SBI Alert! ತನ್ನ 40 ಕೋಟಿ ಗ್ರಾಹಕರಿಗೆ ಅಲರ್ಟ್ ಜಾರಿಗೊಳಿಸಿದ SBI ಹೇಳಿದ್ದೇನು?

PAN-Aadhaar Link: SBI ತನ್ನ ಎಲ್ಲಾ ಖಾತೆದಾರರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಮಾರ್ಚ್ 31 ರೊಳಗೆ ಗ್ರಾಹಕರು ಪ್ಯಾನ್-ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ, ಅವರ ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗಬಹುದು ಎಂದು ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಹೇಳಿದೆ.

Written by - Nitin Tabib | Last Updated : Feb 6, 2022, 01:24 PM IST
  • ಮಾರ್ಚ್ 31 ರವರೆಗೆ ಆಧಾರ್-ಪ್ಯಾನ್ ಜೋಡಣೆಗೆ ಅವಕಾಶ
  • ಪ್ಯಾನ್ ಜೊತೆಗೆ ಆಧಾರ್ ಲಿಂಕ್ ಮಾಡುವುದು ಅನಿವಾರ್ಯ
  • ಪ್ಯಾನ್-ಆಧಾರ್ ಲಿಂಕ್ ಮಾಡದೆ ಹೋದಲ್ಲಿ ಬ್ಯಾಂಕಿಂಗ್ ಸೇವೆಗೆ ಅಡೆತಡೆ.
SBI Alert! ತನ್ನ 40 ಕೋಟಿ ಗ್ರಾಹಕರಿಗೆ ಅಲರ್ಟ್ ಜಾರಿಗೊಳಿಸಿದ SBI ಹೇಳಿದ್ದೇನು? title=
PAN-Aadhaar Link (File Photo)

ನವದೆಹಲಿ: PAN-Aadhaar Link - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (State Bank Of India) ತನ್ನ 40 ಕೋಟಿ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಹೌದು, 31 ಮಾರ್ಚ್ 2022ರ ಮೊದಲು ಪ್ಯಾನ್-ಆಧಾರ್ ಲಿಂಕ್ ಮಾಡಲು ತನ್ನ ಗ್ರಾಹಕರಿಗೆ ಬ್ಯಾಂಕ್ ಸೂಚನೆ ನೀಡಿದೆ. ಒಂದು ವೇಳೆ ಗ್ರಾಹಕರು ಈ ಕೆಲಸ ಮಾಡದೆ ಹೋದಲ್ಲಿ ಬ್ಯಾಂಕಿಂಗ್ ಅವರ ಪಾಲಿಗೆ ಬ್ಯಾಂಕಿಂಗ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಬ್ಯಾಂಕ್ ಹೇಳಿದೆ. ಈ ಕುರಿತು SBI ಟ್ವೀಟ್ ಮಾಡಿದೆ. 

ಕೊರೊನಾ ವೈರಸ್ ಸಾಂಕ್ರಾಮಿಕದ ಕಾರಣ ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಅಂತಿಮ ಗಡುವನ್ನು ಕೇಂದ್ರ ಸರ್ಕಾರ 30 ಸೆಪ್ಟೆಂಬರ್ 2021 ರಿಂದ 31 ಮಾರ್ಚ್ 2022 ರವರೆಗೆ ವಿಸ್ತರಿಸಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-LIC ಪಾಲಸಿ ಧಾರಾಕಾರ ಗಮನಕ್ಕೆ! ಈ ಎರಡು ಪಾಲಸಿಗಳಲ್ಲಿ ಭಾರಿ ಬದಲಾವಣೆ, ಹೂಡಿಕೆಗೂ ಮುನ್ನ ಈ ಸುದ್ದಿ ಓದಿ

ಪ್ಯಾನ್-ಆಧಾರ್ ಲಿಂಕ್ ಮಾಡುವುದು ಹೇಗೆ?
ಮೊದಲ ವಿಧಾನ

1- ಮೊದಲು ನೀವು ಆದಾಯ ತೆರಿಗೆಯ ಅಧಿಕೃತ ವೆಬ್‌ಸೈಟ್ https://www.incometaxindiaefiling.gov.in/home ಗೆ ಹೋಗಿ
2- ಅಲ್ಲಿ ಎಡಭಾಗದಲ್ಲಿ ನಿಮಗೆ ಲಿಂಕ್ ಆಧಾರ್ ಆಯ್ಕೆ ಸಿಗಲಿದೆ, ಅದರ ಮೇಲೆ ಕ್ಲಿಕ್ ಮಾಡಿ
3- ಹೊಸ ಪುಟ ತೆರೆಯುತ್ತದೆ, ಅಲ್ಲಿ ನೀವು ಪ್ಯಾನ್, ಆಧಾರ್ ಮತ್ತು ಆಧಾರ್‌ನಲ್ಲಿ ನಮೂದಿಸಿರುವಂತೆ ನಿಮ್ಮ ಹೆಸರನ್ನು ಭರ್ತಿ ಮಾಡಬೇಕು
4- ನಿಮ್ಮ ಆಧಾರ್ ಕಾರ್ಡ್‌ನಲ್ಲಿ ನೀವು ಕೇವಲ ಜನ್ಮ ವರ್ಷವನ್ನು ಹೊಂದಿದ್ದರೆ, ನಂತರ 'ಆಧಾರ್ ಕಾರ್ಡ್‌ನಲ್ಲಿ ನನ್ನ ಜನ್ಮ ವರ್ಷ ಮಾತ್ರ ಇದೆ' ಎಂಬ ಬಾಕ್ಸ್ ಅನ್ನು ಟಿಕ್ ಮಾಡಿ.
5- ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಅಥವಾ OTP ಗಾಗಿ ಟಿಕ್ ಮಾಡಿ
6- ಲಿಂಕ್ ಆಧಾರ್ ಬಟನ್ ಅನ್ನು ಕ್ಲಿಕ್ ಮಾಡಿ, ಆಗ ನಿಮ್ಮ ಪ್ಯಾನ್ ಮತ್ತು ಆಧಾರ್ ನೊಂದಿಗೆ ಲಿಂಕ್ ಆಗಲಿದೆ.

ಇದನ್ನೂ ಓದಿ-Share Market ಹೂಡಿಕೆದಾರರಿಗೊಂದು ಸಂತಸದ ಸುದ್ದಿ! SEBI ಇಟ್ಟಿರುವ ಈ ಹೆಜ್ಜೆಯಿಂದ ಹೂಡಿಕೆದಾರರಿಗೆ ಭಾರಿ ಲಾಭ

ಎರಡನೇ ವಿಧಾನ 
ನೀವು ಎಸ್‌ಎಂಎಸ್ ಮೂಲಕವೂ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬಹುದು
>> ಮೊಬೈಲ್‌ನ ಸಂದೇಶ ಬಾಕ್ಸ್‌ನಲ್ಲಿ, UIDPAN<12-ಅಂಕಿಯ ಆಧಾರ್>10-ಅಂಕಿಯ PAN>  ಟೈಪ್ ಮಾಡಿ,
>> ಈ ಸಂದೇಶವನ್ನು 567678 ಅಥವಾ 56161 ಗೆ ಕಳುಹಿಸಿ, ಅಷ್ಟೆ

ಇದನ್ನೂ ಓದಿ-LPG Subsidy:ಎಲ್ ಪಿಜಿ ಸಬ್ಸಿಡಿ ಬಗ್ಗೆ ಇಲ್ಲಿದೆ ಅತ್ಯಂತ ಮಹತ್ವದ ಮಾಹಿತಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News