SBI ಗ್ರಾಹಕರೇ ಗಮನಿಸಿ! ಜೂನ್ 30ರೊಳಗೆ ತಪ್ಪದೇ ಈ ಕೆಲಸ ಪೂರ್ಣಗೊಳಿಸಿ

SBI PAN-Aadhaar Link: ಎಸ್‌ಬಿಐ ಗ್ರಾಹಕರಿಗೆ ಒಂದು ಪ್ರಮುಖ ಮಾಹಿತಿ ಇದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಗ್ರಾಹಕರನ್ನು ತಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡಲು ಕೇಳಿಕೊಂಡಿದೆ, ಇದರಿಂದ ಅವರು ಭವಿಷ್ಯದಲ್ಲಿ ಯಾವುದೇ ಅನಾನುಕೂಲತೆಯನ್ನು ತಪ್ಪಿಸಬಹುದು.

Written by - Yashaswini V | Last Updated : Jun 2, 2021, 09:45 AM IST
  • ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಗ್ರಾಹಕರನ್ನು ತಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡಲು ಕೇಳಿಕೊಂಡಿದೆ
  • ಇದರಿಂದ ಗ್ರಾಹಕರು ಭವಿಷ್ಯದಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಎದುರಾಗಬಹುದಾದ ಅನಾನುಕೂಲತೆಯನ್ನು ತಪ್ಪಿಸಬಹುದು
  • ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡಲು 30 ಜೂನ್ 2021 ಕೊನೆಯ ದಿನಾಂಕವಾಗಿದೆ
SBI ಗ್ರಾಹಕರೇ ಗಮನಿಸಿ! ಜೂನ್ 30ರೊಳಗೆ ತಪ್ಪದೇ ಈ ಕೆಲಸ ಪೂರ್ಣಗೊಳಿಸಿ title=
SBI PAN-Aadhaar Link

ನವದೆಹಲಿ: SBI PAN-Aadhaar Link: ಎಸ್‌ಬಿಐ ಗ್ರಾಹಕರಿಗೆ ಒಂದು ಪ್ರಮುಖ ಮಾಹಿತಿ ಇದೆ. ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ತನ್ನ ಎಲ್ಲ ಗ್ರಾಹಕರನ್ನು ತಮ್ಮ ಪ್ಯಾನ್-ಆಧಾರ್ ಲಿಂಕ್ (PAN-Aadhaar Link) ಮಾಡಲು ಕೇಳಿಕೊಂಡಿದೆ, ಇದರಿಂದ ಅವರು ಭವಿಷ್ಯದಲ್ಲಿ ಬ್ಯಾಂಕಿಂಗ್ ವ್ಯವಹಾರದಲ್ಲಿ ಎದುರಾಗಬಹುದಾದ ಯಾವುದೇ ಅನಾನುಕೂಲತೆಯನ್ನು ತಪ್ಪಿಸಬಹುದು ಎಂದು ಹೇಳಲಾಗಿದೆ. ಪ್ಯಾನ್-ಆಧಾರ್ ಲಿಂಕ್ ಅನ್ನು ಎಲ್ಲರೂ  ಮಾಡಬೇಕಾಗಿದ್ದರೂ, ಎಸ್‌ಬಿಐ ತನ್ನ ಗ್ರಾಹಕರಿಗೆ ವಿಶೇಷವಾಗಿ ಎಚ್ಚರಿಕೆಯನ್ನು ನೀಡಿದೆ. 

ಎಸ್‌ಬಿಐ ಟ್ವೀಟ್ :
ಕೆಲವು ದಿನಗಳ ಹಿಂದೆ ಎಸ್‌ಬಿಐ (SBI) ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಈ ಟ್ವೀಟ್‌ನಲ್ಲಿ, ಎಸ್‌ಬಿಐ ನಮ್ಮ ಗ್ರಾಹಕರಿಗೆ ಭವಿಷ್ಯದಲ್ಲಿ ಯಾವುದೇ ಅನಾನುಕೂಲತೆಗಳನ್ನು ತಪ್ಪಿಸಲು ಅವರ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ (PAN-Aadhaar Link) ಮಾಡಲು ನಾವು ಸಲಹೆ ನೀಡುತ್ತೇವೆ, ಇದರಿಂದ ಅವರು ಬ್ಯಾಂಕಿಂಗ್ ಸೇವೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಆನಂದಿಸಬಹುದು. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ. ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ, ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ನಿಮಗೆ ಯಾವುದೇ ರೀತಿಯ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ ಎಂದು ಇದರಲ್ಲಿ ಎಚ್ಚರಿಸಲಾಗಿದೆ.

ಜೂನ್ 30 ಕೊನೆಯ ದಿನಾಂಕ:
ಆದಾಯ ತೆರಿಗೆ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ (PAN-Aadhaar Link) ಮಾಡಲು 30 ಜೂನ್ 2021 ಕೊನೆಯ ದಿನಾಂಕವಾಗಿದೆ. ನೀವು ನಿಗದಿತ ದಿನಾಂಕದ ಒಳಗೆ ಈ ಕೆಲಸ ಪೂರ್ಣಗೊಳಿಸದಿದ್ದರೆ ಬ್ಯಾಂಕಿಂಗ್ ವ್ಯವಹಾರದಲ್ಲಿ ನಿಮಗೆ ತೊಂದರೆಯಾಗಬಹುದು. ಹಾಗಾಗಿ ನೀವು ಕೊನೆಯ ದಿನಾಂಕಕ್ಕಾಗಿ ಕಾಯದೆ ಶೀಘ್ರದಲ್ಲೇ ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡುವುದು ಉತ್ತಮ.

ಇದನ್ನೂ ಓದಿ - Banking Alert : ನಿಮ್ಮ ಖಾತೆಗೆ ನಿಮ್ಮದಲ್ಲದ ದೊಡ್ಡ ಮೊತ್ತದ ಹಣ ಕ್ರೆಡಿಟ್ ಆದರೆ ಏನು ಮಾಡಬೇಕು?

ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಅಥವಾ ಇಲ್ಲವೇ? ಈ ರೀತಿ ಪರಿಶೀಲಿಸಿ:
ನಿಮ್ಮ ಪ್ಯಾನ್ ಮತ್ತು ಆಧಾರ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ, ನೀವು ಏನನ್ನೂ ಮಾಡುವ ಅಗತ್ಯವಿಲ್ಲ, ಆದರೆ ಎರಡೂ ಲಿಂಕ್ ಆಗಿದೆಯೆ ಅಥವಾ ಇಲ್ಲವೇ ಎಂದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಈ ಮಾಹಿತಿಯನ್ನು ಬಹಳ ಸುಲಭವಾಗಿ ಪಡೆಯಬಹುದು. 

ನಿಮ್ಮ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಲು ನೀವು ಆದಾಯ ತೆರಿಗೆ (Income Tax) ಇಲಾಖೆಯ ಎಸ್‌ಎಂಎಸ್ ಸೌಲಭ್ಯವನ್ನು ಬಳಸಬಹುದು.
- ನೀವು ನಿಮ್ಮ ಮೊಬೈಲ್‌ನ ಸಂದೇಶ ಪೆಟ್ಟಿಗೆಗೆ ಹೋಗಿ ನಿರ್ದಿಷ್ಟಪಡಿಸಿದ ಸ್ವರೂಪದಲ್ಲಿ SMS ಅನ್ನು ಟೈಪ್ ಮಾಡಿ ಮತ್ತು ಅದನ್ನು 567678 ಅಥವಾ 56161 ಗೆ ಕಳುಹಿಸಬೇಕು
- ಈ ರೀತಿ ಟೈಪ್ ಮಾಡಿ SMS - UIDPAN <12 ಅಂಕೆ ಆಧಾರ್ ನಂಬರ್> <10 ಅಂಕಿಯ ಪ್ಯಾನ್>
- ಈ ಎಸ್‌ಎಂಎಸ್ 567678 ಅಥವಾ 56161 ಗೆ ಕಳುಹಿಸಬೇಕು
- ಎರಡೂ ಲಿಂಕ್ ಆಗಿದ್ದರೆ "ಆಧಾರ್ ... ಈಗಾಗಲೇ ಪ್ಯಾನ್..ಇನ್ ಐಟಿಡಿ ಡೇಟಾಬೇಸ್‌ನೊಂದಿಗೆ ಸಂಬಂಧ ಹೊಂದಿದೆ. ನಮ್ಮ ಸೇವೆಗಳನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು" (Aadhaar...is already associated with PAN..in ITD database. Thank you for using our services) ಎಂದು ನೀವು SMS ಪಡೆಯುತ್ತೀರಿ.

ಪ್ಯಾನ್ ಮತ್ತು ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು?
ಪ್ಯಾನ್ ಮತ್ತು ಆಧಾರ್ ಎರಡೂ ಲಿಂಕ್‌ ಆಗದಿದ್ದರೆ ನೀವು ಈ ಎರಡನ್ನು ಸುಲಭವಾಗಿ ಲಿಂಕ್ ಮಾಡಬಹುದು. ಇಡೀ ಪ್ರಕ್ರಿಯೆ ಇಲ್ಲಿದೆ

ಮೊದಲ ಮಾರ್ಗ:
1- ಆದಾಯ ತೆರಿಗೆ ಪೋರ್ಟಲ್ www.incometax.gov.in ಗೆ ಹೋಗಿ
2- ಇಲ್ಲಿ ಎಡಭಾಗದಲ್ಲಿ ನೀವು ಲಿಂಕ್ ಆಧಾರ್ ಆಯ್ಕೆಯನ್ನು ನೋಡುತ್ತೀರಿ, ಅದರ ಮೇಲೆ ಕ್ಲಿಕ್ ಮಾಡಿ
3- ಹೊಸ ಪುಟ ತೆರೆಯುತ್ತದೆ, ಅಲ್ಲಿ ನೀವು ಆಧಾರ್‌ನಲ್ಲಿ ಉಲ್ಲೇಖಿಸಿರುವಂತೆ ಪ್ಯಾನ್, ಆಧಾರ್ ಮತ್ತು ನಿಮ್ಮ ಹೆಸರನ್ನು ಭರ್ತಿ ಮಾಡಬೇಕು
4- ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಹುಟ್ಟಿದ ವರ್ಷ ಮಾತ್ರ ಇದ್ದರೆ 'ಆಧಾರ್ ಕಾರ್ಡ್‌ನಲ್ಲಿ ನನಗೆ ಹುಟ್ಟಿದ ವರ್ಷ ಮಾತ್ರ ಇದೆ' ಎಂಬ ಪೆಟ್ಟಿಗೆಯನ್ನು ಟಿಕ್ ಮಾಡಿ.
5- ಕ್ಯಾಪ್ಚಾ ಕೋಡ್ ನಮೂದಿಸಿ ಅಥವಾ ಒಟಿಪಿಗಾಗಿ ಟಿಕ್ ಮಾಡಿ
6- ಲಿಂಕ್ ಆಧಾರ್ ಬಟನ್ ಕ್ಲಿಕ್ ಮಾಡಿ, ನಿಮಗೆ ಇದೀಗ ಪ್ಯಾನ್ ಮತ್ತು ಆಧಾರ್ ಲಿಂಕ್ ಸಿಕ್ಕಿದೆ.

ಇದನ್ನೂ ಓದಿ-  LPG Price Cut: LPG ಗ್ರಾಹಕರಿಗೆ ಗುಡ್ ನ್ಯೂಸ್, ಸಿಲಿಂಡರ್‌ನ ಬೆಲೆ 122 ರೂ.ವರೆಗೆ ಕಡಿತ

ಇನ್ನೊಂದು ಮಾರ್ಗ:
ನೀವು ಎಸ್‌ಎಂಎಸ್ ಮೂಲಕ ಪ್ಯಾನ್ ಮತ್ತು ಆಧಾರ್ ಅನ್ನು ಸಹ ಲಿಂಕ್ ಮಾಡಬಹುದು
- ಮೊಬೈಲ್‌ನ ಸಂದೇಶ ಪೆಟ್ಟಿಗೆಯಲ್ಲಿ, ಟೈಪ್ ಮಾಡಿ - UIDPAN <12-ಅಂಕಿಯ ಆಧಾರ್> <10-ಅಂಕಿಯ ಪ್ಯಾನ್>
- ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ, ಅಷ್ಟೆ

ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ ಆಗುವ ಅನಾನುಕೂಲಗಳು:
ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದು ಸಹ ಮುಖ್ಯವಾಗಿದೆ. ಏಕೆಂದರೆ ನೀವು ಇದನ್ನು ಮಾಡದಿದ್ದರೆ ನಿಮಗೆ ಯಾವುದೇ ಹಣಕಾಸಿನ ವಹಿವಾಟು ಮಾಡಲು ಸಾಧ್ಯವಾಗುವುದಿಲ್ಲ. ಇದಲ್ಲದೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಮತ್ತು ಹೆಚ್ಚಿನ ಹಣಕಾಸು ಕೆಲಸಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿರುತ್ತದೆ. 

1- ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ನಿಮಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ
2- ಪಿಂಚಣಿ, ವಿದ್ಯಾರ್ಥಿವೇತನ ಮತ್ತು ಎಲ್‌ಪಿಜಿ ಸಬ್ಸಿಡಿಯಂತಹ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುವುದಿಲ್ಲ
3- ಬ್ಯಾಂಕ್ ಖಾತೆ ತೆರೆಯುವಲ್ಲಿ ತೊಂದರೆ ಇರಬಹುದು
4- ನೀವು ಆಸ್ತಿ ಖರೀದಿಸಲು ಹೋದರೆ, ಇಲ್ಲಿಯೂ ಕಷ್ಟವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News