Stock Market Closing on 3 October 2022: ವಾರದ ಮೊದಲ ವಹಿವಾಟಿನ ದಿನವಾದ ಇಂದು ಷೇರುಪೇಟೆಯಲ್ಲಿ ಮಾರಾಟ ಪ್ರಕ್ರಿಯೆ ಮೇಲುಗೈ ಸಾಧಿಸಿದೆ. ಇಂದು ಸೆನ್ಸೆಕ್ಸ್-ನಿಫ್ಟಿಗಳು ದೊಡ್ಡ ಕುಸಿತದೊಂದಿಗೆ ತನ್ನ ವಹಿವಾಟನ್ನು ನಿಲ್ಲಿಸಿವೆ. ಇಂದು, ಸೆನ್ಸೆಕ್ಸ್ 638.11 ಪಾಯಿಂಟ್ ಅಥವಾ ಶೇ. 1.11 ರಷ್ಟು ಕುಸಿತ ದಾಖಲಿಸಿ 56,788.81 ಮಟ್ಟದಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿದೆ. ಇನ್ನೊಂದೆಡೆ ರಾಷ್ಟ್ರೀಯ ಷೇರು ಸೂಚ್ಯಂಕ ಕೂಡ, ನಿಫ್ಟಿ ಕೂಡ 207.00 ಪಾಯಿಂಟ್ ಅಥವಾ ಶೇ.1.21 ಕುಸಿತದೊಂದಿಗೆ 16,887.35 ಮಟ್ಟದಲ್ಲಿ ತನ್ನ ವಹಿವಾಟು ನಿಲ್ಲಿಸಿದೆ.
ಡಾ ರೆಡ್ಡಿ ಟಾಪ್ ಗೇನರ್
ಸೆನ್ಸೆಕ್ಸ್‌ನ ಟಾಪ್-30 ಷೇರುಗಳಲ್ಲಿ 3 ಷೇರುಗಳು ಗಣನೀಯ ಏರಿಕೆ ಕಂಡಿವೆ. ಇಂದು ಡಾ ರೆಡ್ಡಿ, ಎನ್‌ಟಿಪಿಸಿ ಮತ್ತು ಭಾರ್ತಿ ಏರ್‌ಟೆಲ್ ಷೇರುಗಳು ಏರಿಕೆ ಕಂಡಿದ್ದರೆ. 27 ಕಂಪನಿಗಳ ಷೇರುಗಳು ಹಸಿರು ನಿಶಾನೆಯಲ್ಲಿ ವಹಿವಾಟು ನಿಲ್ಲಿಸಿವೆ.
ಮಾರುತಿ ಷೇರುಗಳು ಗಣನೀಯ ಕುಸಿತ
ಇಂದಿನ ಲೂಸರ್ ಷೇರುಗಳ ಪಟ್ಟಿಯಲ್ಲಿ ಮಾರುತಿ ಅಗ್ರಸ್ಥಾನದಲ್ಲಿದೆ. ಮಾರುತಿ ಷೇರುಗಳು ಶೇ.3ರಷ್ಟು ಕುಸಿದಿವೆ. ಇದರ ಹೊರತಾಗಿ ಎಚ್‌ಯುಎಲ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಸ್‌ಬಿಐ, ಐಟಿಸಿ, ಬಜಾಜ್ ಫಿನ್‌ಸರ್ವ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಲ್‌ಟಿ, ಟಿಸಿಎಸ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ, ಟಾಟಿನ್, ಟಾಟಾ ಸ್ಟೀಲ್, ಪವರ್ ಗ್ರಿಡ್, ಎಚ್‌ಸಿಎಲ್ ಟೆಕ್ ಸನ್ ಫಾರ್ಮಾ, ವಿಪ್ರೋ ಸೇರಿದಂತೆ ಹಲವು ಕಂಪನಿಗಳ ಷೇರುಗಳಲ್ಲಿ ಭಾರಿ ಬಿಕವಾಲಿ ನಡೆದಿದೆ.
ಇದನ್ನೂ ಓದಿ-Edible Oil ಹಾಗೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಶೀಘ್ರ ಇಳಿಕೆ, ಬೇಸ್ ಇಂಪೋರ್ಟ್ ಪ್ರೈಸ್ ಕಡಿತಗೊಳಿಸಿದ ಸರ್ಕಾರ
ಫಾರ್ಮಾ ಮತ್ತು ಹೆಲ್ತ್ ಕೇರ್ ಹೊರತುಪಡಿಸಿ ಎಲ್ಲಾ ವಲಯಗಳು ಕುಸಿದಿವೆ
ವಲಯವಾರು ಸೂಚ್ಯಂಕಗಳ ಕುರಿತು ಹೇಳುವುದಾದರೆ, ಇಂದು ಫಾರ್ಮಾ ಮತ್ತು ಹೆಲ್ತ್‌ಕೇರ್ ವಲಯದಲ್ಲಿ ಭಾರಿ ಖರೀದಿ ಪ್ರಕ್ರಿಯೆ ನಡೆದಿದೆ ಎಲ್ಲವೂ ಕೂಡ ಕೆಂಪು ನಿಶಾನೆಯಯಲ್ಲಿ ತನ್ನ ವಹಿವಾಟನ್ನು ನಿಲ್ಲಿಸಿವೆ. ಇಂದು ನಿಫ್ಟಿ ಬ್ಯಾಂಕ್, ನಿಫ್ಟಿ ಆಟೋ, ಹಣಕಾಸು ಸೇವೆಗಳು, ಎಫ್‌ಎಂಸಿಜಿ, ಐಟಿ, ಮೀಡಿಯಾ, ಮೆಟಲ್, ಫಾರ್ಮಾ, ಪಿಎಸ್‌ಯು ಬ್ಯಾಂಕ್, ಖಾಸಗಿ ಬ್ಯಾಂಕ್, ರಿಯಾಲ್ಟಿ, ಕನ್ಸ್ಯೂಮರ್ ಗೂಡ್ಸ್ ಮತ್ತು ತೈಲ ಹಾಗೂ ಅನಿಲ ವಲಯದಲ್ಲಿಯೂ ಕೂಡ ಭಾರಿ ಬಿಕವಾಲಿ ನಡೆದಿದೆ.
ಇದನ್ನೂ ಓದಿ-ಇನ್ನು ಮುಂದೆ ಈ ನಂಬರ್ ಇಲ್ಲ ಎಂದಾದರೆ ಎಟಿಎಂ ನಿಂದ ಹಣ ತೆಗೆಯುವುದು ಸಾಧ್ಯವೇ ಇಲ್ಲ .!
ಕಳೆದ ವಾರ ಹೇಗಿತ್ತು?
ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ವಿತ್ತೀಯ ನೀತಿಯ ಘೋಷಿಸಿದ ಬಳಿಕ, ಸಾಲ ದರಗಳು ಹೆಚ್ಚಾದರು ಕೂಡ ಮಾರುಕಟ್ಟೆಯಲ್ಲಿ ಮಾತ್ರ ಭರ್ಜರಿ ವಾತಾವರಣವಿತ್ತು. ಇದೆ ಕಾರಣ ಶುಕ್ರವಾರ ವಾರದ ವಹಿವಾಟು ಅಂತ್ಯಗೊಂಡಾಗ 1000 ಕ್ಕೂ ಅಧಿಕ ಅಂಕಗಳೊಂದಿಗೆ ಮತ್ತು ನಿಫ್ಟಿ 300ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ತನ್ನ ವಹಿವಾಟುಗಳನ್ನು ನಿಲ್ಲಿಸಿದ್ದವು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.