Hair care tips : ಕೇಶರಾಶಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಅದಕ್ಕಾಗಿ, ಕೂದಲು ರಕ್ಷಣೆ ಬಹಳ ಮುಖ್ಯ, ಅದರ ರಕ್ಷಣೆಗಾಗಿ ನಾವು ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದು ಉತ್ತಮ. ಈ ಪೈಕಿ ಮೊಳಕೆಯೊಡೆದ ಮೆಂತ್ಯೆ ಕೂದಲ ಬೆಳವಣಿಗೆಗೆ ಹೆಚ್ಚು ಸಹಾಯಕಾರಿಯಾಗಿದೆ..
ಹೌದು.. ಮೊಳಕೆಯೊಡೆದ ಮೆಂತ್ಯವನ್ನು ತಿನ್ನುವುದು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ. ಅದರಲ್ಲೂ ಇದು ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಕೂದಲು ಉದುರುವುದನ್ನು ತಡೆಯಲು ಜನರು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಅವುಗಳು ಉತ್ತಮ ಫಲಿತಾಂಶ ನೀಡುವುದಿಲ್ಲ, ನೀವು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸಲು ಬಯಸಿದರೆ, ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ತಿನ್ನಲು ಪ್ರಾರಂಭಿಸಿ.
ಇದನ್ನೂ ಓದಿ:ಡಾರ್ಕ್ ಸರ್ಕಲ್ ಬರೋಕೆ ಬಹು ಮುಖ್ಯ ಕಾರಣಗಳು ಯಾವುವು ಗೊತ್ತೆ..? ತಪ್ಪದೇ ತಿಳಿಯಿರಿ
ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ತಿನ್ನುವುದು ಕೂದಲು ಉದುರುವಿಕೆಯ ಸಮಸ್ಯೆಯ ಜೊತೆಗೆ ಮಧುಮೇಹಕ್ಕೆ ಸಹಾಯ ಮಾಡುತ್ತದೆ. ಅದರಲ್ಲೂ ಕೂದಲು ಉದುರುವುದರಿಂದ ಬೋಳು ಶುರುವಾದವರು ಮೊಳಕೆ ಬರಿಸಿದ ಮೆಂತ್ಯವನ್ನು ತಿನ್ನಬೇಕು. ಇದರಿಂದ ಬೋಳು ತಲೆಯಲ್ಲೂ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಮೊಳಕೆಯೊಡೆದ ಮೆಂತ್ಯವನ್ನು ತಿಂದರೆ, ದೇಹಕ್ಕೆ ವಿಟಮಿನ್ ಸಿ, ಕಬ್ಬಿಣ, ವಿಟಮಿನ್ ಬಿ, ಮೆಗ್ನೀಸಿಯಮ್, ಡಯೆಟರಿ ಫೈಬರ್, ಪೊಟ್ಯಾಸಿಯಮ್, ಸೋಡಿಯಂನಂತಹ ಪೋಷಕಾಂಶಗಳು ದೊರೆಯುತ್ತದೆ.. ಅಲ್ಲದೆ, ಇದು ದೇಹದಲ್ಲಿ ರಕ್ತ ಸಂಚಾರವನ್ನು ಉತ್ತಮಗೊಳ್ಳುತ್ತದೆ. ಇದು ನೆತ್ತಿಯ ರಂಧ್ರಗಳಿಗೆ ಹೇರಳವಾದ ಪೋಷಣೆಯನ್ನು ಒದಗಿಸುತ್ತದೆ.
ಇದನ್ನೂ ಓದಿ:ಹೊಟ್ಟೆನೋವಿಗೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಮನೆಮದ್ದುಗಳು ಇಲ್ಲಿವೆ
ನೀವು ಕೂದಲು ಉದುರುವಿಕೆಯನ್ನು ತಡೆಯಲು ಮತ್ತು ಬೋಳು ತಲೆಯಲ್ಲಿಯೂ ಹೊಸ ಕೂದಲು ಪಡೆಯಲು ಬಯಸಿದರೆ, ಪ್ರತಿದಿನ ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ತಿನ್ನಲು ಪ್ರಾರಂಭಿಸಿ. ಇದು ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ನೀಡುತ್ತದೆ ಮತ್ತು ಕೂದಲನ್ನು ಬಲಪಡಿಸುತ್ತದೆ.
ಮೊಳಕೆಯೊಡೆದ ಮೆಂತ್ಯವನ್ನು ಹೇಗೆ ತಿನ್ನಬೇಕು? : ಒಂದು ಚಮಚ ಮೆಂತ್ಯವನ್ನು ರಾತ್ರಿಯಿಡೀ ನೀರಿನಲ್ಲಿ ಇರಿಸಿ ಮತ್ತು ಮರುದಿನ ನೀರನ್ನು ತೆಗೆದು, ಹತ್ತಿ ಬಟ್ಟೆಯಲ್ಲಿ ಬಿಗಿಯಾಗಿ ಕಟ್ಟಿ. ಮೆಂತ್ಯ ಮೊಳಕೆ ಬರುವವರೆಗೆ ಅದನ್ನು ಹಾಗೆಯೇ ಬಿಡಿ. ಮೊಳಕೆಯೊಡೆದ ಮೆಂತ್ಯ ಬೀಜಗಳನ್ನು ನಿಯಮಿತವಾಗಿ ತಿನ್ನಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.