Digital Rupee: ಡಿಸೆಂಬರ್ 1 ಕ್ಕೆ ಡಿಜಿಟಲ್ ರೂಪಾಯಿ e₹-R ಬಿಡುಗಡೆ! RBI ನಿಂದ ಮಹತ್ವದ ಘೋಷಣೆ

RBI Governor: ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿಲ್ಲರೆ ಮಟ್ಟದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿದೆ.  ಈ ಕುರಿತಾದ ಇತ್ತೀಚಿನ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Nov 29, 2022, 09:57 PM IST
  • ಡಿಜಿಟಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿರಲಿದೆ,
  • ಅದು ಕಾನೂನುಬದ್ಧವಾಗಿ ಇರಲಿದ್ದು,
  • ಪ್ರಸ್ತುತ ಇರುವ ಕಾಗದದ ಕರೆನ್ಸಿ ಮತ್ತು ನಾಣ್ಯಗಳನ್ನು ವಿತರಿಸುವ ಅದೇ ಮುಖಬೆಲೆಯ ಮೌಲ್ಯವನ್ನು ಡಿಜಿಟಲ್ ರೂಪಾಯಿ ಹೊಂದಿರಲಿದೆ.
Digital Rupee: ಡಿಸೆಂಬರ್ 1 ಕ್ಕೆ ಡಿಜಿಟಲ್ ರೂಪಾಯಿ e₹-R ಬಿಡುಗಡೆ! RBI ನಿಂದ ಮಹತ್ವದ ಘೋಷಣೆ title=
Digital Rupee Launch

Digital Rupee: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಶ್ರೀಸಾಮಾನ್ಯರಿಗಾಗಿ ಒಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಇನ್ನು ಕೇವಲ ಎರಡೇ ದಿನಗಳ ಬಳಿಕ  ಸಾಮಾನ್ಯ ಗ್ರಾಹಕರಿಗೆ ಇ-ರೂಪಾಯಿಯಲ್ಲಿ ವಹಿವಾಟು ಸೌಲಭ್ಯವನ್ನು ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಅಂದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿಲ್ಲರೆ ಮಟ್ಟದಲ್ಲಿ ಡಿಜಿಟಲ್ ರೂಪಾಯಿಯ ಪ್ರಾಯೋಗಿಕ ಯೋಜನೆ ಪ್ರಾರಂಭಿಸುವುದಾಗಿ ಘೋಷಿಸಿದೆ. ಡಿಸೆಂಬರ್ 1 ರಿಂದ ರಿಟೇಲ್ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (ಸಿಬಿಡಿಸಿ) ಗಾಗಿ ಪ್ರಾಯೋಗಿಕ ಯೋಜನೆ ಜಾರಿಗೆ ತರಲಿದೆ ಎಂದು ಹೇಳಿದೆ.

ಆರ್‌ಬಿಐ ನೀಡಿದ ಮಾಹಿತಿ ಏನು?
RBI ನೀಡಿದ ಮಾಹಿತಿಯ ಪ್ರಕಾರ, ಡಿಸೆಂಬರ್ 1 ರಂದು, ಚಿಲ್ಲರೆ ವ್ಯಾಪಾರಕ್ಕಾಗಿ  ಡಿಜಿಟಲ್ ರೂಪಾಯಿಗೆ (e₹-R) ಮೊದಲ ಬ್ಯಾಚ್ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಡಿಜಿಟಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿರಲಿದೆ, ಅದು ಕಾನೂನುಬದ್ಧವಾಗಿ ಇರಲಿದ್ದು, ಪ್ರಸ್ತುತ ಇರುವ ಕಾಗದದ ಕರೆನ್ಸಿ ಮತ್ತು ನಾಣ್ಯಗಳನ್ನು ವಿತರಿಸುವ ಅದೇ ಮುಖಬೆಲೆಯ ಮೌಲ್ಯವನ್ನು ಡಿಜಿಟಲ್ ರೂಪಾಯಿ ಹೊಂದಿರಲಿದೆ. ಡಿಸೆಂಬರ್ 1 ರಂದು ಕ್ಲೋಸ್ಡ್ ಯೂಸರ್ ಗ್ರೂಪ್ (ಸಿಯುಜಿ) ನಲ್ಲಿ ಆಯ್ದ ಸ್ಥಳಗಳಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ. ಇದು ಗ್ರಾಹಕ ಮತ್ತು ಬ್ಯಾಂಕ್ ವ್ಯಾಪಾರಿ ಇಬ್ಬರನ್ನೂ ಒಳಗೊಂಡಿರುತ್ತದೆ. ಪ್ರಸ್ತುತ 4 ಬ್ಯಾಂಕ್‌ಗಳನ್ನು ಇದರಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ-Ration Card: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ, ಪಡಿತರ ಚೀಟಿ ಹೊಂದಿದವರಿಗೆ ಭಾರಿ ನೆಮ್ಮದಿ

ವಹಿವಾಟು ಹೇಗೆ ನಡೆಯಲಿದೆ
ವ್ಯಾಪಾರಿ ಸಂಸ್ಥೆಗಳಲ್ಲಿ ಕ್ಯೂಆರ್ ಕೋಡ್ ಬಳಸಿ ವ್ಯಾಪಾರಿಗಳಿಗೆ ಅದನ್ನು ನೀವು ಪಾವತಿಸಬಹುದು ಎಂದು ಆರ್‌ಬಿಐ ಹೇಳಿದೆ. ಪಾಲುದಾರ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಬಳಕೆದಾರರು ಇ-ಆರ್ (e₹-R) ನೊಂದಿಗೆ ವಹಿವಾಟು ನಡೆಸಲು ಸಾಧ್ಯವಾಗಲಿದೆ ಮತ್ತು ಮೊಬೈಲ್ ಫೋನ್‌ನಲ್ಲಿ ಇದನ್ನು ಸಂಗ್ರಹಿಸಬಹುದಾಗಿದೆ. ವ್ಯಕ್ತಿಯಿಂದ ವ್ಯಕ್ತಿಗೆ (P2P) ಮತ್ತು ವ್ಯಕ್ತಿಯಿಂದ ವ್ಯಾಪಾರಿಗೆ (P2M) ವಹಿವಾಟುಗಳು ಎರಡೂ ಇದು ಒಳಗೊಂಡಿರಲಿದೆ.

ಇದನ್ನೂ ಓದಿ-7th Pay Commission: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಭಾರಿ ಗುಡ್ ನ್ಯೂಸ್

ಈ ನಾಲ್ಕು ಬ್ಯಾಂಕ್‌ಗಳು ಶಾಮೀಲಾಗಿವೆ
ಈ ಪರೀಕ್ಷೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್ ಸೇರಿದಂತೆ ನಾಲ್ಕು ಬ್ಯಾಂಕ್‌ಗಳನ್ನು ಶಾಮೀಲುಗೊಳಿಸಲಾಗಿದೆ, ಇದನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಭುವನೇಶ್ವರಗಳಲ್ಲಿ ಇದರ ಪರೀಕ್ಷೆಗಳು ನಡೆಯಲಿವೆ. ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್‌ಗಳ ಮೂಲಕ ವಿತರಿಸಲಾಗುವುದು ಮತ್ತು ಪೈಲಟ್ ಪರೀಕ್ಷೆಯಲ್ಲಿ ಭಾಗವಹಿಸುವ ಬ್ಯಾಂಕ್‌ಗಳು ನೀಡುವ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಬಳಕೆದಾರರು ಇ-ರೂಪಾಯಿಯಲ್ಲಿ ವಹಿವಾಟು ನಡೆಸಲು ಸಾಧ್ಯವಾಗಲಿದೆ. ಅಂದರೆ, ಈ ಬ್ಯಾಂಕ್ ಗಳ ಗ್ರಾಹಕರಿಗೆ ಇದರ ಲಾಭ ಸಿಗಲಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News