RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ

RBI Latest Update: ಭಾರತೀಯ ರಿಸರ್ವ್ ಬ್ಯಾಂಕ್(RBI), ಭಾರತೀಯ ಬ್ಯಾಂಕ್ ಗ್ರಾಹಕರ ಹಣದ ಸುರಕ್ಷತೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯೊಂದನ್ನಿಟ್ಟಿದೆ. ಕಳೆದ ಹಲವು ದಿನಗಳಿಂದ ಕೇಂದ್ರೀಯ ಬ್ಯಾಂಕ್, ಹಲವು ಬ್ಯಾಂಕ್ ಗಳನ್ನು ನಿರ್ಬಂಧನೆಯ ಪರಧಿಗೆ ಸೇರಿಸಿದೆ.

Written by - Nitin Tabib | Last Updated : May 28, 2021, 09:27 PM IST
  • ಬ್ಯಾಂಕ್ ನಲ್ಲಿ ನೀವು ಇಟ್ಟಿರುವ ಹಣಕ್ಕೆ ಮತ್ತಷ್ಟು ಸುರಕ್ಷತೆ ಒದಗಿಸಲಿದೆ RBI.
  • ಶೀಘ್ರದಲ್ಲಿ RBI ಜಾರಿಗೆ ತರುತ್ತಿದೆ ICMTS ಸಿಸ್ಟಂ.
  • ಏನಿದು Integrated Compliance Management and Tracking System?
RBI News - ಬ್ಯಾಂಕ್ ಗ್ರಾಹಕರಿಗೊಂದು ನೆಮ್ಮದಿಯ ಸುದ್ದಿ, ಶೀಘ್ರವೇ ನಿಮ್ಮ ಹಣದ ಸುರಕ್ಷತೆಗೆ ಜಾರಿಯಾಗಲಿದೆ ಈ ಸಿಸ್ಟಂ  title=
RBI Latest Update (File Photo)

RBI Latest Update -  ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India), ಭಾರತೀಯ ಬ್ಯಾಂಕ್ ಗ್ರಾಹಕರ ಹಣದ ಸುರಕ್ಷತೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯೊಂದನ್ನಿಟ್ಟಿದೆ. ಕಳೆದ ಹಲವು ದಿನಗಳಿಂದ ಕೇಂದ್ರೀಯ ಬ್ಯಾಂಕ್, ಹಲವು ಬ್ಯಾಂಕ್ ಗಳನ್ನು ನಿರ್ಬಂಧನೆಯ ಪರಧಿಗೆ ಸೇರಿಸಿದೆ. ಇದರಿಂದ ಆ ಬ್ಯಾಂಕ್ ಗ್ರಾಹಕರಿಗೂ ಕೂಡ ತೊಂದರೆ ಎದುರಾಗುತ್ತಿದೆ. ಇದರಿಂದ ಬ್ಯಾಂಕು ಗಳು ದಿವಾಳಿಯಾಗುತ್ತಿದ್ದು, ಆ ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದವರ ಹಣ ಕೂಡ ಮುಳುಗಿ ಹೋಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ RBI ಕೂಡ ಕಠಿಣ ಕ್ರಮ ಕೈಗೊಂಡು ಬ್ಯಾಂಕ್ ನಿಂದ ಡಿಪಾಸಿಟ್ ಹಿಂಪಡೆಯಲು ಒಂದು ಮಿತಿಯನ್ನು ನಿರ್ಧರಿಸುತ್ತದೆ. ಮಹಾರಾಷ್ಟ್ರದ PMC ಬ್ಯಾಂಕ್ ವಿಷಯದಲ್ಲಿಯೂ ಕೂಡ ಇದೆ ರೀತಿ ಸಂಭವಿಸಿರುವುದು ನಿಮಗೆ ನೆನಪಿರಬಹುದು. 

ಆದರೆ, ಈ ನಿಟ್ಟಿನಲ್ಲಿ ಇದೀಗ RBI ಮಹತ್ವದ ಹೆಜ್ಜೆಯೊಂದನ್ನಿಟ್ಟಿದೆ. ಬ್ಯಾಂಕುಗಳು ದಿವಾಳಿಯಾಗಬಾರದು ಮತ್ತು ಅವುಗಳ ಆರ್ಥಿಕ ಆರೋಗ್ಯದ ಕುರಿತು RBIಗೆ ಕಾಲಕಾಲಕ್ಕೆ ಮಾಹಿತಿ ಸಿಗಬೇಕು ಎಂಬುದನ್ನು ಸುನಿಶ್ಚಿತಗೊಳಿಸಲು RBI ಹೊಸ ಮಾದರಿಯೊಂದನ್ನು ಸಿದ್ಧಪಡಿಸಿದೆ. ಇದಕ್ಕಾಗಿ RBI, ICMTS-Integrated Compliance Management and Tracking System ಅನ್ನು ಜಾರಿಗೊಳಿಸಲು ಮುಂದಾಗಿದೆ. ಎನಿದು ICMTS? ಮತ್ತು ಇದು ಗ್ರಾಹಕರ ಪಾಲಿಗೆ ಹೇಗೆ ಲಾಭಕಾರಿಯಾಗಿದೆ ತಿಳಿದುಕೊಳ್ಳೋಣ ಬನ್ನಿ.

ಏನಿದು ICMTS ಸಿಸ್ಟಮ್ ?
ಈ ಕುರಿತು ಮಾತನಾಡುವ ತಜ್ಞರು RBI, ICMTS-Integrated Compliance Management and Tracking System ಮೂಲಕಬ್ಯಾಂಕುಗಳ ಮೇಲೆ ಉತ್ತಮ ರೀತಿಯಲ್ಲಿ ನಿಗಾ ಇಡಬಹುದು. ಈ ಸಿಸ್ಟಂನಲ್ಲಿ  ಎಲ್ಲಾ ಬ್ಯಾಂಕುಗಳು ಪರಸ್ಪರ ಲಿಂಕ್ ಆಗಲಿದ್ದು, ಪರಸ್ಪರ ದತ್ತಾಂಶಗಳ ವಿನಿಮಯ ಮಾಡಿಕೊಳ್ಳಲಿವೆ. ಇಂತಹುದರಲ್ಲಿ ಯಾವುದೇ ಒಂದು ಬ್ಯಾಂಕಿನ ಆರ್ಥಿಕ ಸ್ಥಿತಿ ಸರಿಯಾಗಿಲ್ಲ ಎಂದಾದಲ್ಲಿ RBI ಬಳಿ ಮುಂಚಿತವಾಗಿಯೇ ಇದರ ಮಾಹಿತಿ ಇರಲಿದೆ. RBI ವಾರ್ಷಿಕ ವರದಿಯ ಪ್ರಕಾರ, ಇದೊಂದು ವೆಬ್ ಇಂಟರ್ ಫೇಸ್ ಆಗಿರಲಿದೆ. ಎಲ್ಲ ಬ್ಯಾಂಕುಗಳು ಹಾಗೂ NBFC (NBFC-Non Banking Financial Companies)ಗಳು ಈ ಮೂಲಕ ಲಿಂಕ್ ಆಗಲಿವೆ.

ಸೈಬರ್ ಘಟನೆಗಳ ಆನ್ಲೈನ್ ವರದಿಗಾರಿಕೆಯಾಗಲಿದೆ
RBIನ ಈ ನೂತನ ಸಿಸ್ಟಂನಿಂದ ಸೈಬರ್ ಘಟನೆಗಳ (Cyber Fraud)ಮಾನಿಟರಿಂಗ್ ಕೂಡ ನಡೆಯಲಿದೆ. ಈ ಎಲ್ಲ ಘಟನೆಗಳ ಆನ್ಲೈನ್ ವರದಿಗಾರಿಕೆ ನಡೆಯಲಿದೆ. ಇಂತಹ ಘಟನೆಗಳ ಸಂಪೂರ್ಣ ಮಾಹಿತಿ RBIಗೆ ರಿಯಲ್ ಟೈಮ್ ನಲ್ಲಿ ಸಿಗಲಿದೆ. ಈ ಸಿಸ್ಟಂ ಮೂಲಕ ಆನ್ಲೈನ್ ವಂಚನೆಗಳನ್ನು ತಡೆಯಲು ಕೂಡ ಸಾಧ್ಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದ ಜನರ ಹಣ ಕೂಡ ಸುರಕ್ಷಿತವಾಗಿರಲಿದೆ. ಇದಲ್ಲದೆ ಸಾಲ ಮರುಪಾವತಿ ಮಾಡದೆ ಇರುವವರ ಮೇಲೂ ಕೂಡ ಇದರಿಂದ ತಕ್ಷಣ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ. ಯಾವುದೇ ಓರ್ವ ವ್ಯಕ್ತಿ ಬ್ಯಾಂಕ್ ಜೊತೆಗೆ ಡಿಫಾಲ್ಟ್ ಮಾಡಿದರೆ, ಅವರ ಡೇಟಾ ಇತರ ಬ್ಯಾಂಕ್ ಗಳ ಬಳಿಯೂ ಕೂಡ ಇರಲಿದೆ. ಹೀಗಾಗಿ ಲೋನ್ ಟ್ರಾಕಿಂಗ್ ಸುಲಭವಾಗಲಿದೆ.

ಇದನ್ನೂ ಓದಿ- Bank Locker ಕುರಿತಾದ ಈ ಸಂಗತಿ ನಿಮಗೆ ತಿಳಿದಿದೆಯೇ?

RBI ಸುಲಭವಾಗಿ ಕ್ರಮ ಕೈಗೊಳ್ಳಬಹುದು
ICMTS ಕೇವಲ ಬ್ಯಾಂಕುಗಳ ದತ್ತಾಂಶ ಹಂಚಿಕೊಳ್ಳುವ ಪ್ಲಾಟ್ ಫಾರ್ಮ್ ಆಗಿಲ್ಲ. ಇದರಿಂದ ಬೇರೆ ಕ್ಷೇತ್ರಗಳ ಆರ್ಥಿಕ ಸ್ಥಿತಿಗತಿ ಕೂಡ ತಿಳಿಯಲಿದೆ. ಯಾವ ಕ್ಷೇತ್ರಗಳಿಗೆ ಆರ್ಥಿಕ ರೂಪದಲ್ಲಿ ಬಲ ನೀಡುವ ಅವಶ್ಯಕತೆ ಇದೆ ಎಂಬುದೂ ಕೂಡ RBIಗೆ ಇದರಿಂದ ಮಾಹಿತಿ ಸಿಗಲಿದೆ. ಅಂತಹ ಸೆಕ್ಟರ್ ಗಳಿಗೆ ಬೇಗನೆ ಬಲ ತುಂಬಿ ಅವುಗಳನ್ನು ಆರ್ಥಿಕವಾಗಿ ಬಲಪಡಿಸುವ ನಿಟ್ಟಿನಲ್ಲಿ RBIಗೆ ಇದರಿಂದ ಸಹಕಾರ ಸಿಗಲಿದೆ. ಇದರಿಂದ ಆ ಕಂಪನಿ, ಬ್ಯಾಂಕ್ ಅಥವಾ ಕ್ಷೇತ್ರಕ್ಕೂ ಕೂಡ ಲಾಭ ಸಿಗಲಿದೆ.

ಇದನ್ನೂ ಓದಿ-'NEFT' ಬಂದ್! Online ನಲ್ಲಿ ಹಣವನ್ನು ಹೇಗೆ ಕಳುಹಿಸಬಹುದು? ಹೇಗೆ ಇಲ್ಲಿದೆ ನೋಡಿ

ಬ್ಯಾಂಕ್ ಗಳು ಮುಳುಗಿ ಹೋದ ಸಂದರ್ಭಗಳಲ್ಲಿ ನಿಮ್ಮ ಹಣಕ್ಕೆ ಎಷ್ಟು ಸುರಕ್ಷತೆ ಸಿಗುತ್ತದೆ?
DICGC ಆಕ್ಟ್ 1961ರ ಸೆಕ್ಷನ್ 16(1)ರ ಅಡಿ, ಒಂದು ವೇಳೆ ಯಾವುದೇ ಒಂದು ಬ್ಯಾಂಕ್ ಮುಳುಗಿದರೆ ಅಥವಾ ದಿವಾಳಿಯಾದರೆ, ಗ್ರಾಹಕರಿಗೆ ಅವರ ಡಿಪಾಸಿಟ್ ಮೇಲೆ ಗರಿಷ್ಟ 5 ಲಕ್ಷ ರೂ.ಗಳ ವರೆಗೆ ಪರಿಹಾರ ಸಿಗುತ್ತದೆ. ಆದರೆ, ನೀವು ಎಷ್ಟು ಬ್ಯಾಂಕ್ ಗಳಲ್ಲಿ ಖಾತೆ ಹೊಂದಿರುವಿರಿ ಎಂಬುದರ ಮೇಲೆ ಇದು ಆಧರಿಸಿದೆ. ಬೇರೆ ಬ್ಯಾಂಕ್ ಗಳಲ್ಲಿ ನೀವು ಇಟ್ಟಿರುವ ಹಣ ಮತ್ತು ದಿವಾಳಿಯಾಗುತ್ತಿರುವ ಬ್ಯಾಂಕ್ ನಲ್ಲಿ ನೀವಿಟ್ಟಿರುವ ಹಣವನ್ನು ಜೋಡಿಸಿ ಈ ಮಿತಿ 5 ಲಕ್ಷ ರೂ.ಗಳವರೆಗೆ ಇರಲಿದೆ. ಒಂದು ವೇಳೆ ನೀವು ಐದು ಲಕ್ಷಕ್ಕಿಂತ ಹೆಚ್ಚಿನ ಹಣ ಬ್ಯಾಂಕ್ ನಲ್ಲಿ ಇಟ್ಟಿದ್ದರೆ, ನಿಮ್ಮ ಕೇವಲ 5 ಲಕ್ಷ ರೂ.ಹಣ ಮಾತ್ರ ಸುರಕ್ಷಿತ ಎಂದು ಭಾವಿಸಲಾಗುವುದು.

ಇದನ್ನೂ ಓದಿ-Bank Alert: ಕೆಲವೇ ಗಂಟೆಗಳಲ್ಲಿ ನಿಂತುಹೋಗಲಿದೆ ಬ್ಯಾಂಕುಗಳ ಈ ಸೇವೆ, ಬೇಗ ನಿಮ್ಮ ಕೆಲ್ಸಾ ಮುಗಿಸಿಕೊಳ್ಳಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News