PPF Account Benefits: SBI ಗ್ರಾಹಕರು PPF ಖಾತೆ ತೆರೆದರೆ ತೆರಿಗೆಯಲ್ಲಿ ಬಂಪರ್ ವಿನಾಯಿತಿ!

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್‌ಲೈನ್‌ನಲ್ಲಿ PPF ಖಾತೆಯನ್ನು ತೆರೆಯಲು ಸಹ ಅನುಮತಿಸುತ್ತದೆ. ಹಾಗಾದರೆ ತಡ ಏಕೆ? ಇಂದೇ ನಿಮ್ಮ ಪಿಪಿಎಫ್ ಖಾತೆ ತೆರೆಯಿರಿ ತೆರಿಗೆ ಉಳಿತಾಯದ ಬಂಪರ್ ಲಾಭವನ್ನು ಪಡೆದುಕೊಳ್ಳಿರಿ.

Written by - Zee Kannada News Desk | Last Updated : Feb 8, 2022, 04:25 PM IST
  • ಈಗ SBI ಗ್ರಾಹಕರು ಮನೆಯಲ್ಲಿಯೇ ಕುಳಿತು PPF ಖಾತೆಯನ್ನು ತೆರೆಯಬಹುದು
  • PPF ಖಾತೆ ತೆರೆಯುವ ಮೂಲಕ ತೆರಿಗೆಯಲ್ಲಿ ಬಂಪರ್ ವಿನಾಯಿತಿ ಪಡೆದುಕೊಳ್ಳಿರಿ
  • PPFನಲ್ಲಿ ದೀರ್ಘಕಾಲ ಹೂಡಿಕೆ ಮಾಡುವುದರಿಂದ ನಿಮಗೆ ಹೆಚ್ಚುವರಿ ಲಾಭ ಸಿಗಲಿದೆ
PPF Account Benefits: SBI ಗ್ರಾಹಕರು PPF ಖಾತೆ ತೆರೆದರೆ ತೆರಿಗೆಯಲ್ಲಿ ಬಂಪರ್ ವಿನಾಯಿತಿ!  title=
PPF ಬಂಪರ್ ಪ್ರಯೋಜನಗಳನ್ನು ನೀಡುತ್ತದೆ

ನವದೆಹಲಿ: ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿರಿಸಲು PPF ಅತ್ಯುತ್ತಮ ಆಯ್ಕೆಯಾಗಿದೆ. ಇದು ಪ್ರತಿ ಹಂತದಲ್ಲಿಯೂ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಗಳಿಸಿದ ಆದಾಯ, ಮೆಚ್ಯೂರಿಟಿ ಮೊತ್ತ ಮತ್ತು ಒಟ್ಟಾರೆ ಬಡ್ಡಿ ಸಂಪೂರ್ಣವಾಗಿ ತೆರಿಗೆ ಮುಕ್ತ(PPF Account Benefits)ವಾಗಿರುತ್ತದೆ. ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ 1,50,000 ಹೂಡಿಕೆಯ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯುತ್ತೀರಿ.

PPF ಬಂಪರ್ ಪ್ರಯೋಜನಗಳನ್ನು ನೀಡುತ್ತದೆ

ಪ್ರಸ್ತುತ ಪಿಪಿಎಫ್ ಖಾತೆ(PPF Benefits)ಯು ಶೇ.7.1ರಷ್ಟು ಬಡ್ಡಿದರವನ್ನು ನೀಡುತ್ತಿದೆ. ತಜ್ಞರ ಪ್ರಕಾರ PPFನಲ್ಲಿ ದೀರ್ಘಕಾಲ ಹೂಡಿಕೆ ಮಾಡುವುದರಿಂದ ನಿಮಗೆ ಹೆಚ್ಚುವರಿ ಲಾಭ ಸಿಗಲಿದೆ. ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಆನ್‌ಲೈನ್‌ನಲ್ಲಿ PPF ಖಾತೆ(SBI Customer)ಯನ್ನು ತೆರೆಯಲು ಸಹ ಅನುಮತಿಸುತ್ತದೆ. ಹಾಗಾದರೆ ತಡ ಏಕೆ? ಇಂದೇ ನಿಮ್ಮ ಪಿಪಿಎಫ್ ಖಾತೆಯನ್ನು ತೆರೆಯಿರಿ.

ಇದನ್ನೂ ಓದಿ: Salary Account: ನೀವು ಸಂಬಳ ಖಾತೆಯನ್ನು ಹೊಂದಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ

ಅಗತ್ಯ ದಾಖಲೆಗಳು

ಪಿಪಿಎಫ್ ಖಾತೆ(PPF Account) ತೆರೆಯಲು ದಾಖಲಾತಿ ನಮೂನೆ, ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ, PAN ಕಾರ್ಡ್ ನಕಲು, ID ಪುರಾವೆ ಮತ್ತು ನಿವಾಸದ ಪುರಾವೆಗಳು ಅಗತ್ಯವಿರುತ್ತದೆ. ಬ್ಯಾಂಕಿನ KYC ಮಾನದಂಡಗಳ ಪ್ರಕಾರ ಖಾತೆಯನ್ನು ತೆರೆಯಲು ನೀವು ಈ ದಾಖಲೆಗಳನ್ನು ಹೊಂದಿರಬೇಕು. ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐನಲ್ಲಿ ಪಿಪಿಎಫ್ ಖಾತೆ ತೆರೆಯುವ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಿರಿ.

SBI PPF ಖಾತೆ ತೆರೆಯುವ ಪ್ರಕ್ರಿಯೆ

1. ಇದಕ್ಕಾಗಿ ನಿವು ಮೊದಲು SBI ನೆಟ್ ಬ್ಯಾಂಕಿಂಗ್ ಪೋರ್ಟಲ್ - onlinesbi.com ಗೆ ಹೋಗಿ ಮತ್ತು ಲಾಗಿನ್ ಆಗಿರಿ.

2. ಈಗ ‘Request and Enquiries’ ಟ್ಯಾಬ್‌ಗೆ ಹೋಗಿ ಮತ್ತು ‘New PPF Account’ ಆಯ್ಕೆಯನ್ನು ಕ್ಲಿಕ್ ಮಾಡಿ.

3. ನಂತರ ‘Apply for PPF Account’ ಅನ್ನು ಕ್ಲಿಕ್ ಮಾಡಿ.

4. ಈಗ ನಿಮ್ಮ ಹೆಸರು, ಪ್ಯಾನ್ ಮತ್ತು ವಿಳಾಸದಂತಹ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿರಿ.

5. ಇದರ ನಂತರ ಖಾತೆಯನ್ನು ತೆರೆಯಬೇಕಾದ ಬ್ಯಾಂಕ್‌ನ ಶಾಖೆಯ ಕೋಡ್ ಅನ್ನು ನಮೂದಿಸಿ.

6. ಈಗ ನಿಮ್ಮ ನಾಮಿನಿ ವಿವರಗಳನ್ನು ನಮೂದಿಸಿ ಮತ್ತು Submit ಮಾಡಿ

7. ಇದರ ನಂತರ ನೀವು OTP ಪಡೆಯುತ್ತೀರಿ ಅದನ್ನು ನೀವು ನಮೂದಿಸಬೇಕು ಮತ್ತು ಫಾರ್ಮ್ ಅನ್ನು ಮುದ್ರಿಸಲು ‘Print PPF Account Online Application’ ಕ್ಲಿಕ್ ಮಾಡಿ.

8. ನಿಮ್ಮ ಕೆವೈಸಿ(Know Your Customer) ದಾಖಲೆಗಳು ಮತ್ತು ಛಾಯಾಚಿತ್ರಗಳೊಂದಿಗೆ 30 ದಿನಗಳಲ್ಲಿ ಶಾಖೆಗೆ ಭೇಟಿ ನೀಡಬೇಕು. SBI ಪ್ರಕಾರ ಅರ್ಜಿ ಸಲ್ಲಿಸಿದ ದಿನಾಂಕದಿಂದ 30 ದಿನಗಳ ನಂತರ ಖಾತೆ ತೆರೆಯುವ ಫಾರ್ಮ್ ಅನ್ನು ಡಿಲೀಟ್ ಮಾಡಲಾಗುತ್ತದೆ.

ಇದನ್ನೂ ಓದಿ: Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : 9 ದಿನ ಬ್ಯಾಂಕ್ ಬಂದ್ - ಫುಲ್ ಲಿಸ್ಟ್  ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News