ಕಡಿಮೆ ಬಡ್ಡಿ ದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ ಗಳು

ಹೋಳಿ ಹಬ್ಬದ ಸಂದರ್ಭದಲ್ಲಿ ಕೆಲವು ಬ್ಯಾಂಕ್ ಗಳು  ಕಡಿಮೆ ಬಡ್ಡಿದರದಲ್ಲಿ  ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಅವು ಯಾವ ಬ್ಯಾಂಕ್ ಗಳು ಎನ್ನುವ ಮಾಹಿತಿ ಇಲ್ಲಿದೆ.  

Written by - Ranjitha R K | Last Updated : Mar 25, 2021, 12:47 PM IST
  • ಅಗ್ಗದ ಬಡ್ಡಿದರದಲ್ಲಿ ಬ್ಯಾಂಕ್ ಗಳು ನೀಡುತ್ತಿವೆ ವೈಯಕ್ತಿಕ ಸಾಲ
  • ಹೋಳಿ ಸಂದರ್ಭದಲ್ಲಿ ಬ್ಯಾಂಕ್ ನೀಡುತ್ತಿದೆ ವಿಶೇಷ ಸೌಲಭ್ಯ
  • ಸಾಲ ಪಡೆಯುವ ಪ್ರಕ್ರಿಯೆ ಹೇಗೆ ತಿಳಿಯಿರಿ
ಕಡಿಮೆ ಬಡ್ಡಿ ದರದಲ್ಲಿ Personal Loan ನೀಡುತ್ತಿದೆ ಈ ಬ್ಯಾಂಕ್ ಗಳು  title=
ಅಗ್ಗದ ಬಡ್ಡಿದರದಲ್ಲಿ ಬ್ಯಾಂಕ್ ಗಳು ನೀಡುತ್ತಿವೆ ವೈಯಕ್ತಿಕ ಸಾಲ (file photo)

ದೆಹಲಿ: ಕರೋನಾ (Coronavirus) ಕಾರಣದಿಂದಾಗಿ ಜನರ ಆದಾಯದ ಮೇಲೆ ಭಾರೀ ಪರಿಣಾಮ ಉಂಟಾಗಿದೆ. ಎಷ್ಟೋ ಜನ ಕೆಲಸ ಕಳೆದುಕೊಂದಿದ್ದರೆ , ಇನ್ನು ಕೆಲವರ ವೇತನಕ್ಕೆ (Salary) ಕತ್ತರಿ ಬಿದ್ದಿದೆ.  ಈ ಹಿನ್ನೆಲೆಯಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಜನ ಮುಂದೆ ಹಿಂದೆ ಯೋಚಿಸುವಂತಾಗಿದೆ. ಇನ್ನೆನು ಮುಂದಿನ ವಾರ ಹೋಳಿ (Holi) ಹಬ್ಬದ ಸಂಭ್ರಮ. ಹೋಳಿ ಹಬ್ಬದ ಸಂದರ್ಭದಲ್ಲಿ ಕೆಲವು ಬ್ಯಾಂಕ್ ಗಳು  ಕಡಿಮೆ ಬಡ್ಡಿದರದಲ್ಲಿ (Interest) ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಅವು ಯಾವ ಬ್ಯಾಂಕ್ (Bank)ಗಳು ಎನ್ನುವ ಮಾಹಿತಿ ಇಲ್ಲಿದೆ.  

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) : 
ನೀವು ಎಸ್‌ಬಿಐನಿಂದ (SBI) ಸಾಲ ತೆಗೆದುಕೊಳ್ಳಲು ಬಯಸುವುದಾದರೆ 72089-33142 ಸಂಖ್ಯೆಗೆ ಮಿಸ್ಡ್ ಕಾಲ್ (Missed call) ನೀಡಬೇಕು. ಇದರ ನಂತರ, ನಿಮಗೆ ಬ್ಯಾಂಕಿನಿಂದ ಫೋನ್  ಬರುತ್ತದೆ. ಮತ್ತು ಕೆಲ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನೀವು ಕೊಡುವ ಉತ್ತರದಿಂದ  ತೃಪ್ತಿದಾಯಕವಾಗಿದ್ದರೆ,  ಸಾಲದ ಪ್ರಕ್ರಿಯೆ ಆರಂಭವಾಗುತ್ತದೆ. ಗ್ರಾಹಕರು ಟೋಲ್ ಫ್ರೀ ನಂಬರ್ 1800-11-2211ಗೂ ಫೋನ್ ಮಾಡಬಹುದು.  ಬಯಸಿದಲ್ಲಿ, ಎಸ್‌ಎಂಎಸ್ (SMS) ಕಳುಹಿಸುವ ಮೂಲಕ ವೈಯಕ್ತಿಕ ಸಾಲದ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಎಸ್‌ಬಿಐನ ವೈಯಕ್ತಿಕ ಸಾಲದ ಬಡ್ಡಿದರವು (Interest) ಶೇಕಡಾ 9.60 ರಷ್ಟಿದ್ದು, 20 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು.

ಇದನ್ನೂ ಓದಿ : ATM ವಹಿವಾಟ ವಿಫಲವಾದ್ರೆ ₹ 25 ದಂಡ: ಬ್ಯಾಲೆನ್ಸ್ ಚೆಕ್ ಮಾಡಿದ್ರೂ ಬೀಳುತ್ತೆ ಫೈನ್!

ಪಂಜಾಬ್ ನ್ಯಾಷನಲ್ ಬ್ಯಾಂಕ್, (Punjab National Bank) : 
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಕನಿಷ್ಠ 25 ಸಾವಿರ ರೂ.ಗಳಿಂದ ಗರಿಷ್ಠ 15 ಲಕ್ಷ ರೂ.ವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕಿನ ವೈಯಕ್ತಿಕ ಸಾಲಕ್ಕಾಗಿ ಆನ್‌ಲೈನ್‌ನಲ್ಲಿ (Online) ಅರ್ಜಿ ಸಲ್ಲಿಸಬಹುದು. ಪಿಎನ್‌ಬಿಯ ವೈಯಕ್ತಿಕ ಸಾಲವು 12 ತಿಂಗಳಿಂದ 60 ತಿಂಗಳವರೆಗೆ ಮರುಪಾವತಿ ಅವಧಿಯನ್ನು ಹೊಂದಿರುತ್ತದೆ. ಅದರ ಬಡ್ಡಿದರವು ಶೇಕಡಾ 8.95 ಆಗಿದೆ.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ  (Union Bank of India): 
ಅತಿ ಕಡಿಮೆ ಬಡ್ಡಿದರದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಯುಬಿಐ ಕನಿಷ್ಠ ಐದು ಲಕ್ಷ ರೂಪಾಯಿಗಳಿಂದ ಗರಿಷ್ಠ 10 ಲಕ್ಷ ರೂಪಾಯಿಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. 5 ವರ್ಷಗಳ ಅವಧಿಗೆ 5 ಲಕ್ಷ ರೂ.ಗಳ ವೈಯಕ್ತಿಕ ಸಾಲಕ್ಕೆ (Personal loan) ಯೂನಿಯನ್ ಬ್ಯಾಂಕ್ ಶೇ 8.9 ರಷ್ಟು ಬಡ್ಡಿ ವಿಧಿಸುತ್ತದೆ. ಸಾಲ ತೆಗೆದುಕೊಳ್ಳಲು ಬಯಸುವ ಅರ್ಜಿದಾರರಿಗೆ ಕನಿಷ್ಠ  18 ವರ್ಷ ತುಂಬಿರಬೇಕು. 

ಇದನ್ನೂ ಓದಿ : ಉದ್ಯೋಗಿಗಳಿಗೆ ಸಿಹಿ ಸುದ್ದಿ: PF 'ತೆರಿಗೆ' ಮುಕ್ತ ಹೂಡಿಕೆ ಮಿತಿ ಹೆಚ್ಚಳ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News