Simple One Electric Scooter: ಓಲಾ ಜೊತೆಗೆ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧವಾಗಿದೆ. ಬೆಂಗಳೂರು ಮೂಲದ ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ ಅಪ್ ಸಿಂಪಲ್ ಎನರ್ಜಿ ಕೂಡ ತನ್ನ ಮೊದಲ ಇ-ಸ್ಕೂಟರ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಇದನ್ನು ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುವುದು ಮತ್ತು ಬುಕಿಂಗ್ ಕೂಡ ಈ ದಿನದಿಂದ ಆರಂಭವಾಗಲಿದೆ. ಮೊದಲ ಹಂತದಲ್ಲಿ, ಇದನ್ನು 13 ರಾಜ್ಯಗಳಲ್ಲಿ ಆರಂಭಿಸಲು ಯೋಜಿಸಲಾಗಿದೆ.
ಮೊದಲ ಹಂತದಲ್ಲಿ 13 ರಾಜ್ಯಗಳಲ್ಲಿ ಆರಂಭ:
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ, ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಇ-ಸ್ಕೂಟರ್ (e-Scooter) ಅನ್ನು ಬಿಡುಗಡೆ ಮಾಡಲಾಗುವುದು. ಈ ರಾಜ್ಯಗಳಲ್ಲಿ ಅನುಭವ ಕೇಂದ್ರಗಳಿಗೆ ಸ್ಥಳಾವಕಾಶವನ್ನೂ ಮೀಸಲಿಟ್ಟಿದೆ ಎಂದು ಸಿಂಪಲ್ ಎನರ್ಜಿ ಹೇಳಿದೆ. ಅದೇ ಸಮಯದಲ್ಲಿ, ಕಂಪನಿಯು ಮುಂದಿನ 2 ವರ್ಷಗಳಲ್ಲಿ 350 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲು ಯೋಜಿಸಿದೆ ಎಂದು ಹೇಳಿದೆ, ಇದರಿಂದ ತನ್ನ ವ್ಯಾಪಾರವು ದೇಶದಾದ್ಯಂತ ಹರಡುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ- ಮಾರುಕಟ್ಟೆಗೆ ಬಿಡುಗಡೆ ಆಯ್ತು Tata Motors 2021 Tiago NRG : ಬೆಲೆ, ಸ್ಪೇಸ್ ಮತ್ತು ವೈಶಿಷ್ಟ್ಯಗಳ ಬಗ್ಗೆ ಇಲ್ಲಿ ನೋಡಿ!
ಅನೇಕ ನಗರಗಳಿಂದ ಬುಕಿಂಗ್‌ಗಾಗಿ ಅರ್ಜಿ:
ಮೊದಲು ಇದನ್ನು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ಈ ಮೂರು ನಗರಗಳಲ್ಲಿ ಮಾತ್ರ ಆರಂಭಿಸಲು ಯೋಜಿಸಲಾಗಿತ್ತು. ಆದರೆ ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ಸ್ಥಾವರದಲ್ಲಿ ವಾರ್ಷಿಕ ಉತ್ಪಾದನಾ ಸಾಮರ್ಥ್ಯವು 10 ಲಕ್ಷಗಳನ್ನು ತಲುಪಿದಾಗ, ಕಂಪನಿಯು ಈ ಹಂತದಲ್ಲಿ ವ್ಯಾಪಾರವನ್ನು ವಿಸ್ತರಿಸಲು ನಿರ್ಧರಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್ ಕುಮಾರ್ ಅವರು ದೇಶದ ಅನೇಕ ನಗರಗಳಿಂದ ಬುಕಿಂಗ್ಗಾಗಿ ಅರ್ಜಿಗಳನ್ನು ಪಡೆಯುತ್ತಿರುವುದಾಗಿ ಮಾಹಿತಿ ನೀಡಿದರು. ಇದರ ದೃಷ್ಟಿಯಿಂದ, ಕಂಪನಿಯು ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆ ಮತ್ತು ಆದ್ದರಿಂದ ಅದರ ಮೊದಲ ಹಂತವನ್ನು ಹುರುಪಿನಿಂದ ಆರಂಭಿಸಲು ನಿರ್ಧರಿಸಿತು ಎಂದು ತಿಳಿಸಿದರು.
ಇದನ್ನೂ ಓದಿ- Bike Craze: ಭಾರತದಲ್ಲಿ ಸಂಪೂರ್ಣವಾಗಿ ಬುಕ್ ಆದ ಹಾರ್ಲೆ ಡೇವಿಡ್ಸನ್ ಬೈಕ್‌ಗಳು..!
ಬೆಲೆ ರೂ 1.10 ರಿಂದ 1.20 ಲಕ್ಷ ಇರಬಹುದು:
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ (Simple One Electric Scooter) 4.8 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿರುತ್ತದೆ, ಇದು ಇಕೋ ಮೋಡ್‌ನಲ್ಲಿ ಒಂದೇ ಚಾರ್ಜ್‌ನಲ್ಲಿ 240 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ. ಸ್ಕೂಟರ್‌ನಿಂದ ಅದರ ಬ್ಯಾಟರಿ ಬೇರ್ಪಡಿಸಿ ಕೂಡ ಚಾರ್ಜ್ ಮಾಡಬಹುದು ಎಂದು ಈಗಾಗಲೇ ವರದಿಯಾಗಿದೆ, ಇದು ಚಾರ್ಜ್ ಮಾಡಲು ಸುಲಭವಾಗುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 100 ಕಿಲೋಮೀಟರ್, ಆದರೆ ಇದು ಕೇವಲ 3.5 ಸೆಕೆಂಡುಗಳಲ್ಲಿ 0 ರಿಂದ 50 ಕಿಲೋಮೀಟರ್‌ಗಳ ವೇಗವನ್ನು ಹೆಚ್ಚಿಸುತ್ತದೆ. ಇದರ ಬೆಲೆ 1.10 ಲಕ್ಷದಿಂದ 1.20 ಲಕ್ಷ ಎಂದು ನಿರೀಕ್ಷಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ