Home Loan Offer: ಸ್ವಂತ ಮನೆಯ ಕನಸು ಸುಲಭದಲ್ಲಿ ನನಸಾಗುವುದು.! ಈ ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದೆ ಗೃಹ ಸಾಲ

Home Loan Offer:ಮನೆ ಖರೀದಿಯ ಪ್ಲಾನ್ ಇರುವವರಿಗೆ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್  ಸಂತಸದ ಸುದ್ದಿಯನ್ನು ನೀಡಿದೆ. ಹೌದು, ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದೆ.   

Written by - Ranjitha R K | Last Updated : Oct 13, 2022, 09:21 AM IST
  • ಮನೆ ಖರೀದಿಸಲು ಬಯಸುವವರಿಗೆ ಸಂತಸದ ಸುದ್ದಿ
  • ಹಬ್ಬದ ಹಿನ್ನೆಲೆಯಲ್ಲಿ ಬ್ಯಾಂಕ್ ನೀಡುತ್ತಿದೆ ಆಫರ್
  • ಶೇಕಡಾ 8.40 ದರದಲ್ಲಿ ಗೃಹ ಸಾಲ ಲಭ್ಯ
Home Loan Offer:  ಸ್ವಂತ ಮನೆಯ ಕನಸು ಸುಲಭದಲ್ಲಿ ನನಸಾಗುವುದು.! ಈ ಬ್ಯಾಂಕ್ ಗಳು ಕಡಿಮೆ ಬಡ್ಡಿದರದಲ್ಲಿ ನೀಡುತ್ತಿದೆ ಗೃಹ ಸಾಲ title=
Homeloan Offer (file photo)

Home Loan Offer : ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಹೆಚ್ಚಿಸಿದ ನಂತರ, ಗೃಹ ಸಾಲದ ದರವೂ ಹೆಚ್ಚಾಗಿದೆ. ಆದರೆ, ಮನೆ ಖರೀದಿಯ ಪ್ಲಾನ್ ಇರುವವರಿಗೆ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಚ್‌ಡಿಎಫ್‌ಸಿ ಲಿಮಿಟೆಡ್  ಸಂತಸದ ಸುದ್ದಿಯನ್ನು ನೀಡಿದೆ. ಹೌದು, ಹಬ್ಬದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದೆ. ಈ ಆಫರ್ ಅಡಿಯಲ್ಲಿ ಎರಡೂ ಬ್ಯಾಂಕ್ ಗಳು ರಿಯಾಯಿತಿ ಬಡ್ಡಿದರದಲ್ಲಿ ಗ್ರಾಹಕರಿಗೆ ಗೃಹ ಸಾಲ ನೀಡುತ್ತಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಶೇಕಡಾ 8.40 ದರದಲ್ಲಿ ಗೃಹ ಸಾಲವನ್ನು ನೀಡುತ್ತಿವೆ. 

ಹಬ್ಬದ ರಿಯಾಯಿತಿ ಕೊಡುಗೆ :
ಎಸ್‌ಬಿಐ ಇಲ್ಲಿಯವರೆಗೆ ನೀಡಿದ ಗಗೃಹ ಸಾಲದ ಒಟ್ಟು ಮೊತ್ತ 6 ಲಕ್ಷ ಕೋಟಿ  ರೂಪಾಯಿ ಎಂದು ಬ್ಯಾಂಕ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ವಲಯದಲ್ಲಿ ಬ್ಯಾಂಕ್ ವೊಂದು ನೀಡಿರುವ ಅತಿ ದೊಡ್ಡ ಸಾಲದ ಮೊತ್ತ ಇದಾಗಿದೆ. ಇದೀಗ ಹಬ್ಬದ ಹಿನ್ನೆಲೆಯಲ್ಲಿ  ಗೃಹ ಸಾಲ ಪಡೆಯುವವರಿಗೆ ಬ್ಯಾಂಕ್ ಹಬ್ಬದ ರಿಯಾಯಿತಿಗಳನ್ನು ನೀಡುತ್ತಿದೆ. ಇದರ ಅಡಿಯಲ್ಲಿ, ಬಡ್ಡಿ ದರದಲ್ಲಿ ಶೇಕಡಾ 0.25 ರಷ್ಟು ರಿಯಾಯಿತಿ ನೀಡುತ್ತದೆ. ಈ ಆಫರ್ ಹಿನ್ನೆಲೆಯಲ್ಲಿ ಆರಂಭಿಕ ಹಂತದ ಸಾಲದ ಬಡ್ಡಿ ದರವು ಶೇಕಡಾ 8.40 ಆಗಿರುತ್ತದೆ.

ಇದನ್ನೂ ಓದಿ : ಅಗ್ಗದ ಎಲೆಕ್ಟ್ರಿಕ್ ಕಾರು ಇದು.! ಟಾಟಾ ಟಿಯಾಗೊ ಇವಿಗೆ ನೀಡಲಿದೆ ಪೈಪೋಟಿ

ಗ್ರಾಹಕರಿಗೆ ಸಿಗಲಿದೆ ಇಷ್ಟು ರಿಯಾಯಿತಿ  : 
ಎಸ್‌ಬಿಐ ನೀಡುತ್ತಿರುವ ಈ ಆಫರ್ ಜನವರಿ 31, 2023 ರವರೆಗೆ ಲಭ್ಯವಿರುತ್ತದೆ. ಬ್ಯಾಂಕ್ ಪ್ರಕಾರ, ಹಬ್ಬದ ಕೊಡುಗೆಯ ಅಡಿಯಲ್ಲಿ, ಗೃಹ ಸಾಲದ ಮೇಲೆ ಶೇಕಡಾ 0.25 ರಷ್ಟು, ಗೃಹ ಸಾಲದ ಮೇಲೆ ತೆಗದುಕೊಳ್ಳುವ ಟಾಪ್ ಅಪ್ ಲೋನ್ ಗೆ ಶೇಕಡಾ 0.15 ರಷ್ಟು ಮತ್ತು ಆಸ್ತಿ ಅಡಮಾನದ ಮೇಲಿನ ಸಾಲದ ಮೇಲೆ ಶೇಕಡಾ 0.30 ರವರೆಗೆ ರಿಯಾಯಿತಿ ನೀಡಲಾಗುತ್ತದೆ. 

ಮತ್ತೊಂದೆಡೆ, ಎಚ್‌ಡಿಎಫ್‌ಸಿ ಹೊಸ ಸಾಲಗಾರರಿಗೆ ಶೇಕಡಾ 0.20 ರಷ್ಟು ರಿಯಾಯಿತಿ ಅಥವಾ ಶೇಕಡಾ 8.40 ರ ಬಡ್ಡಿ ದರದಲ್ಲಿ ಗೃಹ ಸಾಲ ನೀಡುತ್ತಿದೆ. HDFC ವೆಬ್‌ಸೈಟ್ ಪ್ರಕಾರ, ಹಬ್ಬದ ರಿಯಾಯಿತಿ ಕೊಡುಗೆ ನವೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ. ಅಲ್ಲದೆ, ಕ್ರೆಡಿಟ್ ಸ್ಕೋರ್ ಕನಿಷ್ಠ 750 ಆಗಿರುವ ಸಾಲಗಾರರೂ ಈ ಆಫರ್ ನ ಲಾಭವನ್ನು ಪಡೆಯಬಹುದು. 

ಇದನ್ನೂ ಓದಿ : Aadhaar Card : ನಿಮ್ಮ ಆಧಾರ್ ಕಾರ್ಡ್‌ಗೆ 10 ವರ್ಷ ಆಗಿದೆಯೇ? ಕೂಡಲೇ ಈ ಕೆಲಸ ಮಾಡಿ 

 

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News