RBI Penalty On SBI: SBIಗೆ ಭಾರಿ ದಂಡ ವಿಧಿಸಿದ RBI, ಗ್ರಾಹಕರ ಮೇಲೆ ಏನು ಪರಿಣಾಮ?

RBI Penalty On SBI: ನಿಬಂಧನೆಗಳ ಅನುಸರಣೆಯ ಕೊರತೆ  (Lack of Regulatory Compliance) ಹಿನ್ನೆಲೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ RBI 1 ಕೋಟಿ ರೂಪಾಯಿ ದಂಡ ವಿಧಿಸಿದೆ. ನವೆಂಬರ್ 16, 2021 ರಂದು ಹೊರಡಿಸಲಾದ ಆದೇಶದಲ್ಲಿ ಈ ದಂಡವನ್ನು ವಿಧಿಸಲಾಗಿದೆ ಎಂದು RBI ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

Written by - Nitin Tabib | Last Updated : Nov 26, 2021, 10:39 PM IST
  • ಭಾರತೀಯ ಸ್ಟೇಟ್ ಬ್ಯಾಂಕ್ ಮೇಲೆ 1 ಕೋಟಿ ರೂ. ದಂಡ ವಿಧಿಸಿದ RBI
  • ನಿಯಮಗಳ ಅನುಸರನೆಯಲ್ಲಿನ ಕೊರತೆಯ ಹಿನ್ನೆಲೆ ಈ ನಿರ್ಧಾರ.
  • ಒಂದು ನಿಬಂಧನೆಯನ್ನು ಉಲ್ಲಂಘಿಸಿದ SBI
RBI Penalty On SBI: SBIಗೆ ಭಾರಿ ದಂಡ ವಿಧಿಸಿದ RBI, ಗ್ರಾಹಕರ ಮೇಲೆ ಏನು ಪರಿಣಾಮ? title=
RBI Penalty On SBI (File Photo)

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಭಾರತೀಯ ಸ್ಟೇಟ್ ಬ್ಯಾಂಕ್ ಗೆ  (SBI) ನಿಬಂಧನೆಯ ಅನುಸರಣೆಯ ಕೊರತೆಯ ಹಿನ್ನೆಲೆ 1 ಕೋಟಿ ರೂಪಾಯಿ ದಂಡ ವಿಧಿಸಿದೆ. ನವೆಂಬರ್ 16, 2021 ರಂದು ಹೊರಡಿಸಲಾದ ಆದೇಶದಲ್ಲಿ ಈ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಶುಕ್ರವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಕ್ರಮ ಕೈಗೊಂಡ ಆರ್‌ಬಿಐ 
ಸೆಂಟ್ರಲ್ ಬ್ಯಾಂಕ್ ಪ್ರಕಾರ, ಎಸ್‌ಬಿಐನ ಮೇಲ್ವಿಚಾರಣಾ ಮೌಲ್ಯಮಾಪನಕ್ಕಾಗಿ (ISE) ಶಾಸನಬದ್ಧ ತಪಾಸಣೆಯನ್ನು ಮಾರ್ಚ್ 31, 2018 ಮತ್ತು ಮಾರ್ಚ್ 31, 2019 ರಂದು ಅದರ ಹಣಕಾಸಿನ ಸ್ಥಿತಿಯನ್ನು ಉಲ್ಲೇಖಿಸಿ ನಡೆಸಲಾಗಿದೆ. 

ನಿಬಂಧನೆಯ ಉಲ್ಲಂಘನೆ
ಆದೇಶದ ಪ್ರಕಾರ, ಅಪಾಯದ ಮೌಲ್ಯಮಾಪನ ವರದಿಯ ಪರಿಶೀಲನೆ, ತಪಾಸಣಾ ವರದಿಯು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ (Banking Regulation Act) ಒಂದು ನಿಬಂಧನೆಯನ್ನು ಉಲ್ಲಂಘಿಸಿದ್ದು ಕಂಡುಬಂದಿದೆ. ಇದಕ್ಕಾಗಿ ಸಾಲಗಾರ ಕಂಪನಿಗಳ ವಿಷಯದಲ್ಲಿ ಕಂಪನಿಗಳ ಪಾವತಿಸಿದ ಷೇರು ಬಂಡವಾಳದ ಶೇಕಡ 30 ಕ್ಕಿಂತ ಹೆಚ್ಚು ಮೊತ್ತದ ಷೇರುಗಳನ್ನು ಎಸ್‌ಬಿಐ ಒತ್ತೆ ಇಟ್ಟಿತ್ತು.

ಇದನ್ನೂ ಓದಿ-Affordable Bikes:ಪೆಟ್ರೋಲ್ ದರ ಏರಿಕೆ ಚಿಂತೆ ಬಿಟ್ಟು ಬಿಡಿ, ಇಲ್ಲಿವೆ ಪವರ್ಪುಲ್ ಮೈಲೇಜ್ ನೀಡುವ ಅಗ್ಗದ ಬೈಕ್ ಗಳು

ಷೋಕಾಸ್  ನೋಟಿಸ್ ನೀಡಲಾಗಿದೆ
ಇದಕ್ಕಾಗಿ ಆರ್‌ಬಿಐ, ಎಸ್‌ಬಿಐಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದರಲ್ಲಿ ಸ್ಟೇಟ್ ಬ್ಯಾಂಕ್ ನಿಯಮಗಳ ನಿರ್ಲಕ್ಷ್ಯಕ್ಕೆ ಏಕೆ ದಂಡ ವಿಧಿಸಬಾರದು ಎಂದು ಕೇಳಲಾಗಿತ್ತು. ಇದಕ್ಕೆ ಬ್ಯಾಂಕ್‌ನ ಉತ್ತರವನ್ನು ಪರಿಗಣಿಸಿ ನಂತರ ದಂಡ ವಿಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ-Sensexನಲ್ಲಿ ಭಾರೀ ಕುಸಿತ.. ನಿಫ್ಟಿ 17,100 ಕ್ಕೆ ಇಳಿಕೆ

ಗ್ರಾಹಕರ ಮೇಲೆ ಪರಿಣಾಮ ಬೀರುವುದಿಲ್ಲ
ಈ ಕ್ರಮವು ನಿಯಂತ್ರಕ ಅನುಸರಣೆಯನ್ನು ಆಧರಿಸಿದೆ ಎಂದು ಆರ್‌ಬಿಐ ಹೇಳಿದೆ. ಗ್ರಾಹಕರೊಂದಿಗೆ ಬ್ಯಾಂಕ್ ಮಾಡುವ ಯಾವುದೇ ವ್ಯವಹಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ-7th Pay Commission : ಹೊಸ ವರ್ಷದಲ್ಲಿ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಗಿಫ್ಟ್, ಹೆಚ್ಚಾಗಲಿದೆ ವೇತನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News