ನವದೆಹಲಿ: ಹಬ್ಬದ ಋತುವಿನಲ್ಲಿ ಕುಟುಂಬ ಮತ್ತು ಸಂಬಂಧಿಕರ ನಡುವಿನ ಸಂಭಾಷಣೆ ದೀರ್ಘವಾಗಿರುತ್ತದೆ. ಈ ದಿನಗಳಲ್ಲಿ ಹೆಚ್ಚಿನ ಜನರು ಸಾಮಾನ್ಯ ಕರೆಗಿಂತ ಹೆಚ್ಚು ವಾಟ್ಸಾಪ್ ಕರೆ ಮಾಡುತ್ತಾರೆ. ಆದ್ದರಿಂದ ಇಂದು ನಾವು ನಿಮಗೆ ಏರ್ಟೆಲ್, ಜಿಯೋ ಮತ್ತು VI (ವೊಡಾಫೋನ್-ಐಡಿಯಾ) ನ ಕೆಲವು ಅಗ್ಗದ ಮತ್ತು ಧಮಾಕ ಪ್ಲಾನ್ಗಳ ಬಗ್ಗೆ ಹೇಳುತ್ತಿದ್ದೇವೆ. ಕಡಿಮೆ ಬೆಲೆಯ ಹೊರತಾಗಿಯೂ ಇವು ನಿಮಗೆ ಸಾಕಷ್ಟು ಡೇಟಾವನ್ನು ನೀಡುತ್ತವೆ.
ಏರ್ಟೆಲ್ ಪ್ರಿಪೇಯ್ಡ್ ಯೋಜನೆ ಕೇವಲ 298 ರೂ.ಗಳಿಗೆ:-
ಮೊಬೈಲ್ ಸೇವಾ ಪೂರೈಕೆದಾರರು ಪ್ರಿಪೇಯ್ಡ್ ಗ್ರಾಹಕರಿಗಾಗಿ ಹೊಸ ಕೊಡುಗೆಗಳನ್ನು ತರುತ್ತಿದ್ದಾರೆ. ಏತನ್ಮಧ್ಯೆ 300 ರೂಪಾಯಿಗಳಿಗಿಂತ ಕಡಿಮೆ ಇರುವ ಏರ್ಟೆಲ್ನ (Airtel) ಅತ್ಯುತ್ತಮ ಯೋಜನೆಯನ್ನು ನಾವು ನಿಮಗೆ ಹೇಳುತ್ತೇವೆ. ಏರ್ಟೆಲ್ನ 298 ರೂ.ಗಳ ಯೋಜನೆ ಅತ್ಯುತ್ತಮ ಪ್ರಿಪೇಯ್ಡ್ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಪ್ರತಿದಿನ 2 ಜಿಬಿ ಡೇಟಾದೊಂದಿಗೆ 100 ಎಸ್ಎಂಎಸ್ ಲಭ್ಯವಿರುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ನೀವು ಯಾವುದೇ ನೆಟ್ವರ್ಕ್ನಲ್ಲಿ ಕರೆ ಮಾಡಲು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಅಲ್ಲದೆ ಈ ಯೋಜನೆಯಡಿಯಲ್ಲಿ ಏರ್ಟೆಲ್ ಎಕ್ಟ್ರೀಮ್ (Airtel Xtreme) ಮತ್ತು ವಿಂಕ್ ಮ್ಯೂಸಿಕ್ಗೆ (Wynk Music) ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ.
ಜಿಯೋದ 249 ರೂ.ಗಳ ಪ್ರಿಪೇಯ್ಡ್ ಯೋಜನೆ :-
ಅದೇ ರೀತಿ ರಿಲಯನ್ಸ್ ಜಿಯೋ (JIO) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 249 ರೂ.ಗಳ ಯೋಜನೆಯನ್ನು ತಂದಿದೆ. ಇದರಲ್ಲಿ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾದೊಂದಿಗೆ 100 ಎಸ್ಎಂಎಸ್ ಪಡೆಯುತ್ತಾರೆ. ಯಾವುದೇ ನೆಟ್ವರ್ಕ್ನಲ್ಲಿ ಕರೆ ಮಾಡಲು ಬಳಕೆದಾರರಿಗೆ 1000 ಎಫ್ಯುಪಿ ನಿಮಿಷಗಳನ್ನು ನೀಡಲಾಗುತ್ತದೆ. ಇತರ ಯೋಜನೆಗಳಂತೆ, ಕಂಪನಿಯು ಜಿಯೋ-ಟು-ಜಿಯೋ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ನೀಡುತ್ತಿದೆ. ಇದಲ್ಲದೆ ಗ್ರಾಹಕರಿಗೆ ಜಿಯೋ ಆಪ್ನ (Jio App) ಉಚಿತ ಚಂದಾದಾರಿಕೆಯನ್ನು ನೀಡಲಾಗುವುದು.
Jio ಹೊಸ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಕೇವಲ 399 ರೂ.ಗಳಲ್ಲಿ ನೀಡುತ್ತಿದೆ ದೊಡ್ಡ ರಿಯಾಯಿತಿ
VI ನ 299 ರೂ.ಗಳ ಪ್ರಿಪೇಯ್ಡ್ ಯೋಜನೆ :-
ಈ ರೀಚಾರ್ಜ್ ಯೋಜನೆಯಲ್ಲಿ ವೊಡಾಫೋನ್ ಮತ್ತು ಐಡಿಯಾ (VI) ಬಳಕೆದಾರರು ಪ್ರತಿದಿನ 4 ಜಿಬಿ ಡೇಟಾದೊಂದಿಗೆ 100 ಎಸ್ಎಂಎಸ್ ಪಡೆಯುತ್ತಾರೆ. ಅಲ್ಲದೆ ಬಳಕೆದಾರರು ಯಾವುದೇ ನೆಟ್ವರ್ಕ್ನಲ್ಲಿ ಅನಿಯಮಿತ ಕರೆ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಎಂಪಿಎಲ್ನಲ್ಲಿ 125 ರೂ.ಗಳ ಬೋನಸ್ ನಗದು ಮತ್ತು ಜೊಮಾಟೊದಲ್ಲಿ (Zomato) ಆಹಾರವನ್ನು ಆರ್ಡರ್ ಮಾಡುವಾಗ 75 ರೂ.ಗಳ ಡಿಸ್ಕೌಂಟ್ ಕೂಡ ಲಭ್ಯವಿದೆ.