Post Office Saving Schemes: ನಿಮ್ಮ ಹಣವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿಯಲ್ಲಿ ಹಲವಾರು ಸಣ್ಣ ಉಳಿತಾಯ ಯೋಜನೆಗಳು ಮತ್ತು FDಗಳಿದ್ದರೂ ಪೋಸ್ಟ್ ಆಫೀಸ್‍ನ ಟೈಮ್ ಡೆಪಾಸಿಟ್ ಸ್ಕೀಮ್ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ನೀವು ಈ ಉಳಿತಾಯ ಯೋಜನೆಯಲ್ಲಿ SBI ಬ್ಯಾಂಕ್‍ಗಿಂತಲೂ ಹೆಚ್ಚಿನ ಬಡ್ಡಿ ಪಡೆಯತ್ತೀರಿ. ಈ ಯೋಜನೆಯಡಿ ನೀವು 1, 2, 3 ಮತ್ತು 5 ವರ್ಷಗಳವರೆಗೆ ಹಣ ಠೇವಣಿ ಮಾಡಬಹುದು. ಇದರಿಂದ ನೀವು ಉತ್ತಮ ಬಡ್ಡಿ ಪ್ರಯೋಜನ ಪಡೆಯಬಹುದಾಗಿದೆ.
ಶೇ.7.5ರಷ್ಟು ಬಡ್ಡಿ
SBIನಲ್ಲಿ 5 ವರ್ಷಗಳ ಸ್ಥಿರ ಠೇವಣಿಯ ಮೇಲೆ ಶೇ.6.50ರಷ್ಟು ವಾರ್ಷಿಕ ಬಡ್ಡಿ ಸಿಗುತ್ತದೆ. ಆದ್ರೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆಯಡಿ 5 ವರ್ಷಗಳ ಠೇವಣಿ ಮೇಲೆ ವಾರ್ಷಿಕ ಶೇ.7.5ರಷ್ಟು ಬಡ್ಡಿ ಪಡೆಯಬಹುದು. ನೀವು 1ರಿಂದ 3 ವರ್ಷಗಳ ಟಿಡಿ ಮಾಡಿದ್ರೆ ಶೇ.6.90ರ ದರದಲ್ಲಿ ಬಡ್ಡಿ ಪಡೆಯುತ್ತೀರಿ. ಇದಲ್ಲದೆ ನೀವು 5 ವರ್ಷಗಳವರೆಗಿನ ಠೇವಣಿಗಳ ಮೇಲೆ ಶೇ.7.5ರಷ್ಟು ಬಡ್ಡಿ ಪ್ರಯೋಜನ ಪಡೆಯುತ್ತೀರಿ.
ಇದನ್ನೂ ಓದಿ: 3D Printed Post Office: ಬೆಂಗಳೂರಿನಲ್ಲಿ ಭಾರತದ ಮೊದಲ 3D ಮುದ್ರಿತ ಅಂಚೆ ಕಚೇರಿ
114 ತಿಂಗಳಲ್ಲಿ ಹಣ ಡಬಲ್!: ನೀವು ಟೈಮ್ ಡೆಪಾಸಿಟ್ ಯೋಜನೆಯಡಿ ಹಣ ಹೂಡಿಕೆ ಮಾಡಿದ್ರೆ ಶೇ.7.5ರ ಬಡ್ಡಿಯೊಂದಿಗೆ ನಿಮ್ಮ ಹಣ ದ್ವಿಗುಣಗೊಳ್ಳಲು 9 ವರ್ಷ 6 ತಿಂಗಳು ಅಂದರೆ 114 ತಿಂಗಳು ಬೇಕಾಗುತ್ತದೆ.
ಠೇವಣಿ ಮಾಡಬೇಕಾದ ಮೊತ್ತ : 5 ಲಕ್ಷ ರೂ.
ಈ ಯೋಜನೆಯಡಿ ಸಿಗುವ ಬಡ್ಡಿ: ಶೇ.7.5ರಷ್ಟು
ಮೆಚ್ಯೂರಿಟಿ ಅವಧಿ: 5 ವರ್ಷಗಳು
ಮೆಚ್ಯೂರಿಟಿ ಮೊತ್ತ: 7,24,974 ರೂ.
ಬಡ್ಡಿ ಪ್ರಯೋಜನ: 2,24,974 ರೂ.
ಯಾರು ಖಾತೆ ತೆರೆಯಬಹುದು?: ಈ ಯೋಜನೆಯಡಿ ಪ್ರತಿಯೊಬ್ಬರೂ ಸಹ ಖಾತೆ ತೆರೆಯಬಹುದು. 3 ವಯಸ್ಕರು ಒಟ್ಟಾಗಿ ಜಂಟಿ ಖಾತೆ (ಟೈಮ್ ಡೆಪಾಸಿಟ್ ಜಂಟಿ ಖಾತೆ) ತೆರೆಯಬಹುದು. ಅದೇ ರೀತಿ ಪೋಷಕರು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.
ಟೈಮ್ ಡೆಪಾಸಿಟ್'ನ ಪ್ರಯೋಜನ: ಟೈಮ್ ಡೆಪಾಸಿಟ್ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿಯ ಪ್ರಯೋಜನವಿದೆ. ಇದರ ಖಾತೆ ತೆರೆಯುವಾಗ ನಾಮನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಇದರ ಜೊತೆಗೆ ಅಕಾಲಿಕ ಹಿಂಪಡೆಯುವಿಕೆಗೆ ದಂಡ ವಿಧಿಸಲಾಗುತ್ತದೆ.
ಇದನ್ನೂ ಓದಿ: ಹಿರಿಯ ನಾಗರಿಕರಿಗೊಂದು ಭಾರಿ ಸಂತಸದ ಸುದ್ದಿ, ಈ 4 ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆಯೂ ಇದೆಯಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.