IRCTC Credit Card: ರೈಲ್ವೆ ಹೊರ ತಂದಿದೆ ಕ್ರೆಡಿಟ್ ಕಾರ್ಡ್, ಟಿಕೆಟ್ ಬುಕಿಂಗ್ ಮೇಲೆ ಸಿಗಲಿದೆ ಭಾರೀ ರಿಯಾಯಿತಿ

IRCTC BoB RuPay ಕಾಂಟಾಕ್ಟ್ ಲೆಸ್  ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಭಾರತೀಯ ರೈಲ್ವೆಯಲ್ಲಿ ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು IRCTC ಅಧಿಕಾರಿಗಳು ತಿಳಿಸಿದ್ದಾರೆ. 

Written by - Ranjitha R K | Last Updated : Feb 22, 2022, 09:00 AM IST
  • ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ
  • IRCTC ಆರಂಭಿಸಿದೆ ಕ್ರೆಡಿಟ್ ಕಾರ್ಡ್
  • ಟಿಕೆಟ್ ಬುಕಿಂಗ್ ಮೇಲೆ ಸಿಗಲಿದೆ ಭಾರೀ ರಿಯಾಯಿತಿ
IRCTC Credit Card: ರೈಲ್ವೆ ಹೊರ ತಂದಿದೆ ಕ್ರೆಡಿಟ್ ಕಾರ್ಡ್, ಟಿಕೆಟ್ ಬುಕಿಂಗ್ ಮೇಲೆ ಸಿಗಲಿದೆ ಭಾರೀ ರಿಯಾಯಿತಿ  title=
IRCTC ಆರಂಭಿಸಿದೆ ಕ್ರೆಡಿಟ್ ಕಾರ್ಡ್ (file photo)

ನವದೆಹಲಿ : IRCTC Co-Branded Credit Card: ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ ಒಂದಿದೆ. ಭಾರತೀಯ ರೈಲ್ವೇಯ ಕೇಟರಿಂಗ್ ಮತ್ತು ಟಿಕೆಟಿಂಗ್ ಘಟಕ (IRCTC) ತನ್ನ ಬಳಕೆದಾರರಿಗಾಗಿ ಕೋ -ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ (Co-Branded Credit Card) ಅನ್ನು ಬಿಡುಗಡೆ ಮಾಡಿದೆ. ಇದನ್ನು NPCI ಮತ್ತು BOB ಫೈನಾನ್ಶಿಯಲ್ ಸೊಲ್ಯೂಷನ್ಸ್ ಸಹಯೋಗದಲ್ಲಿ ಪ್ರಾರಂಭಿಸಲಾಗಿದೆ. ಈ ಕಾರ್ಡ್‌ ಮೂಲಕ ಪ್ರಯಾಣಿಕರು ಅನೇಕ ಪ್ರಯೋಜನಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. IRCTC ವೆಬ್‌ಸೈಟ್‌ ಮೂಲಕ ಪ್ರತಿದಿನ 60 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುತ್ತಾರೆ.

IRCTC ನೀಡಿದೆ ಮಾಹಿತಿ :  
IRCTC BoB RuPay ಕಾಂಟಾಕ್ಟ್ ಲೆಸ್  ಕ್ರೆಡಿಟ್ ಕಾರ್ಡ್ ವಿಶೇಷವಾಗಿ ಭಾರತೀಯ ರೈಲ್ವೆಯಲ್ಲಿ (Indian Railway) ನಿರಂತರವಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು IRCTC ಅಧಿಕಾರಿಗಳು ತಿಳಿಸಿದ್ದಾರೆ. ಅಂತಹ ಪ್ರಯಾಣಿಕರಿಗಾಗಿ ಇದನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. BOB ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ (BFSL) ಬ್ಯಾಂಕ್ ಆಫ್ ಬರೋಡಾದ (BOB) ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.

ಇದನ್ನೂ ಓದಿ :   DL Rule : DL ಕಳೆದು ಹೋಗಿದೆಯಾ? ಹಾಗಿದ್ರೆ, ಮನೆಯಲ್ಲಿ ಕುಳಿತು 'ಡೂಪ್ಲಿಕೇಟ್ ಪ್ರತಿ' ಹೀಗೆ ಪಡೆಯಿರಿ

ಈ ಕ್ರೆಡಿಟ್ ಕಾರ್ಡ್‌ನಿಂದ ಈ ಅದ್ಭುತ ಪ್ರಯೋಜನಗಳು : 
- ಈ ಕ್ರೆಡಿಟ್ ಕಾರ್ಡ್ (Credit card) ಅನ್ನು ಇಂಧನ ಮತ್ತು ದಿನಸಿ ಮತ್ತು ಇತರ ವಸ್ತುಗಳನ್ನು ಖರೀದಿಸಲು ಕೂಡಾ ಬಳಸಬಹುದು.
-ಜೆಸಿಬಿ ನೆಟ್‌ವರ್ಕ್ ಮೂಲಕ ಅಂತರರಾಷ್ಟ್ರೀಯ ವ್ಯಾಪಾರಿಗಳು ಮತ್ತು ಎಟಿಎಂಗಳಲ್ಲಿ ವಹಿವಾಟು ನಡೆಸಲು ಕಾರ್ಡ್ ಅನ್ನು ಬಳಸಬಹುದು.
- IRCTC ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಈ ಕ್ರೆಡಿಟ್ ಕಾರ್ಡ್‌ನೊಂದಿಗೆ 1AC, 2AC, 3AC, CC, ಅಥವಾ EC ಬುಕಿಂಗ್ ಮಾಡುವ ಬಳಕೆದಾರರು 40 ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ ( (per Rs 100 spent).
-ಎಲ್ಲಾ ರೈಲು ಟಿಕೆಟ್ ಬುಕಿಂಗ್‌ಗಳಲ್ಲಿ (Ticket booking)1% ವಹಿವಾಟು ಶುಲ್ಕ ವಿನಾಯಿತಿಯನ್ನು ಕಾರ್ಡ್ ನೀಡುತ್ತದೆ. 
-ಹೆಚ್ಚುವರಿಯಾಗಿ, ಕಾರ್ಡ್ ನೀಡಿದ 45 ದಿನಗಳ ಒಳಗೆ  1,000 ರೂ ಅಥವಾ ಅದಕ್ಕಿಂತ ಹೆಚ್ಚಿನ ಖರೀದಿಯನ್ನು ಮಾಡಿದರೆ 1,000 ಬೋನಸ್ ಬಹುಮಾನ ಅಂಕಗಳನ್ನು ಪಡೆಯಬಹುದು. 
-ಈ ಕಾರ್ಡ್ ಅನ್ನು ಬಳಸುವುದರಿಂದ, ದಿನಸಿ ಮತ್ತು ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳಲ್ಲಿ ನಾಲ್ಕು ರಿವಾರ್ಡ್ ಪಾಯಿಂಟ್‌ಗಳನ್ನು ಮತ್ತು ಇತರ ವಿಭಾಗಗಳಲ್ಲಿ ಎರಡು ರಿವಾರ್ಡ್ ಪಾಯಿಂಟ್‌ಗಳು ಸಿಗುತ್ತದೆ. 
-ಕಾರ್ಡುದಾರರು ಪ್ರತಿ ವರ್ಷ ಪಾಲುದಾರ ರೈಲ್ವೇ ಲಾಂಜ್‌ಗೆ ನಾಲ್ಕು ಕಂಪ್ಲಿಮೆಂಟರಿ   ವಿಸಿಟ್ ಮಾಡುವುದು ಸಾಧ್ಯವಾಗುತ್ತದೆ. ಇದರ ಮೂಲಕ, ಗ್ರಾಹಕರು ಭಾರತದ ಎಲ್ಲಾ ಪೆಟ್ರೋಲ್ ಪಂಪ್‌ಗಳಲ್ಲಿ ಒಂದು ಶೇಕಡಾ ಇಂಧನ ಸರ್ಚಾರ್ಜ್ ಮನ್ನಾವನ್ನು ಸಹ ಪಡೆಯುತ್ತಾರೆ.

ಇದನ್ನೂ ಓದಿ :   Edible Oil Prices : ಸಾಮಾನ್ಯ ಜನತೆಗೆ ಸಿಹಿ ಸುದ್ದಿ : ಅಡುಗೆ ಎಣ್ಣೆ ಬೆಲೆಯಲ್ಲಿ ಭಾರೀ ಇಳಿಕೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News