಳು ವಾಹನಗಳ ನಂಬರ್ ಪ್ಲೇಟ್‌ಗಳನ್ನು ರೀಡ್ ಮಾಡುವ ಮೂಲಕ ಅದನ್ನು ರೆಕಾರ್ಡ್ ಮಾಡುತ್ತದೆ. ಹೀಗಾಗಿ ಆ ವಾಹನ ಕ್ರಮಿಸಿದ ದೂರಕ್ಕೆ ಅನುಗುಣವಾಗಿ ಮಾತ್ರ ಟೋಲ್ ಸಂಗ್ರಹಿಸಲಾಗುತ್ತದೆ. 

ಫೆಬ್ರವರಿ ತಿಂಗಳ ಆರಂಭದಲ್ಲಿಯೇ ಹೆದ್ದಾರಿಗಳಲ್ಲಿ ವಾಹನಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಟೋಲ್ ಸಂಗ್ರಹಿಸುವ ವ್ಯವಸ್ಥೆ ಜಾರಿಗೆ ತರುವುದಾಗಿ ಸರ್ಕಾರ ಹೇಳಿತ್ತು. ಇದಕ್ಕಾಗಿ ತಜ್ಞರನ್ನೂ ನೇಮಿಸಲಾಗಿದೆ. ಈ ಹಿಂದೆ ಟೋಲ್ ಪ್ಲಾಜಾದಲ್ಲಿ ವಾಹನಗಳು ಬಹಳ ಹೊತ್ತು ಕಾಯಬೇಕಿತ್ತು. 2018-19ರಲ್ಲಿ ಸರಾಸರಿ  8 ನಿಮಿಷ ಕಾಯಬೇಕಿತ್ತು. ಆದರೆ 2020-21 ಮತ್ತು 2021-22ರಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಪರಿಚಯಿಸಿದ ನಂತರ, ಈ ಸಮಯವನ್ನು ಕೇವಲ 47 ಸೆಕೆಂಡುಗಳಿಗೆ ಇಳಿಸಲಾಗಿದೆ. ಆದರೂ, ಕೆಲವು ನಗರ ಟೋಲ್ ಪ್ಲಾಜಾಗಳ ಸುತ್ತಮುತ್ತಲಿನ ಪೀಕ್ ಸಮಯದಲ್ಲಿ ಟೋಲ್ ಪ್ಲಾಜಾಗಳಲ್ಲಿ ವಿಳಂಬವಾಗುತ್ತಿರುವುದು ಕಂಡು ಬಂದಿದೆ. 

ಇದನ್ನೂ ಓದಿ :PPF, SSY, NPSಗಳಲ್ಲಿ ನಿಮ್ಮ ಖಾತೆ ಇದೆಯೇ? ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದಲ್ಲಿ ಆಗುವುದು ಭಾರೀ ನಷ್ಟ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News