SBI Account Opening Through Video KYC - SBI ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಇನ್ಮುಂದೆ ಈ ಕೆಲಸಕ್ಕಾಗಿ ನೀವು ಬ್ಯಾಂಕ್ ಗೆ ಹೋಗಬೇಕಾಗಿಲ್ಲ

SBI Account Opening Through Video KYC  - ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಬ್ಯಾಂಕ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಫೆಸಿಯಲ್ ರಿಕಗ್ನಿಶನ್ ತಂತ್ರಜ್ಞಾನ ಮೂಲಕ ನಡೆಸಲಾಗಿರುವ ಈ ಡಿಜಿಟಲ್ ಪ್ರಕ್ರಿಯೆ ಒಂದು ಸಂಪೂರ್ಣ ಕಾಂಟಾಕ್ಟ್ ಲೆಸ್ ಹಾಗೂ ಪೇಪರ್ ಲೆಸ್ ಪ್ರೋಸೆಸ್ ಆಗಿರಲಿದೆ.

Written by - Nitin Tabib | Last Updated : Apr 23, 2021, 10:30 PM IST
  • ಇನ್ಮುಂದೆ SBI ಉಳಿತಾಯ ಖಾತೆ ತೆರೆಯಲು ಬ್ಯಾಂಕ್ ಗೆ ಹೋಗಬೇಕಾಗಿಲ್ಲ.
  • ಮನೆಯಲ್ಲಿಯೇ ಕುಳಿತು ನೀವು ಈ ಕೆಲಸ ಮಾಡಬಹುದು.
  • ಇದಕ್ಕಾಗಿ ಬ್ಯಾಂಕ್ ಆರಂಭಿಸಿದೆ ಈ ಹೊಸ ಸೇವೆ.
SBI Account Opening Through Video KYC - SBI ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಇನ್ಮುಂದೆ ಈ ಕೆಲಸಕ್ಕಾಗಿ ನೀವು ಬ್ಯಾಂಕ್ ಗೆ ಹೋಗಬೇಕಾಗಿಲ್ಲ title=
SBI Account Through Video KYC (File Photo)

ನವದೆಹಲಿ: SBI Account Opening Through Video KYC  - ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ (State Bank Of India) ಬ್ಯಾಂಕ್ ವಿಡಿಯೋ ಕೆವೈಸಿಯನ್ನು ಪ್ರಾರಂಭಿಸಿದ್ದು, ತನ್ನ ಗ್ರಾಹಕರಿಗೆ ದೊಡ್ಡ ಪರಿಹಾರವನ್ನೇ ನೀಡಿದೆ. ಕರೋನಾದ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, ಜನರಿಗೆ ಮನೆಯಲ್ಲಿಯೇ ಇರಲು ಸೂಚನೆ ನೀಡಲಾಗುತ್ತಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು, ಬ್ಯಾಂಕಿನಲ್ಲಿ ಖಾತೆ ತೆರೆಯಲು ಶಾಖೆಗೆ ಹೋಗುವ ಬದಲು ಮನೆಯಲ್ಲಿ ಕುಳಿತುಕೊಳ್ಳುವ ಮೂಲಕ ಕೆವೈಸಿ ಮಾಡುವ ಆಯ್ಕೆಯನ್ನು ಎಸ್‌ಬಿಐ ಆರಂಭಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಎಸ್‌ಬಿಐ (SBI) ಅಧ್ಯಕ್ಷ ದಿನೇಶ್ ಖಾರಾ, ಆನ್‌ಲೈನ್ ಉಳಿತಾಯ ಖಾತೆ ತೆರೆಯುವ ಸೌಲಭ್ಯವನ್ನು ಘೋಷಿಸುವುದು ತಮಗೆ ಬಹಳ ಸಂತಸ ತಂದಿದೆ.  ಇದು ಪ್ರಸ್ತುತ ಸಾಂಕ್ರಾಮಿಕ ಸಂದರ್ಭದಲ್ಲಿ ಬಹಳ ಅವಶ್ಯಕವಾಗಿದೆ. ಈ ಉಪಕ್ರಮವು ಮೊಬೈಲ್ ಬ್ಯಾಂಕಿಂಗ್‌ಗೆ ಹೊಸ ಆಯಾಮವನ್ನು ನೀಡಲಿದೆ ಮತ್ತು ಗ್ರಾಹಕರಿಗೆ ಅವರ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಡಿಜಿಟಲ್‌ಗೆ ಅಧಿಕಾರ ನೀಡಲಿದೆ ಎಂಬುದನ್ನು ನಾವು ನಂಬುತ್ತೇವೆ ಎಂದಿದ್ದಾರೆ. "ಈ ಡಿಜಿಟಲ್ ಉಪಕ್ರಮವು ಸಂಪರ್ಕವಿಲ್ಲದ ಮತ್ತು ಕಾಗದರಹಿತ ಪ್ರಕ್ರಿಯೆಯಾಗಿದ್ದು, ಇದನ್ನು ಕೃತಕ ಬುದ್ಧಿಮತ್ತೆ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನದಿಂದ ನಡೆಸಲಾಗುತ್ತದೆ" ಎಂದು ಬ್ಯಾಂಕ್ ತಿಳಿಸಿದೆ. ಕಳೆದ ವರ್ಷದಿಂದ ಅನೇಕ ಖಾಸಗಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವಿಡಿಯೋ ಕೆವೈಸಿ (SBI Video KYC) ಸೌಲಭ್ಯವನ್ನು ನೀಡುತ್ತಿವೆ  ಎಂಬುದು ಇಲ್ಲಿ ಗಮನಾರ್ಹ.

ಈ ರೀತಿ YONO ಆಪ್ ಮೂಲಕ ವಿಡಿಯೋ KYC ಮಾಡಿ
- ಇದಕ್ಕಾಗಿ ಮೊದಲು ಯೋನೋ ಆಪ್ ಡೌನ್ಲೋಡ್ ಮಾಡಿ.
- ಬಳಿಕ ಆಪ್ ನಲ್ಲಿ ‘New to SBI’ ಆಯ್ಕೆಯ ಮೇಲೆ ಕ್ಲಿಕ್ಕಿಸಿ ಮತ್ತು Insta Plus Savings Account ಸೆಲೆಕ್ಟ್ ಮಾಡಿ.
- ಬಳಿಕ ನಿಮ್ಮ ಆಧಾರ್ ವಿವರಗಳನ್ನು ನಮೂದಿಸಿ.
- ನಿಮ್ಮ ಆಧಾರ್ ಪರಿಶೀಲನೆ ಪೂರ್ಣಗೊಂಡ ಬಳಿಕ ನಿಮ್ಮ ವೈಯಕ್ತಿಕ ಮಾಹಿತಿ ನಮೂದಿಸಿ.
- ಬಳಿಕ ಗ್ರಾಹಕರು ವಿಡಿಯೋ ಕೆವೈಸಿ ಪೂರ್ಣಗೊಳಿಸಲು ಶೆಡ್ಯೂಲ್ ನಿಗದಿಪಡಿಸಬೇಕು.
- ವಿಡಿಯೋ ಕೆವೈಸಿ (KYC) ಪೂರ್ಣಗೊಂಡ ಬಳಿಕ ನಿಮ್ಮ SBI ಖಾತೆ ತೆರೆದುಕೊಳ್ಳಲಿದೆ.

ಇದನ್ನೂ ಓದಿ-Income Tax ಫಾರ್ಮ್ 15G / 15H ನ ಪ್ರಯೋಜನವೇನು? ಇಲ್ಲಿದೆ ನೋಡಿ

ಬ್ಯಾಂಕ್ ಗೆ ಭೇಟಿ ನೀಡದೆಯೇ ನಿಮ್ಮ ಖಾತೆ ತೆರೆಯಲಿದೆ
ವಿಡಿಯೋ ಕಾಲ್ ಮೂಲಕ ಗ್ರಾಹಕರ ಬ್ಯಾಂಕ್ ಖಾತೆ ತೆರೆಯುವ (Saving Account) ಪ್ರಕ್ರಿಯೆ ಒಂದು ದೊಡ್ಡ ಹೆಜ್ಜೆಯಾಗಿದೆ ಹಾಗೂ ಇದರಿಂದ ಬ್ರಾಂಚ್ ಲೆಸ್ ಬ್ಯಾಂಕಿಂಗ್ ಗೆ ಒಂದು ಹೊಸ ಆಯಾಮ ಸಿಗಲಿದೆ. ಇದಲ್ಲದೆ ಬ್ಯಾಂಕ್ ಗೂ ಕೂಡ ತನ್ನ ದೂರದ ಗ್ರಾಹಕರನ್ನು ತಲುಪಲು ನೆರವು ಸಿಗಲಿದೆ. ಪ್ರಸ್ತುತ ಖಾತೆ ತೆರೆಯಲು ಗ್ರಾಹಕರು ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು ಹಾಗೂ ಅರ್ಜಿ ಭರ್ತಿ ಮಾಡಬೇಕು. ಇದಾದ ಬಳಿಕ ಏಜೆಂಟ್ ನಿಮ್ಮ ದಾಖಲೆ ಹಾಗೂ ಹಸ್ತಾಕ್ಷರ ಪಡೆಯುತ್ತಾರೆ. ಕೆಲ ಪ್ರಕರಣಗಳಲ್ಲಿ ಆನ್ಲೈನ್ ಮೂಲಕ ಬೇಸಿಕ್ ಖಾತೆ ತೆರೆಯಬಹುದಾಗಿದೆ. ಆದರೆ ಸಂಪೂರ್ಣ ಸೇವೆಗಳ ಖಾತೆಗಾಗಿ ಪೇಪರ್ ದಾಖಲೆಗಳು ಅನಿವಾರ್ಯವಾಗಿವೆ.

ಇದನ್ನೂ ಓದಿ- ಈ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿದೆ ವಿಶೇಷ ಪ್ಲಾನ್ ಜೊತೆಗೆ 5 ಲಕ್ಷದವರೆಗಿನ ಇನ್ಶುರೆನ್ಸ್ ಕವರ್

ಕೆವೈಸಿಗಾಗಿ ಅಗತ್ಯ ದಾಖಲೆಗಳು
- ಪಾಸ್ಪೋರ್ಟ್
- ವೋಟರ್ ಐಡಿ
- ಡ್ರೈವಿಂಗ್ ಲೈಸನ್ಸ್
-ಆಧಾರ್ ಕಾರ್ಡ್ 
- ಮನರೆಗಾ ಕಾರ್ಡ್ 
- ಪ್ಯಾನ್ ಕಾರ್ಡ್

ಇದನ್ನೂ ಓದಿ- Corona ಚಿಕಿತ್ಸೆಗೆ ಹಣದ ಅಗತ್ಯವಿದೆಯೇ? ಈ ಆ್ಯಪ್ ಮೂಲಕ PF ಹಣ ತೆಗೆಯಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News