SBI Latest News: SBI ಈ ವಿಶೇಷ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಇಂದೇ ಕೊನೆ ದಿನ

SBI Platinum Deposits ವಿಶೇಷ ಠೇವಣಿ ಯೋಜನೆಯಾಗಿದ್ದು, ಇದು ಸೀಮಿತ ಅವಧಿಗೆ ಲಭ್ಯವಿರುತ್ತದೆ ಮತ್ತು ಇದರಲ್ಲಿ ಹೂಡಿಕೆ ಮಾಡುವ ಅವಧಿ 14 ನೇ ಸೆಪ್ಟೆಂಬರ್‌ನಲ್ಲಿ ಅಂದರೆ ಇಂದಿಗೆ ಕೊನೆಗೊಳ್ಳುತ್ತದೆ.  ಬೇಗನೆ ವಿವರಗಳನ್ನು ಪರಿಶೀಲಿಸಿ.  

Written by - Nitin Tabib | Last Updated : Sep 14, 2021, 10:56 AM IST
  • ಸ್ಪೆಷಲ್ ಡಿಪಾಸಿಟ್ ಸ್ಕೀಮ್ ಆರಂಭಿಸಿದ SBI.
  • ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಈ ಮಾಹಿತಿ ನೀಡಿದೆ.
  • ಈ ಸ್ಪೆಷಲ್ ಡಿಪಾಸಿಟ್ ಸ್ಕೀಮ್ ನಲ್ಲಿ ಹಣ ಹೂಡಿಕೆಗೆ ಇಂದೇ ಕೊನೆ ದಿನ
SBI Latest News: SBI ಈ ವಿಶೇಷ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಇಂದೇ ಕೊನೆ ದಿನ  title=
SBI Platinum Deposits (File Photo)

ನವದೆಹಲಿ: SBI Platinum Deposits - SBI ಕಾಲಕಾಲಕ್ಕೆ ಗ್ರಾಹಕರಿಗೆ ಕೊಡುಗೆಗಳು ಮತ್ತು ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯಂದು ವಿಶೇಷ ಠೇವಣಿ ಯೋಜನೆಯನ್ನು (SBI Special Deposit Scheme)  ಆರಂಭಿಸಿದೆ. ಇದರಲ್ಲಿ ನೀವು ಉತ್ತಮ ಬಡ್ಡಿ ಅಂದರೆ ಉತ್ತಮ ಲಾಭವನ್ನು ಪಡೆಯಬಹುದು. SBI Platinum Deposits ವಿಶೇಷ ಠೇವಣಿ ಯೋಜನೆಯಾಗಿದ್ದು, ಇದು ಸೀಮಿತ ಅವಧಿಗೆ ಲಭ್ಯವಿರುತ್ತದೆ ಮತ್ತು ಇದರಲ್ಲಿ ಹೂಡಿಕೆ ಮಾಡುವ ಅವಧಿ 14 ನೇ ಸೆಪ್ಟೆಂಬರ್‌ನಲ್ಲಿ ಅಂದರೆ ಇಂದಿಗೆ ಕೊನೆಗೊಳ್ಳುತ್ತದೆ.  ಬೇಗನೆ ವಿವರಗಳನ್ನು ಪರಿಶೀಲಿಸಿ.

ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಬ್ಯಾಂಕ್
SBI ಟ್ವೀಟ್ ಮಾಡುವ ಮೂಲಕ ಈ ಯೋಜನೆಯ ಕುರಿತು ಮಾಹಿತಿ ನೀಡಿದೆ. ಭಾರತದ 75 ನೇ ವರ್ಷದ ಸ್ವಾತಂತ್ರ್ಯವನ್ನು ಪ್ಲಾಟಿನಂ ಠೇವಣಿಗಳೊಂದಿಗೆ  (Platinum Deposits)  ಆಚರಿಸುವ ಸಮಯ ಬಂದಿದೆ ಎಂದು ಬ್ಯಾಂಕ್ ಹೇಳಿದೆ. ಎಸ್‌ಬಿಐನಲ್ಲಿ ಅವಧಿ ಠೇವಣಿ  (Term Deposits) ಮತ್ತು ವಿಶೇಷ ಅವಧಿ ಠೇವಣಿಗಳ (Special Term Deposits) ಪ್ರಯೋಜನಗಳನ್ನು ಪಡೆದುಕೊಳ್ಳಿ. ಈ ವಿಶೇಷ ಕೊಡುಗೆ 14 ಸೆಪ್ಟೆಂಬರ್ 2021 ರವರೆಗೆ ಮಾತ್ರ ಇರಲಿದೆ ಎಂದು ಬ್ಯಾಂಕ್ ಹೇಳಿದೆ.

ಇದನ್ನೂ ಓದಿ-ATM ನಿಂದ ಹರಿದ ನೋಟುಗಳು ಸಿಕ್ಕಿದರೆ ಏನು ಮಾಡಬೇಕು?ಇದನ್ನು ಬದಲಾಯಿಸಿಕೊಳ್ಳುವುದು ಹೇಗೆ ?

ಇದನ್ನೂ ಓದಿ-Floating ATM: SBI ವಿಶಿಷ್ಟ ಪ್ರಯತ್ನ, ದಾಲ್ ಸರೋವರದ ಮೇಲೆ ತೆಲುವ ATM ಆರಂಭ

ಈ ವಿಶೇಷ ಠೇವಣಿ ಯೋಜನೆಯ ಲಾಭಗಳೇನು?
1. ಈ ಯೋಜನೆಯಡಿ, ಗ್ರಾಹಕರು ಹಣವನ್ನು 75 ದಿನಗಳು, 525 ದಿನಗಳು ಮತ್ತು 2250 ದಿನಗಳವರೆಗೆ ಫಿಕ್ಸ್ದ್ ಡಿಪಾಸಿಟ್ ಮಾಡಬಹುದು.
2. ಅಲ್ಲದೆ, NRE ಮತ್ತು NRO ಅವಧಿ ಠೇವಣಿಗಳನ್ನು ಒಳಗೊಂಡಂತೆ ದೇಶೀಯ ಚಿಲ್ಲರೆ ಅವಧಿ ಠೇವಣಿಗಳು (ರೂ. 2 ಕೋಟಿಗಿಂತ ಕಡಿಮೆ) ಈ ಯೋಜನೆಯ ಲಾಭವನ್ನು ಪಡೆಯಬಹುದು.
3. ಇದರ ಅಡಿಯಲ್ಲಿ, ಹೊಸ ಮತ್ತು ನವೀಕರಣ ಠೇವಣಿಗಳನ್ನು ಸಹ ಮಾಡಬಹುದು.
4. ಹಾಗೆಯೇ ಇದು ಕೇವಲ ಅವಧಿ ಠೇವಣಿ ಮತ್ತು ವಿಶೇಷ ಅವಧಿ ಠೇವಣಿ ಉತ್ಪನ್ನವಾಗಿದೆ
5. NRE ಠೇವಣಿಗಳು 525 ಮತ್ತು 2250 ದಿನಗಳವರೆಗೆ ಮಾತ್ರ ಇರಿಸಬಹುದು.

ಇದನ್ನೂ ಓದಿ-SBI Alert! SBI ಗ್ರಾಹಕರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News