ಟೊಮೇಟೊ ಬೆಲೆ ಮುಗಿಲು ಮುಟ್ಟಲು ಇದೇ ಕಾರಣ! ಮತ್ತೆ ದರ ಇಳಿಕೆ ಯಾವಾಗ ?

Tomato Price Today : ಟೊಮೇಟೊ ದರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಟೊಮೇಟೊ ಬೆಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿರುವುದು ಸಹಜ. ಟೊಮೇಟೊ ಬೆಲೆಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಿಗೆ ಉತ್ತರ  ಏನು ನೋಡೋಣ. 

Written by - Ranjitha R K | Last Updated : Jul 3, 2023, 08:52 AM IST
  • ಟೊಮೇಟೊ ದರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ.
  • ಟೊಮೇಟೊ ಜೇಬಿಗೆ ಭಾರಿ ಹೊಡೆತ ನೀಡುತ್ತಿದೆ.
  • ಕೆಲವು ಕಡೆ ಟೊಮೇಟೊ ದರ 110-160 ರೂಪಾಯಿಗೆ ಏರಿದೆ.
ಟೊಮೇಟೊ ಬೆಲೆ ಮುಗಿಲು ಮುಟ್ಟಲು ಇದೇ ಕಾರಣ! ಮತ್ತೆ ದರ ಇಳಿಕೆ  ಯಾವಾಗ ?  title=

When Will Tomato Prices Go Down : ಟೊಮೇಟೊ ದರ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿದೆ. ಟೊಮೇಟೊ ಇಲ್ಲದೆ ಅಡುಗೆ ಊಹಿಸುವುದು ಕಷ್ಟ. ಅಡುಗೆಯ ರುಚಿ ಹೆಚ್ಚಬೇಕಾದರೆ ಟೊಮೇಟೊ ಬಳಸಬೇಕು. ಆದರೆ ಸದ್ಯದ ಮಟ್ಟಿಗೆ ಟೊಮೇಟೊ ಜೇಬಿಗೆ ಭಾರಿ ಹೊಡೆತ ನೀಡುತ್ತಿದೆ. ಈ ಹಿಂದೆ ಕೆಜಿಗೆ 20-30 ರೂಪಾಯಿ ಇದ್ದ ಟೊಮೇಟೊ ಬೆಲೆ ಕಳೆದ ಕೆಲವು ವಾರಗಳಲ್ಲಿ ಕೆಲವು ಕಡೆ 110-160 ರೂಪಾಯಿಗೆ ಏರಿದೆ.  ಹೀಗೆ ಟೊಮೇಟೊ ಬೆಲೆ ಏರಿಕೆಯಾಗುತ್ತಲೇ ಹೋದರೆ ಜನ ಸಾಮಾನ್ಯರ ಅಡುಗೆ ಮನೆಯಿಂದ ಟೊಮೆಟೊ ಮಾಯವಾಗುವ ದಿನ ದೂರವಿಲ್ಲ. ಗಗನಕ್ಕೇರಿರುವ ಟೊಮೇಟೊ ಬೆಲೆ  ಇಳಿಕೆ ಯಾವಾಗ  ಎನ್ನುವ ಪ್ರಶ್ನೆ ಜನ ಸಾಮಾನ್ಯರನ್ನು ಕಾಡುತ್ತಿದೆ. ಹಾಗಿದ್ದರೆ ಟೊಮೇಟೊ ಬೆಲೆಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳಿಗೆ ಉತ್ತರ  ಏನು ನೋಡೋಣ. 

ಟೊಮೆಟೊ ಚಿಲ್ಲರೆ ಬೆಲೆ ಜೂನ್‌ನಲ್ಲಿ ಸುಮಾರು 38.5 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿ ಟೊಮೇಟೊ ಸಗಟು ಬೆಲೆ ಕೇಳಿದರೆ ಮತ್ತಷ್ಟು ಆತಂಕಕಾರಿಯಾಗಿದೆ. ಟೊಮೇಟೊ ಸಗಟು ದರದಲ್ಲಿ ಶೇ.45.3ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ Google ನಲ್ಲಿ ಸರ್ಚ್ ನಲ್ಲಿ ಏಕೆ ಟ್ರೆಂಡ್ ಆಗುತ್ತಿದೆ ವಸುಂಧರ ಒಸ್ವಾಲ್ ಹೆಸರು? ಇಲ್ಲಿದೆ ಕಾರಣ

ಟೊಮೇಟೊ ಬೆಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿರುವುದು ಸಹಜ. ಟೊಮೇಟೊ ಉತ್ಪಾದನೆ ಕಡಿಮೆಯಾಗಿರುವುದೇ ಇದಕ್ಕೆ ಕಾರಣ ಎಂದು ಎಲ್ಲಾ ಲ ವರದಿಗಳಲ್ಲಿ ಹೇಳಲಾಗಿದೆ. ಅಂಕಿಅಂಶಗಳ ಪ್ರಕಾರ, 2021-22ರಲ್ಲಿ ಟೊಮೆಟೊ ಉತ್ಪಾದನೆಯು 20,694 ('000   ಮೆಟ್ರಿಕ್ ಟನ್ ) ಆಗಿತ್ತು. ಇದು 2022-23 ರಲ್ಲಿ 20,621 ('000 ಮೆಟ್ರಿಕ್ ಟನ್) ಅಂದರೆ 0.4 ಶೇಕಡಾದಷ್ಟು  ಕಡಿಮೆಯಾಗಿದೆ.

ರಾಜ್ಯಗಳ ಅಂಕಿಅಂಶಗಳನ್ನು ಗಮನಿಸಿದರೆ, ಮಧ್ಯಪ್ರದೇಶ, ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್ ಮತ್ತು ಒಡಿಶಾದಲ್ಲಿ 51.5 ಪ್ರತಿಶತ  ಟೊಮೇಟೊ ಉತ್ಪಾದನೆಯಾಗುತ್ತದೆ. ಆದರೆ ಈ ಬಾರಿ ಗುಜರಾತ್‌ನಂತಹ ರಾಜ್ಯಗಳಲ್ಲಿ ಉತ್ಪಾದನೆ ಶೇ.23.9ರಷ್ಟು ಕುಸಿದಿದ್ದು, ತಮಿಳುನಾಡು ಮತ್ತು ಛತ್ತೀಸ್‌ಗಢದಲ್ಲಿ ಉತ್ಪಾದನೆ ಶೇ.20ರಷ್ಟು ಕುಸಿದಿದೆ ಎಂದು ವರದಿ ಹೇಳಿದೆ. ಇದೇ ಕಾರಣಕ್ಕೆ ಟೊಮೇಟೊ ಬೆಲೆ ದಿಢೀರ್ ಏರಿಕೆಯಾಗಿದೆ.

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರ ವೇತನದಲ್ಲಿ ಬಂಪರ್ ಹೆಚ್ಚಳ ಬಹುತೇಕ ಫಿಕ್ಸ್!ಜುಲೈ-

ನವೆಂಬರ್ ಬೆಳೆ ಹಂಗಾಮಿನ ಆಗಮನವಾಗಿದ್ದು, ಟೊಮೇಟೊ ಬೆಲೆ ಕಡಿಮೆಯಾಗಬಹುದು ಎನ್ನುವ ನಿರೀಕ್ಷೆಯಿದೆ. ರಬಿ ಟೊಮೆಟೊ ಬೆಳೆಗೆ ಕೊಯ್ಲು ಅವಧಿಯು ಡಿಸೆಂಬರ್-ಜೂನ್ ವರೆಗೆ ಇರುತ್ತದೆ. ಶಾಖದ ಅಲೆಗಳು ಅಥವಾ ಅನಿಯಮಿತ ಮಳೆಯು ಬೆಳೆಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಬೆಲೆಯಲ್ಲಿ ಹಠಾತ್ ಜಿಗಿತ  ಉಂತಾಗುವ  ಸಾಧ್ಯತೆ ಹೆಚ್ಚು. ಜುಲೈ-ನವೆಂಬರ್ ಬೆಳೆ ಹಂಗಾಮಿಗೆ ಬಂದರೆ ಟೊಮೇಟೊ ಬೆಲೆ ಇಳಿಕೆಯಾಗಲಿದೆ ಎಂದು ವರದಿ ಹೇಳಿದೆ.

ಇಲಾಖೆಯ ಅಂಕಿಅಂಶಗಳ ಪ್ರಕಾರ, ಜೂನ್ 27 ರಂದು, ಅಖಿಲ ಭಾರತ ಆಧಾರದ ಮೇಲೆ ಟೊಮೆಟೊ ಸರಾಸರಿ ಬೆಲೆ ಕೆಜಿಗೆ 46 ರೂ. ಮಾದರಿ ಬೆಲೆ ಕೆಜಿಗೆ 50 ರೂ.ಗಳಾಗಿದ್ದು, ಗರಿಷ್ಠ ಬೆಲೆ ಕೆಜಿಗೆ 122 ರೂ. ನಾಲ್ಕು ಮಹಾನಗರಗಳ ಟೊಮೆಟೊ ಚಿಲ್ಲರೆ ಬೆಲೆ  ನೋಡುವುದಾದರೆ ದೆಹಲಿಯಲ್ಲಿ ಕೆಜಿಗೆ 60 ರೂ., ಮುಂಬೈನಲ್ಲಿ  42 ರೂ., ಕೋಲ್ಕತ್ತಾದಲ್ಲಿ75 ರೂ., ಮತ್ತು ಚೆನ್ನೈನಲ್ಲಿ 67 ರೂ. ಆಗಿದೆ. 

ಇದನ್ನೂ ಓದಿ : IRCTC: ರೇಲ್ವೆ ನಿಲ್ದಾಣದಲ್ಲಿಯೇ ತಂಗಬೇಕೆ? ಕೇವಲ 100 ರೂ.ಗಳಿಗೆ ಸಿಗುತ್ತೆ ರೂಮ್, ಇಲ್ಲಿದೆ ಬುಕ್ಕಿಂಗ್ ವಿಧಾನ

 ಇನ್ನು ಬೆಂಗಳೂರಿನಲ್ಲಿ ಕೆಜಿ ಟೊಮೇಟೊ ಬೆಲೆ 52 ರೂ., ಜಮ್ಮುವಿನಲ್ಲಿ 80 ರೂ., ಲಕ್ನೋದಲ್ಲಿ ಕೆಜಿಗೆ 60 ರೂ., ಶಿಮ್ಲಾದಲ್ಲಿ ಕೆಜಿಗೆ 88 ರೂ., ಭುವನೇಶ್ವರದಲ್ಲಿ ಕೆಜಿಗೆ 100 ರೂ. ಮತ್ತು ರಾಯ್ಪುರದಲ್ಲಿ 99 ರೂ. ಆಗಿದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News