Share Market Update: IRCTC ಸೇರಿದಂತೆ 8 ಸ್ಟಾಕ್ ಗಳು F&O ಮೇಲೆ ಬ್ಯಾನ್! ನಿಮ್ಮ ಬಳಿಯೂ ಈ ಕಂಪನಿಗಳ ಷೇರುಗಳಿವೆಯೇ?

Share Market Update: IRCTC ಜೊತೆಗೆ, ಎಂಟು ಕಂಪನಿಗಳ ಷೇರುಗಳನ್ನು ಮತ್ತಷ್ಟು ನಿಷೇಧಗೊಂಡಿವೆ. ವೊಡಾಫೋನ್ ಐಡಿಯಾ, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಸನ್ ಟಿವಿ, ಬಿಎಚ್ಇಎಲ್, ನ್ಯಾಷನಲ್ ಅಲ್ಯೂಮಿನಿಯಂ, ಎಸ್ಕಾರ್ಟ್ಸ್ ಮತ್ತು ಅಮರ ರಾಜಾ ಬ್ಯಾಟರಿಗಳು ಈ ಎಂಟು ನಿಷೇಧಿತ ಕಂಪನಿಗಳಾಗಿವೆ.

Written by - Nitin Tabib | Last Updated : Oct 20, 2021, 04:40 PM IST
  • ಷೇರು ಮಾರುಕಟ್ಟೆಯಲ್ಲಿ ನಿಷೇಧಗೊಂಡ IRCTC ಷೇರುಗಳು
  • F&O ಸ್ಥಾಕ್ ಮೇಲೆ ನಿಷೇಧಗೊಂಡಿವೆ.
  • ಏನಿದು F&O ಸ್ಟಾಕ್ ಬ್ಯಾನ್? ತಿಳಿಯಲು ಸುದ್ದಿ ಓದಿ,
Share Market Update: IRCTC ಸೇರಿದಂತೆ 8 ಸ್ಟಾಕ್ ಗಳು F&O ಮೇಲೆ ಬ್ಯಾನ್! ನಿಮ್ಮ ಬಳಿಯೂ ಈ ಕಂಪನಿಗಳ ಷೇರುಗಳಿವೆಯೇ? title=
Share Market Update (File Photo)

Share Market Update - ಷೇರು ಮಾರುಕಟ್ಟೆಯಲ್ಲಿ ಐಆರ್‌ಸಿಟಿಸಿ ಷೇರುಗಳು ಭಾರೀ ಹಿನ್ನಡೆ ಅನುಭವಿಸಿವೆ. ಕೆಲವು ಸಮಯದಿಂದ ನಿರಂತರವಾಗಿ ಕುಸಿಯುತ್ತಿರುವ ಐಆರ್‌ಸಿಟಿಸಿ ಷೇರುಗಳು  ಹೂಡಿಕೆದಾರರಿಗೆ ಇಂದೂ ಕೂಡ ಭಾರಿ ಶಾಕ್ ನೀಡಿವೆ.  ಐಆರ್‌ಸಿಟಿಸಿ ಷೇರುಗಳಿಂದ ಹೂಡಿಕೆದಾರರಿಗೆ 4 ಸಾವಿರ ಕೋಟಿ ನಷ್ಟ ಉಂಟಾಗಿದೆ. ಪ್ರಸ್ತುತ  IRCTCಯನ್ನು NSE F & O ಮೇಲೆ ಸ್ಥಾಕ್ ನಿಷೇಧಿಸಿದೆ.

ಈ ಎಂಟು ಕಂಪನಿಗಳ ಷೇರುಗಳ ಮೇಲೆ ಬ್ಯಾನ್
IRCTC
ಸೇರಿದಂತೆ ಒಟ್ಟು 8 ಕಂಪನಿಗಳ ಷೇರುಗಳನ್ನೂ ಕೂಡ ಬ್ಯಾನ್ ಮಾಡಲಾಗಿದೆ. ನಿಷೇಧಕ್ಕೆ ಒಳಗಾಗಿರುವ ಕಂಪನಿಗಳಲ್ಲಿ ವೋಡಾಫೋನ್-ಐಡಿಯಾ, ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್, ಸನ್ ಟಿವಿ, ಭೇಲ್, ನ್ಯಾಷನಲ್ ಅಲ್ಯೂಮಿನಿಯಂ, ಎಸ್ಕಾರ್ಟ್ಸ್ ಹಾಗೂ ಅಮರ್ ರಾಜಾ ಬ್ಯಾಟರೀಸ್ ಷೇರುಗಳು ಶಾಮೀಲಾಗಿವೆ. ಇವುಗಳನ್ನು NSE ವತಿಯಿಂದ ಫ್ಯೂಚರ್ಸ್ ಅಂಡ್ ಆಪ್ಷನ್ಸ್ (F&O) ಮೇಲೆ ನಿರ್ಬಂಧಿಸಲಾಗಿದೆ. 

ಈ ಕಂಪನಿಗಳಲ್ಲದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳ ಷೇರು ಗಳನ್ನು ಕೂಡ ಸ್ಟಾಕ್ ಎಕ್ಸ್ಚೆಂಜ್ ಮೂಲಕ F&O ಬ್ಯಾನ್  ಪಟ್ಟಿಯಲ್ಲಿ ಶಾಮೀಲುಗೊಳಿಸಲಾಗಿದೆ. ಇದರೊಂದಿಗೆ ನಿಷೇಧಕ್ಕೊಳಗಾದ ಶೇರುಗಳ ಸಂಖ್ಯೆ 9ಕ್ಕೆ ತಲುಪಿದಂತಾಗಿದೆ.

ಏನಿದು F&O ಸ್ಟಾಕ್ ಬ್ಯಾನ್?
F&O ನಲ್ಲಿನ ಸ್ಟಾಕ್ ನಿಷೇಧಗಳನ್ನು ಒಂದು ಸ್ಟಾಕ್‌ನಲ್ಲಿ ಅತಿಯಾದ ಊಹಾತ್ಮಕ ಚಟುವಟಿಕೆಯನ್ನು ತಡೆಯಲು ವಿಧಿಸಲಾಗುತ್ತದೆ. ಸ್ಟಾಕ್ ಎಕ್ಸ್‌ಚೇಂಜ್‌ಗಳು ಎಫ್ & ಒ ನಿಷೇಧವನ್ನು ವಿಧಿಸುತ್ತವೆ, ಸ್ಟಾಕ್‌ನ ಒಟ್ಟು ಮುಕ್ತ ಆಸಕ್ತಿಯು ಮಾರ್ಕೆಟ್ ವೈಡ್ ಪೊಸಿಷನ್ ಲಿಮಿಟ್‌ನ (ಎಮ್‌ಡಬ್ಲ್ಯೂಪಿಎಲ್) 95 ಪ್ರತಿಶತವನ್ನು ಮೀರಿದಾಗ. ತೆರೆದ ಬಡ್ಡಿ ಸೆಕ್ಯುರಿಟಿಗಳು ಅಥವಾ ಫ್ಯೂಚರ್ಸ್ ಮತ್ತು ಆಯ್ಕೆಗಳ ಒಪ್ಪಂದಗಳಲ್ಲಿನ ಅತ್ಯುತ್ತಮ ಖರೀದಿ ಅಥವಾ ಮಾರಾಟದ ಸ್ಥಾನಗಳನ್ನು ತಿಳಿಸುತ್ತದೆ. 

ಬುಧವಾರದ ಆರಂಭಿಕ ವಹಿವಾಟಿನಲ್ಲಿ ಐಆರ್‌ಸಿಟಿಸಿ ಷೇರುಗಳ ಬೆಲೆ ಶೇ. 18 ಕ್ಕಿಂತ ಹೆಚ್ಚು ಕುಸಿದು ರೂ.4,371.25 ಕ್ಕೆ ತಲುಪಿದೆ. ಮಂಗಳವಾರ, ಅದರ ಷೇರುಗಳು ಶೇಕಡಾ 9 ರಷ್ಟು ಕುಸಿದು 5,363 ರೂ. ಗಳಿಗೆ ತನ್ನ ದಿನದ ವಹಿವಾಟನ್ನು ನಿಲ್ಲಿಸಿದ್ದವು. ಈ ಸ್ಟಾಕ್ ತನ್ನ 52 ವಾರಗಳ ಗರಿಷ್ಠ ಮಟ್ಟವಾದ ರೂ. 6,393 ರಿಂದ ಅಕ್ಟೋಬರ್ 19 ರಂದು ಶೇಕಡಾ 32 ರಷ್ಟು ಕುಸಿತವನ್ನು ದಾಖಲಿಸಿವೆ.

ಇದನ್ನೂ ಓದಿ-ಆರ್ಯನ್ ಖಾನ್ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

ಮುಖದ ಮೇಲೆ ಬಿದ್ದ IRCTC
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮದ (IRCTC) ಷೇರು ನಿರಂತರ ಕುಸಿತವನ್ನು ದಾಖಲಿಸಿದೆ. ಬುಧವಾರದ ಆರಂಭಿಕ ವಹಿವಾಟಿನಲ್ಲಿ, BSEಯಲ್ಲಿ ಐಆರ್‌ಸಿಟಿಸಿ ಷೇರು ಶೇ. 19ರಷ್ಟು ಕುಸಿದಿದೆ. ವಹಿವಾಟಿನ ಅವಧಿಯಲ್ಲಿ ಷೇರು ಬೆಲೆ ಶೇ. 18.49ರಷ್ಟು ಕುಸಿದು, 4371.25 ರೂ.ಗೆ ತಲುಲ್ಪಿತ್ತು.  ಮಂಗಳವಾರವೂ ಐಆರ್‌ಸಿಟಿಸಿಯ ಷೇರು ಶೇ.15 ಕುಸಿದಿತ್ತು. ಷೇರುಗಳಲ್ಲಿನ ದೌರ್ಬಲ್ಯದಿಂದಾಗಿ ಹೂಡಿಕೆದಾರರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಅವರ ಸಂಪತ್ತು ಕೇವಲ ಎರಡೇ ದಿನಗಳಲ್ಲಿ 30,000 ಕೋಟಿ ರೂ.ಗಿಂತಲೂ ಹೆಚ್ಚು ಕಡಿಮೆಯಾಗಿದೆ.

ಇದನ್ನೂ ಓದಿ-Aryan Khan Drugs Case: ನಟಿಯ ಜೊತೆಗೆ ಡ್ರಗ್ಸ್ ಗೆ ಸಂಬಂಧಿಸಿದಂತೆ ಚಾಟ್ ನಡೆಸಿದ್ದಾರೆ Aryan Khan

ಕಾರಣ ಏನು?
ಷೇರುಗಳ ಬೆಲೆಯಲ್ಲಿ ಆದ ಈ ನಿರಂತರ ಕುಸಿತಕ್ಕೆ IRCTC ಕೂಡ ಬೆಚ್ಚಿ ಬಿದ್ದಿದೆ 
ರೈಲ್ವೆಯಲ್ಲಿ ನಿಯಂತ್ರಕವನ್ನು ನೇಮಿಸಲು RITES ವರದಿ ನೀಡಿದೆ.  RITES ವರದಿಯ ನಂತರ, ಈಗ ಕ್ಯಾಬಿನೆಟ್ ನೋಟ್ ಸಿದ್ಧಗೊಳ್ಳಲಿದೆ. ಖಾಸಗಿ ರೈಲುಗಳಿಗೆ ನಿಯಂತ್ರಕವನ್ನು ಶಿಫಾರಸು ಮಾಡಲಾಗಿದೆ. ಪ್ಯಾಸೆಂಜರ್ ರೈಲುಗಳು ಸಹ ನಿಯಂತ್ರಕರ ವ್ಯಾಪ್ತಿಗೆ ಬರುತ್ತವೆ. ಈ ಸುದ್ದಿಯ ನಂತರ, ಐಆರ್‌ಸಿಟಿಸಿಯ ಪಾಲಿನ ಕುಸಿತದ ಪ್ರವೃತ್ತಿ ಮುಂದುವರೆದಿದೆ. 

ಇದನ್ನೂ ಓದಿ-FD ಮೇಲೆ ಹೂಡಿಕೆ ಮಾಡಲು ಪ್ಲಾನ್ ಮಾಡುತ್ತಿದ್ದೀರಾ? ಹಾಗಿದ್ರೆ, ಮೊದಲು ಈ ವಿಷಯ ತಿಳಿದಿರಲಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News