ತೆರಿಗೆದಾರರೇ ಗಮನಿಸಿ! ಈ ಒಂದು ಕೆಲಸ ಮಾಡದಿದ್ದಲ್ಲಿ ತೆರಬೇಕಾದೀತು ಹೆಚ್ಚು ಟ್ಯಾಕ್ಸ್

Tax Saving Easy Tips : ಟ್ಯಾಕ್ಸ್  ಸೇವಿಂಗ್ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿಸಬಹುದು. ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ,  ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್‌ಗಳಂತಹ ಇತರ ಆಯ್ಕೆಗಳ ಹುಡುಕಾಟ ನಡೆಸಿದ್ದರೆ, ಇದು ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ. 

Written by - Ranjitha R K | Last Updated : Mar 20, 2023, 10:13 AM IST
  • ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಟ್ಯಾಕ್ಸ್ ಸೇವಿಂಗ್ ಎಫ್ ಡಿ ನೀಡುತ್ತವೆ.
  • ಟ್ಯಾಕ್ಸ್ ಸೇವಿಂಗ್ ಎಫ್ ಡಿ ಮೇಲೆ ಸಿಗುತ್ತದೆ 6.50 ಶೇ.ದಿಂದ 7.60 ರವರೆಗೆ ಬಡ್ಡಿದರ
  • ಟ್ಯಾಕ್ಸ್ ಸೇವಿಂಗ್ ಎಫ್ ಡಿಯಲ್ಲಿ ಯಾರು ಹೂಡಿಕೆ ಮಾಡಬಹುದು ?
ತೆರಿಗೆದಾರರೇ  ಗಮನಿಸಿ! ಈ ಒಂದು ಕೆಲಸ ಮಾಡದಿದ್ದಲ್ಲಿ ತೆರಬೇಕಾದೀತು ಹೆಚ್ಚು ಟ್ಯಾಕ್ಸ್  title=

ಬೆಂಗಳೂರು :  2023 ಹಣಕಾಸು ವರ್ಷ ಅಂತ್ಯವಾಗುವ ಮೊದಲು ತೆರಿಗೆ ಉಳಿಸುವ ಆಯ್ಕೆಯನ್ನು ಹುಡುಕುತ್ತಿರುವ ಜನರಿಗೆ ಫಿಕ್ಸೆಡ್ ಡೆಪಾಸಿಟ್  ಉತ್ತಮ ಆಯ್ಕೆಯಾಗಿದೆ. ಅನೇಕ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು ಐದು ವರ್ಷಗಳ ಮೆಚ್ಯುರಿಟಿ ಅವಧಿಯೊಂದಿಗೆ ಟ್ಯಾಕ್ಸ್  ಸೇವಿಂಗ್ ಎಫ್ ಡಿಗಳನ್ನು ನೀಡುತ್ತವೆ. ಈಗಾಗಲೇ ಪೋಸ್ಟ್ ಆಫೀಸ್ ಯೋಜನೆಗಳು, ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ,  ಗೃಹ ಸಾಲಗಳು ಮತ್ತು ಮ್ಯೂಚುಯಲ್ ಫಂಡ್‌ಗಳಂತಹ ಇತರ ಆಯ್ಕೆಗಳ ಹುಡುಕಾಟ ನಡೆಸಿದ್ದರೆ, ಇದು ಗರಿಷ್ಠ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ. 

ತೆರಿಗೆ ಉಳಿತಾಯ ಯೋಜನೆ  :
ಅನೇಕ ಬ್ಯಾಂಕುಗಳು ಟ್ಯಾಕ್ಸ್ ಸೇವಿಂಗ್ ಎಫ್ ಡಿ ಗಳ ಮೇಲೆ 6.50 ಪ್ರತಿಶತದಿಂದ 7.60 ಪ್ರತಿಶತದವರೆಗೆ ಬಡ್ಡಿದರಗಳನ್ನು ನೀಡುತ್ತವೆ. ಟ್ಯಾಕ್ಸ್  ಸೇವಿಂಗ್ ಎಫ್ ಡಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿಸಬಹುದು. ಹಳೆಯ ತೆರಿಗೆ ಪದ್ಧತಿಯನ್ನು ಆರಿಸಿಕೊಂಡವರು ಮಾತ್ರ ಈ ಮೂಲಕ ತೆರಿಗೆ ವಿನಾಯಿತಿ ಲಾಭ ಪಡೆಯಬಹುದು. ಹೊಸ ತೆರಿಗೆ ಪದ್ಧತಿಯಲ್ಲಿ, FD ಮೂಲಕ ತೆರಿಗೆ ಉಳಿತಾಯದ ಆಯ್ಕೆ ಲಭ್ಯವಿಲ್ಲ.
 
ಇದನ್ನೂ ಓದಿ :  LIC ಈ ಯೋಜನೆಯಲ್ಲಿ ₹166 ಹೂಡಿಕೆ ಮಾಡಿ, 50 ಲಕ್ಷ ಲಾಭ ಪಡೆಯಿರಿ!

ಟ್ಯಾಕ್ಸ್  ಸೇವಿಂಗ್ ಎಫ್ ಡಿ : 
ಒಬ್ಬ ವ್ಯಕ್ತಿ ಮತ್ತು ಹಿಂದೂ ಅವಿಭಜಿತ ಕುಟುಂಬಗಳು (HUFs) ಟ್ಯಾಕ್ಸ್  ಸೇವಿಂಗ್ ಎಫ್ ಡಿಗಳಲ್ಲಿ ಹೂಡಿಕೆ ಮಾಡಬಹುದು ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಅಪ್ರಾಪ್ತರು ತಮ್ಮ ಪೋಷಕರ ಸಹಾಯದಿಂದ ಇದರಲ್ಲಿ ಹೂಡಿಕೆ ಮಾಡಬಹುದು. ಟ್ಯಾಕ್ಸ್  ಸೇವಿಂಗ್ ಎಫ್ ಡಿಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಮೊತ್ತವು 1.5 ಲಕ್ಷ ರೂ. ಆಗಿದೆ. ಮುಂದಿನ ಆರ್ಥಿಕ ವರ್ಷ ಪ್ರಾರಂಭವಾಗಲು ಸುಮಾರು 10 ದಿನಗಳು ಬಾಕಿ ಉಳಿದಿವೆ.  ಈ ಹಿನ್ನೆಲೆಯಲ್ಲಿ ಈ ಹಣಕಾಸು ವರ್ಷದಲ್ಲಿ ಟ್ಯಾಕ್ಸ್  ಸೇವಿಂಗ್ ಎಫ್ ಡಿ  ಮೂಲಕ, ಆದಾಯ ತೆರಿಗೆ ಪಾವತಿಸುವಾಗ ಅದರ ಲಾಭವನ್ನು ಪಡೆಯಬಹುದು. ಟ್ಯಾಕ್ಸ್  ಸೇವಿಂಗ್ ಎಫ್ ಡಿಯ ಮುಕ್ತಾಯದ ಅವಧಿಯು ಐದು ವರ್ಷಗಳಾಗಿರುತ್ತದೆ. 

ಇದನ್ನೂ ಓದಿ : EPFO : ಪಿಎಫ್'ನಲ್ಲಿ ಹೀಗೆ ಹೂಡಿಕೆ ಮಾಡಿ, 1 ಕೋಟಿ ರೂ. ಲಾಭ ಗಳಿಸಿ!

ಆದಾಯ ತೆರಿಗೆ ರಿಟರ್ನ್ : 
2023 ರ ಹಣಕಾಸು ವರ್ಷದ ಅಂತ್ಯದೊಳಗೆ ತೆರಿಗೆ ಉಳಿಸುವ ಆಯ್ಕೆಯನ್ನು ಹುಡುಕುತ್ತಿದ್ದರೆ, ಟ್ಯಾಕ್ಸ್  ಸೇವಿಂಗ್ ಎಫ್ ಡಿ  ಉತ್ತಮ ಆಯ್ಕೆಯಾಗಿದೆ. ಅನೇಕ ಬ್ಯಾಂಕುಗಳು ಆಕರ್ಷಕ ಬಡ್ಡಿದರಗಳೊಂದಿಗೆ ಈ ಆಯ್ಕೆಯನ್ನು ನೀಡುತ್ತವೆ. ಇದು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News