Gold Price Today : ಮತ್ತೆ ಹೆಚ್ಚಳವಾಯಿತು ಚಿನ್ನದ ಬೆಲೆ , ಬೆಳ್ಳಿ ಬೆಲೆ ಕೂಡಾ ಏರಿಕೆ

Gold Price Today: ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಇಂದು  ಹಳದಿ ಲೋಹದ ಬೆಲೆಯಲ್ಲಿ  110 ರೂಗಳ ಏರಿಕೆಯಾಗಿದೆ.  ಚಿನ್ನ ಬೆಳ್ಳಿ ಖರೀದಿ ಮಾಡುವುದಾದರೆ ಮೊದಲು ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು. 

Written by - Ranjitha R K | Last Updated : Jun 7, 2022, 08:10 AM IST
  • ಚಿನ್ನದ ಬೆಲೆಯಲ್ಲಿ ಏರಿಕೆ
  • ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಳ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಮತ್ತೆ ಹೆಚ್ಚಳವಾಯಿತು ಚಿನ್ನದ ಬೆಲೆ , ಬೆಳ್ಳಿ ಬೆಲೆ ಕೂಡಾ ಏರಿಕೆ  title=
Gold Price Today (file photo)

ಬೆಂಗಳೂರು : Gold Price Today : ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಲೇ ಇದೆ. ನಿನ್ನೆ ಕೇವಲ 10 ರೂ.ಯಷ್ಟು ಇಳಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ದಾಖಲಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 110 ರೂ.ಗಳಷ್ಟು ಏರಿಕೆ ಕಂಡು ಬಂದಿದೆ.   10 ಗ್ರಾಂ ಚಿನ್ನದ ಬೆಲೆ  52,200 ರೂ. ಆಗಿದೆ.  ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 47, 850  ರೂ. ಆಗಿದೆ.  

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ  22 ಕ್ಯಾರೆಟ್ ಚಿನ್ನದ ಬೆಲೆ  24 ಕ್ಯಾರೆಟ್ ಚಿನ್ನದ ಬೆಲೆ 
 ಚೆನ್ನೈ 47,900 52,250
ದೆಹಲಿ 47,850 52,200
ಮುಂಬಯಿ     47,850 52,200
ಕೋಲ್ಕತ್ತಾ  47,850 52,200
ಬೆಂಗಳೂರು 47,850 52,200
ಹೈದರಾಬಾದ್  47,850 52,200
ಕೇರಳ  47,850 52,200

ಇದನ್ನೂ ಓದಿ : Ration Card Update: ಇನ್ಮುಂದೆ ಪಡಿತರ ಅಂಗಡಿ ಮಾಲೀಕರು ಪಡಿತರ ತೂಕದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ, ಬಂದಿದೆ ಹೊಸ ನಿಯಮ

ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆಯಲ್ಲಿಯೂ ಏರಿಕೆಯಾಗಿದೆ. ನಿನ್ನೆ ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಏರಿಕೆ ಕಂಡು ಬಂದಿರಲಿಲ್ಲ.  ಆದರೆ ಇಂದು ಬೆಳ್ಳಿ ಬೆಲೆಯಲ್ಲಿ 700 ರೂ.ಗಳಷ್ಟು ಹೆಚ್ಚಳ ಕಂಡು ಬಂದಿದೆ. ಈ ಲೇಖನ ಬರೆಯುವ ಹೊತ್ತಿಗೆ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ. 

ನಗರ  ಇಂದಿನ ಬೆಳ್ಳಿ ಬೆಲೆ 
 ಚೆನ್ನೈ 68,500
ದೆಹಲಿ 62,400
ಮುಂಬಯಿ     62,400
ಕೋಲ್ಕತ್ತಾ  62,400
ಬೆಂಗಳೂರು 62,400
ಹೈದರಾಬಾದ್  62,400
ಕೇರಳ  62,400

ಇದನ್ನೂ ಓದಿ : RBI Currency Update: ಇನ್ಮುಂದೆ ನೋಟುಗಳ ಮೇಲೆ ಮಹಾತ್ಮಾ ಗಾಂಧಿ ಛಾಯಾಚಿತ್ರ ಇರುವುದಿಲ್ಲವೇ? ಆರ್ಬಿಐ ಹೇಳಿದ್ದೇನು?

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ?
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ ಗುಡ್ ರಿಟರ್ನ್ ನಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

Trending News