SEBI Auction: ಹೂಡಿಕೆದಾರರ ಹಿತರಕ್ಷಣೆಗೆ ಸೆಬಿಯಿಂದ ಮಹತ್ವದ ಹೆಜ್ಜೆ

SEBI Auction: ಹೂಡಿಕೆದಾರರ ಹಿತಾಸಕ್ತಿ ರಕ್ಷಣೆಗೆ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಜೂನ್ 28 ರಂದು ಒಟ್ಟು 51 ಕೋಟಿ ರೂ.ಗಳ ಒಟ್ಟು ಮೀಸಲು ಬೆಲೆಯೊಂದಿಗೆ ಏಳು ಕಂಪನಿಗಳ 17 ಆಸ್ತಿಗಳನ್ನು ಹರಾಜು ಪ್ರಕ್ರಿಯೆ ಕೈಗೊಳ್ಳಲಿದೆ. ಈ ಕಂಪನಿಗಳಲ್ಲಿ MPS ಗ್ರೂಪ್, ಟವರ್ ಇನ್ಫೋಟೆಕ್ ಮತ್ತು Vibgyor ಗ್ರೂಪ್ ಶಾಮೀಲಾಗಿವೆ.  

Written by - Nitin Tabib | Last Updated : Jun 1, 2023, 09:55 PM IST
  • ಇವುಗಳಲ್ಲದೆ, ನಿಯಂತ್ರಕವು ಪ್ರಯಾಗ್ ಗ್ರೂಪ್, ಮಲ್ಟಿಪರ್ಪಸ್ ಬಯೋಸ್ ಇಂಡಿಯಾ ಗ್ರೂಪ್, ವಾರಿಸ್ ಫೈನಾನ್ಸ್ ಇಂಟರ್‌ನ್ಯಾಷನಲ್ ಗ್ರೂಪ್
  • ಮತ್ತು ಪೇಲಾನ್ ಗ್ರೂಪ್ ಆಫ್ ಕಂಪನಿಗಳ ಆಸ್ತಿಗಳನ್ನು ಹರಾಜಿಗೆ ಇಡಲಿದೆ ಎಂದು SEBI ಪ್ರಕಟಣೆಯಲ್ಲಿ ತಿಳಿಸಿದೆ.
  • ಪಶ್ಚಿಮ ಬಂಗಾಳದಾದ್ಯಂತ ಹರಾಜಾಗುತ್ತಿರುವ 17 ಆಸ್ತಿಗಳಲ್ಲಿ ಪ್ಲಾಟ್‌ಗಳು, ಬಹುಮಹಡಿ ಕಟ್ಟಡಗಳು, ಫ್ಲಾಟ್‌ಗಳು ಮತ್ತು ವಾಣಿಜ್ಯ ಸಂಕೀರ್ಣ ಮತ್ತು ಪ್ರಿಮೈಸಿಸ್ ಗಳು ಸೇರಿವೆ.
SEBI Auction: ಹೂಡಿಕೆದಾರರ ಹಿತರಕ್ಷಣೆಗೆ ಸೆಬಿಯಿಂದ ಮಹತ್ವದ ಹೆಜ್ಜೆ title=

SEBI Auction: ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಹೇಗಿರುವಾಗ ಇದೀಗ ಹೂಡಿಕೆದಾರರ ಸಿಕ್ಕಿಬಿದ್ದ ಹಣವನ್ನು ಅವರಿಗೆ ಮರಳಿಸಲು ಸೆಬಿ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಇದಕ್ಕಾಗಿ ಕೆಲವು ಆಸ್ತಿಗಳನ್ನು ಸೆಬಿ ಹರಾಜು ಹಾಕಲಿದೆ. ಪ್ರಸ್ತುತ ಈ ಕುರಿತಾದ ಮಾಹಿತಿಯೂ ಇದೀಗ ಮುನ್ನೆಲೆಗೆ ಬಂದಿದೆ.

SEBI
ಹೂಡಿಕೆದಾರರ ಹಣವನ್ನು ಹಿಂಪಡೆಯಲು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಜೂನ್ 28 ರಂದು ಒಟ್ಟು 51 ಕೋಟಿ ರೂಪಾಯಿಗಳ ಒಟ್ಟು ಮೀಸಲು ಬೆಲೆಯೊಂದಿಗೆ ಏಳು ಕಂಪನಿಗಳ 17 ಆಸ್ತಿಗಳನ್ನು ಹರಾಜು ಮಾಡಲಿದೆ. ಈ ಕಂಪನಿಗಳಲ್ಲಿ MPS ಗ್ರೂಪ್, ಟವರ್ ಇನ್ಫೋಟೆಕ್ ಮತ್ತು Vibgyor ಗ್ರೂಪ್ ಅನ್ನು ಶಾಮೀಲಾಗಿವೆ. ಇದಲ್ಲದೇ ಕೆಲವು ಕಂಪನಿಗಳನ್ನು ಸಹ ಹರಾಜಿಗೆ ಇಡಲಾಗುತ್ತದೆ.

ಇದನ್ನೂ ಓದಿ-Success Mantra: ನಿತ್ಯ ಬೆಳಗ್ಗೆ ಈ 4 ಕೆಲಸಗಳನ್ನು ತಪ್ಪದೆ ಮಾಡಿ, ಯಶಸ್ಸು ನಿಮ್ಮ ಪಾದಕ್ಕೆ ಮುತ್ತಿಕ್ಕುತ್ತದೆ!

SEBI ಸೂಚನೆ
ಇವುಗಳಲ್ಲದೆ, ನಿಯಂತ್ರಕವು ಪ್ರಯಾಗ್ ಗ್ರೂಪ್, ಮಲ್ಟಿಪರ್ಪಸ್ ಬಯೋಸ್ ಇಂಡಿಯಾ ಗ್ರೂಪ್, ವಾರಿಸ್ ಫೈನಾನ್ಸ್ ಇಂಟರ್‌ನ್ಯಾಷನಲ್ ಗ್ರೂಪ್ ಮತ್ತು ಪೇಲಾನ್ ಗ್ರೂಪ್ ಆಫ್ ಕಂಪನಿಗಳ ಆಸ್ತಿಗಳನ್ನು ಹರಾಜಿಗೆ ಇಡಲಿದೆ ಎಂದು SEBI ಪ್ರಕಟಣೆಯಲ್ಲಿ ತಿಳಿಸಿದೆ. ಪಶ್ಚಿಮ ಬಂಗಾಳದಾದ್ಯಂತ ಹರಾಜಾಗುತ್ತಿರುವ 17 ಆಸ್ತಿಗಳಲ್ಲಿ ಪ್ಲಾಟ್‌ಗಳು, ಬಹುಮಹಡಿ ಕಟ್ಟಡಗಳು, ಫ್ಲಾಟ್‌ಗಳು ಮತ್ತು ವಾಣಿಜ್ಯ ಸಂಕೀರ್ಣ ಮತ್ತು ಪ್ರಿಮೈಸಿಸ್ ಗಳು ಸೇರಿವೆ.

ಇದನ್ನೂ ಓದಿ-Health Tips: ಈ ಸಾಂಬಾರ ಪದಾರ್ಥಗಳಲ್ಲಡಗಿದೆ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವ ಸಾಮರ್ಥ್ಯ!

ಆಸ್ತಿಗಳ ಹರಾಜು
ಇದಕ್ಕಾಗಿ ಬಿಡ್ದಗಳನ್ನು  ಆಹ್ವಾನಿಸಿದ ಸೆಬಿ, ಆಸ್ತಿಗಳ ಹರಾಜು ಆನ್‌ಲೈನ್ ಮಾಧ್ಯಮದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ನಡೆಯಲಿದೆ ಎಂದು ಹೇಳಿದೆ. ಈ ಆಸ್ತಿಗಳ ಒಟ್ಟು ಮೀಸಲು ಬೆಲೆ 51 ಕೋಟಿ ರೂ.ಗಲಾಗಿದೆ. ಹರಾಜಾದ ಆಸ್ತಿಗಳಲ್ಲಿ, ಐದು ಎಂಪಿಎಸ್ ಗ್ರೂಪ್‌ಗೆ, ನಾಲ್ಕು ವಿಬ್‌ಗ್ಯೋರ್‌ಗೆ, ಮೂರು ಪೇಲಾನ್ ಗ್ರೂಪ್ ಆಫ್ ಕಂಪನಿಗಳಿಗೆ, ಎರಡು ಟವರ್ ಇನ್ಫೋಟೆಕ್‌ಗೆ ಮತ್ತು ತಲಾ ಒಂದು ಮಲ್ಟಿಪರ್ಪಸ್ ಬಯೋಸ್, ಪ್ರಯಾಗ್ ಗ್ರೂಪ್ ಮತ್ತು ವಾರಿಸ್ ಫೈನಾನ್ಸ್‌ ಸೇರಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News