ಕೇವಲ Aadhaar ತೋರಿಸಿ ತಕ್ಷಣ ಪಡೆದುಕೊಳ್ಳಬಹುದು LPG ಸಂಪರ್ಕ, ಸಿಗಲಿದೆ ಸಬ್ಸಿಡಿ ಲಾಭ ಕೂಡಾ

ಗ್ಯಾಸ್ ಕಂಪನಿಗಳು ಹಲವು ರೀತಿಯ ದಾಖಲೆಗಳನ್ನು ಕೇಳುವುದರಿಂದ ಹೊಸ ನಗರದಲ್ಲಿ ಎಲ್‌ಪಿಸಿ ಸಂಪರ್ಕವನ್ನು  ತೆಗೆದುಕೊಳ್ಳುವವರಿಗೆ ಅನಾನುಕೂಲವಾಗಬಹುದು. ವಿಶೇಷವಾಗಿ ವಿಳಾಸ ಪುರಾವೆ ನೀಡುವುದು ಕಡ್ಡಾಯವಾಗಿರುತ್ತದೆ.

Written by - Ranjitha R K | Last Updated : Oct 18, 2021, 06:10 PM IST
  • ಕೇವಲ ಆಧಾರ್‌ ಮೂಲಕ ಎಲ್‌ಪಿಜಿ ಸಂಪರ್ಕ ಪಡೆದುಕೊಳ್ಳಬಹುದು
  • ಇದರೊಂದಿಗೆ ಸಬ್ಸಿಡಿಯ ಲಾಭವೂ ಲಭ್ಯವಿರುತ್ತದೆ.
  • ಎಲ್ಲಾ ವಿಧದ ಸಿಲಿಂಡರ್‌ಗಳಿಗೆ ಅನ್ವಯಿಸುತ್ತದೆ
ಕೇವಲ Aadhaar ತೋರಿಸಿ ತಕ್ಷಣ ಪಡೆದುಕೊಳ್ಳಬಹುದು  LPG ಸಂಪರ್ಕ, ಸಿಗಲಿದೆ ಸಬ್ಸಿಡಿ ಲಾಭ ಕೂಡಾ  title=
LPG Connection (file photo)

ನವದೆಹಲಿ : ಈಗ ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆ (LPG Connection) ಹೆಚ್ಚು ಅಲೆದಾಡುವ ಅಗತ್ಯವಿಲ್ಲ. ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOC) ನ ಗ್ಯಾಸ್ ಕಂಪನಿ ಇಂಡೇನ್ ಗ್ರಾಹಕರಿಗೆ ದೊಡ್ಡ ಸೌಲಭ್ಯವನ್ನು ಘೋಷಿಸಿದೆ. ಇಂಡೇನ್ ಪ್ರಕಾರ, ಈಗ ಯಾವುದೇ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ತೋರಿಸಿದ ತಕ್ಷಣ LPG ಸಂಪರ್ಕವನ್ನು ಪಡೆಯಬಹುದು. ಗ್ಯಾಸ್ ಸಂಪರ್ಕಕ್ಕಾಗಿ,  ಆಧಾರ್ ವಿವರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಡಾಕ್ಯುಮೆಂಟ್ ಅನ್ನು ಒದಗಿಸುವ ಅಗತ್ಯವಿಲ್ಲ.

ಗ್ಯಾಸ್ ಕಂಪನಿಗಳು ಹಲವು ರೀತಿಯ ದಾಖಲೆಗಳನ್ನು ಕೇಳುವುದರಿಂದ ಹೊಸ ನಗರದಲ್ಲಿ ಎಲ್‌ಪಿಸಿ ಸಂಪರ್ಕವನ್ನು (LPG Connection) ತೆಗೆದುಕೊಳ್ಳುವವರಿಗೆ ಅನಾನುಕೂಲವಾಗಬಹುದು. ವಿಶೇಷವಾಗಿ ವಿಳಾಸ ಪುರಾವೆ ನೀಡುವುದು ಕಡ್ಡಾಯವಾಗಿರುತ್ತದೆ. ನಗರಗಳಲ್ಲಿ ಕೆಲಸ ಮಾಡುವ ವಲಸೆ ಕಾರ್ಮಿಕರ ಬಳಿ ವಿಳಾಸ ಪುರಾವೆ ಇರುವುದಿಲ್ಲ. ಇದರಿಂದಾಗಿ ಅವರು ಎಲ್‌ಪಿಜಿ ಸಂಪರ್ಕ ಪಡೆಯುವಲ್ಲಿ ತೊಂದರೆ ಎದುರಿಸುತ್ತಿರುತ್ತಾರೆ. ಆದರೆ ಈಗ ಅಂತಹ ಗ್ರಾಹಕರು ಕೂಡಾ ಸುಲಭವಾಗಿ ಸಿಲಿಂಡರ್ ಪಡೆಯಬಹುದು. 

ಇದನ್ನೂ ಓದಿ : Paytm Offer: ಹಬ್ಬದ ಸಮಯದಲ್ಲಿ ಪೇಟಿಎಂ ಬಳಸಿದರೆ ಸಿಗಲಿದೆ ಒಂದು ಲಕ್ಷ ಬಂಪರ್ ಕ್ಯಾಶ್ ಬ್ಯಾಕ್ ..!

ಮಾಹಿತಿ ನೀಡಿದ ಇಂಡೇನ್ :
ಈ ಹೊಸ ಮತ್ತು ವಿಶೇಷ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ ಇಂಡೇನ್  'ಯಾವುದೇ ವ್ಯಕ್ತಿ ಆಧಾರ್ (Aadhaar) ತೋರಿಸುವ ಮೂಲಕ ಹೊಸ LPG ಸಂಪರ್ಕವನ್ನು ತೆಗೆದುಕೊಳ್ಳಬಹುದು. ಅವನಿಗೆ ಆರಂಭದಲ್ಲಿ ಸಬ್ಸಿಡಿ ರಹಿತ ಸಂಪರ್ಕ ನೀಡಲಾಗುವುದು. ವಿಳಾಸ ಪುರಾವೆ  ಸಲ್ಲಿಸಿದ ತಕ್ಷಣ, ಸಿಲಿಂಡರ್ ಮೇಲಿನ ಸಬ್ಸಿಡಿಯ ಲಾಭವನ್ನು ನೀಡಲಾಗುತ್ತದೆ. ಅಂದರೆ, ಆಧಾರ್ ಮತ್ತು ವಿಳಾಸ ಪುರಾವೆಗಳೊಂದಿಗೆ (address proof) ತೆಗೆದುಕೊಳ್ಳುವ ಸಂಪರ್ಕವು ಸರ್ಕಾರದ ಸಬ್ಸಿಡಿಯ ಲಾಭದ ಅಡಿಯಲ್ಲಿ ಬರುತ್ತದೆ. 

ಈ ರೀತಿ LPG ಸಂಪರ್ಕ ಪಡೆಯಿರಿ:
1. ಇದಕ್ಕಾಗಿ ನೀವು ಮೊದಲು ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ.
2. LPG ಸಂಪರ್ಕದ ಫಾರ್ಮ್ ಅನ್ನು ಭರ್ತಿ ಮಾಡಿ.
3. ಅದರಲ್ಲಿ ಆಧಾರ್ ವಿವರಗಳನ್ನು ನೀಡಿ ಮತ್ತು ಫಾರ್ಮ್ ನೊಂದಿಗೆ ಆಧಾರ್ ಪ್ರತಿಯನ್ನು ಲಗತ್ತಿಸಿ.
4. ಫಾರ್ಮ್ ನಲ್ಲಿ ನಿಮ್ಮ ಮನೆಯ ವಿಳಾಸದ ಬಗ್ಗೆ ಸೆಲ್ಫ್ ಡೆಕ್ಲರೇಶನ್ ಇರಲಿ .
5. ನೀವು ಎಲ್ಲಿ ವಾಸಿಸುತ್ತೀರಿ ಮತ್ತು ಮನೆಯ ಸಂಖ್ಯೆ ಏನು ಎನ್ನುವುದನ್ನು ತಿಳಿಸಬೇಕಾಗುತ್ತದೆ 
6. ಇದರೊಂದಿಗೆ ನಿಮಗೆ ತಕ್ಷಣ LPG ಸಂಪರ್ಕವನ್ನು ನೀಡಲಾಗುತ್ತದೆ.
7. ಈ ಸಂಪರ್ಕದೊಂದಿಗೆ ಸರ್ಕಾರದ ಸಬ್ಸಿಡಿಯ ಲಾಭವನ್ನು ಪಡೆಯುವುದಿಲ್ಲ.
8. ಸಿಲಿಂಡರ್ ನ ಸಂಪೂರ್ಣ ವೆಚ್ಚವನ್ನು ಪಾವತಿಸಬೇಕಾಗುತ್ತದೆ.
9. ನಿಮ್ಮ ವಿಳಾಸ ಪುರಾವೆ ಸಿದ್ಧವಾದಾಗ, ಅದನ್ನು ಗ್ಯಾಸ್ ಏಜೆನ್ಸಿಗೆ ಸಲ್ಲಿಸಿ.
10. ಈ ಪುರಾವೆ ದೃಡೀಕರಿಸಲ್ಪಡುತ್ತದೆ, ಆದ್ದರಿಂದ ಗ್ಯಾಸ್ ಏಜೆನ್ಸಿ ಅದನ್ನು ನಿಮ್ಮ ಸಂಪರ್ಕದಲ್ಲಿ ಮಾನ್ಯ ದಾಖಲೆಯಾಗಿ ದಾಖಲಿಸುತ್ತದೆ.
11. ಇದರೊಂದಿಗೆ, ನಿಮ್ಮ ಸಬ್ಸಿಡಿ ರಹಿತ ಸಂಪರ್ಕವನ್ನು ಸಬ್ಸಿಡಿ ಸಹಿತವಾಗಿ ಪರಿವರ್ತಿಸಲಾಗುತ್ತದೆ.
12. ಸಿಲಿಂಡರ್ ತೆಗೆದುಕೊಳ್ಳುವಾಗ, ನೀವು ಸಂಪೂರ್ಣ ಮೊತ್ತವನ್ನು ಜಮಾ ಮಾಡಬೇಕು.
13. ಸಬ್ಸಿಡಿಯನ್ನು ಸರ್ಕಾರವು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತದೆ.

ಇದನ್ನೂ ಓದಿ :   Tata Punch Launched: ಟಾಟಾ ಕಂಪನಿಯ ಅತ್ಯಂತ ಅಗ್ಗದ SUV ಬಿಡುಗಡೆ, ಬೆಲೆ ಕೇಳಿ ನೀವೂ ಆಶ್ಚರ್ಯಚಕಿತರಾಗುವಿರಿ

ಎಲ್ಲಾ ವಿಧದ ಸಿಲಿಂಡರ್‌ಗಳಿಗೆ ಅನ್ವಯ :
ಆಧಾರ್ ಕಾರ್ಡ್‌ನೊಂದಿಗೆ ಸಂಪರ್ಕವನ್ನು ತೆಗೆದುಕೊಳ್ಳುವ ಈ ಯೋಜನೆಯು, ಎಲ್ಲಾ ರೀತಿಯ ಸಿಲಿಂಡರ್‌ಗಳಿಗೆ ಅನ್ವಯಿಸುತ್ತದೆ . ಆದರೆ ವಾಣಿಜ್ಯ ಸಿಲಿಂಡರ್‌ಗಳನ್ನು ಇದರಲ್ಲಿ ಸೇರಿಸಲಾಗಿಲ್ಲ. ಈ ಯೋಜನೆಯು ಸಿಂಗಲ್, ಡಬಲ್ ಅಥವಾ ಮಿಶ್ರ ಸಿಲಿಂಡರ್ ಸಂಪರ್ಕಗಳಿಗೆ 14.2 ಕೆಜಿ, 5 ಕೆಜಿ. FTL ಅಥವಾ ಮುಕ್ತ ವ್ಯಾಪಾರ LPG ಸಿಲಿಂಡರ್‌ಗಳಿಗೂ ಅದೇ ನಿಯಮ ಅನ್ವಯಿಸುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News