Ration Card: ರೇಶನ್ ಕಾರ್ಡ್ ಧಾರಕರಿಗೆ ಬಿಗ್ ಶಾಕ್! ಸರ್ಕಾರದಿಂದ ಬೆಚ್ಚಿಬೀಳಿಸುವ ನಿರ್ಧಾರ

Ration Card Update - ಉತ್ತರ ಪ್ರದೇಶ, ಬಿಹಾರ ಹಾಗೂ ಕೇರಳ ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ರೇಶನ್ ಕಾರ್ಡ್ ಧಾರಕರಿಗೆ 5 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ. ಮೊದಲು ಇದರ ಅಡಿ 3 ಕೆ.ಜಿ ಗೋಧಿ ಹಾಗೂ 2 ಕೆ.ಜಿ ಅಕ್ಕಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.  

Written by - Nitin Tabib | Last Updated : Jun 30, 2022, 02:06 PM IST
  • ಉತ್ತರ ಪ್ರದೇಶ, ಬಿಹಾರ ಹಾಗೂ ಕೇರಳ ರಾಜ್ಯಗಳಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ರೇಶನ್ ಕಾರ್ಡ್ ಧಾರಕರಿಗೆ 5 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ.
  • ಮೊದಲು ಇದರ ಅಡಿ 3 ಕೆ.ಜಿ ಗೋಧಿ ಹಾಗೂ 2 ಕೆ.ಜಿ ಅಕ್ಕಿ ನೀಡುವ ವ್ಯವಸ್ಥೆ ಮಾಡಲಾಗಿತ್ತು.
Ration Card: ರೇಶನ್ ಕಾರ್ಡ್ ಧಾರಕರಿಗೆ ಬಿಗ್ ಶಾಕ್! ಸರ್ಕಾರದಿಂದ ಬೆಚ್ಚಿಬೀಳಿಸುವ ನಿರ್ಧಾರ title=
Ration Card Update

Ration Card: ಒಂದು ವೇಳೆ ನಿಮ್ಮ ಬಳಿಯೂ ಕೂಡ ರೇಶನ್ ಕಾರ್ಡ್ ಇದ್ದು, ನೀವೂ ಕೂಡ ಸರ್ಕಾರದ ಉಚಿತ ರೇಶನ್ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ನಿಮಗೆ ದುಬಾರಿ ಸಾಬೀತಾಗಲಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿ ರೇಶನ್ ಕಾರ್ಡ್ ಧಾರಕರಿಗೆ ಉಚಿತ ರೇಶನ್ ವಿತರಿಸಲಾಗುತ್ತಿತ್ತು. 

ಪ್ರತಿ ಫಲಾನುಭವಿಗಳಿಗೆ 5 ಕೆ.ಜಿ ಅಕ್ಕಿ ವಿತರಿಸಲಾಗುತ್ತಿದೆ
ಈ ಮೊದಲು ಈ ಯೋಜನೆಯ ಅಡಿ ಪ್ರತಿ ಫಲಾನುಭವಿಗಳಿಗೆ 3 ಕೆ.ಜಿ ಗೋಧಿ ಹಾಗೂ 2 ಕೆ.ಜಿ ಅಕ್ಕಿಯನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಜೂನ್ ನಿಂದ 3 ಕೆ.ಜಿ ಗೋಧಿ ಹಾಗೂ 2 ಕೆ.ಜಿ ಅಕ್ಕಿಯ ಬದಲು 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.ಉತ್ತರ ಪ್ರದೇಶದಲ್ಲಿ ಇಂದು ರೇಶನ್ ವಿತರಣೆಯ ಕೊನೆಯ ದಿನವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಮೇ ತಿಂಗಳಿನಿಂದಲೇ ರಾಜ್ಯದ ಆಹಾರ ಪೂರೈಕೆ ಇಲಾಖೆ ಆದೇಶವನ್ನು ಹೊರಡಿಸಿದೆ. 

ಇದನ್ನೂ ಓದಿ-GST Council Meeting: ಬಿಗ್ ನ್ಯೂಸ್- ಜುಲೈ 18 ರಿಂದ ಈ ಆಹಾರ ಪದಾರ್ಥಗಳ ಬೆಲೆ ಹೆಚ್ಚಳ, ವಿತ್ತ ಸಚಿವರ ಘೋಷಣೆ

ಗೋಧಿ ವಿತರಣೆಯನ್ನು ಸ್ಥಗಿತಗೊಳಿಸಿದ ಸರ್ಕಾರ
ಈ ಬಾರಿ ಕಡಿಮೆ ಗೋಧಿ ಸಂಗ್ರಹಣೆಯಿಂದಾಗಿ, ಮೋದಿ ಸರ್ಕಾರವು ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಮೇ ನಿಂದ ಸೆಪ್ಟೆಂಬರ್ ವರೆಗೆ ಹಂಚಿಕೆ ಮಾಡಬೇಕಾದ ಗೋಧಿಯ ಕೋಟಾವನ್ನು ಕಡಿಮೆ ಮಾಡಿದೆ. ಈ ಬದಲಾವಣೆಯ ನಂತರ ಯುಪಿ, ಬಿಹಾರ ಮತ್ತು ಕೇರಳಕ್ಕೆ ಗೋಧಿ ಸಿಗುತ್ತಿಲ್ಲ. ದೆಹಲಿ, ಗುಜರಾತ್, ಜಾರ್ಖಂಡ್, ಎಂಪಿ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದಲ್ಲೂ ಗೋಧಿ ಕೋಟಾವನ್ನು ಕಡಿತಗೊಳಿಸಲಾಗಿದೆ.

ಇದನ್ನೂ ಓದಿ-Bullet Train Ticket Price: ದೇಶದಲ್ಲಿ ಶೀಘ್ರವೇ ಆರಂಭವಾಗಲಿರುವ ಬುಲೆಟ್ ಟ್ರೈನ್ ನಲ್ಲಿ ಎಷ್ಟಿರಲಿದೆ ಟಿಕೆಟ್ ದರ ?

ಗೋಧಿ ಕೊರತೆಯಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ
ಈ ಬದಲಾವಣೆಯನ್ನು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಗಾಗಿ ಮಾತ್ರ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಸರಕಾರ ನೀಡಿರುವ ಮಾಹಿತಿ ಪ್ರಕಾರ ಗೋಧಿಯ ಬದಲಿಗೆ ಸುಮಾರು 55 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ. ಸರ್ಕಾರದ ಈ ಯೋಜನೆಯ ಲಾಭವನ್ನು ನೀವೂ ಪಡೆದರೆ, ನೀವು ಪೋರ್ಟಬಿಲಿಟಿ ಚಲನ್ ಮೂಲಕ ಅಕ್ಕಿ ತೆಗೆದುಕೊಳ್ಳಲು ಸಾಧ್ಯವಾಗಲಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News